ಕೀರ್ತಿ ಗೌಡದು ದರಿದ್ರ ಕಾಲು: ಛೀಮಾರಿ ಹಾಕಿದ ದುನಿಯಾ ವಿಜಯ್ ಪತ್ನಿ ನಾಗರತ್ನ.!

''ಕೀರ್ತಿ ಗೌಡ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆಕೆಯಿಂದ ನನಗೆ ಹಾಗೂ ನನ್ನ ಮಕ್ಕಳಿಗೆ ತೊಂದರೆ ಆಗುತ್ತಿದೆ'' ಎಂದು ನಿನ್ನೆಯಷ್ಟೇ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಇಂದು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

''ದುನಿಯಾ ವಿಜಯ್ ಗೆ ಬುದ್ಧಿ ಹೇಳೋರು ಯಾರೂ ಇಲ್ಲ. ಕೀರ್ತಿ ಗೌಡದು ದರಿದ್ರ ಕಾಲು. ಅವಳಿಂದಲೇ ಇಷ್ಟೆಲ್ಲ ಆಗ್ತಿರೋದು'' ಎಂದು ಛೀಮಾರಿ ಹಾಕಿದ್ದಾರೆ ನಾಗರತ್ನ.

''ಕೀರ್ತಿ ಗೌಡ ಬಂದಿರೋದು ದುಡ್ಡಿಗಾಗಿ. ಸಂಸಾರ ಮಾಡಲು ಅಲ್ಲ. ಆಕೆ ನಮ್ಮ ಸಹವಾಸಕ್ಕೆ ಬಾರದೆ ಮನೆ ಬಿಟ್ಟು ಹೋದರೆ ಸರಿ. ಇಲ್ಲಾಂದ್ರೆ, ನಾನು ಸರಿಯಾದ ಕ್ರಮ ಕೈಗೊಳ್ಳುವೆ'' ಅಂತ ನಾಗರತ್ನ ಗುಡುಗಿದ್ದಾರೆ.

ಮಾಧ್ಯಮಗಳ ಮುಂದೆ ಇಂದು ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಏನೇನೆಲ್ಲಾ ಹೇಳಿದರು ಅಂತ ನೀವೇ ಓದಿರಿ.. ಫೋಟೋ ಸ್ಲೈಡ್ ಗಳಲ್ಲಿ...

ದುನಿಯಾ ವಿಜಯ್ ಗೆ ಬುದ್ಧಿ ಹೇಳೋರು ಯಾರೂ ಇಲ್ಲ.!

ದುನಿಯಾ ವಿಜಯ್ ಗೆ ಬುದ್ಧಿ ಹೇಳೋರು ಯಾರೂ ಇಲ್ಲ.!

''ನಾನು ನೋಡುತ್ತಲೇ ಇದ್ದೇನೆ. ಸುಮಾರು ಎರಡು ವರ್ಷಗಳಿಂದ ಇದೇ ಆಗಿದೆ. ಬರೀ ಕೇಸ್, ಕಂಪ್ಲೇಂಟ್, ಪೊಲೀಸ್ ಅನ್ನೋದೇ ಆಯ್ತು. ಅವರಿಗೆ (ದುನಿಯಾ ವಿಜಯ್) ಬುದ್ಧಿ ಹೇಳೋರು ಯಾರೂ ಇಲ್ಲ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಬುದ್ದಿ ಹೇಳಲು ಹೋಗಿ ನಾನು ಕೆಟ್ಟವಳಾದೆ

ಬುದ್ದಿ ಹೇಳಲು ಹೋಗಿ ನಾನು ಕೆಟ್ಟವಳಾದೆ

''ಬುದ್ಧಿ ಹೇಳಲು ನಾನು ಎಷ್ಟೋ ಪ್ರಯತ್ನ ಪಟ್ಟು ಕೆಟ್ಟವಳಾದೆ. ಮನೆಯಲ್ಲಿ ದೊಡ್ಡವರು ಇದ್ದಾರೆ. ಅವರಾದರೂ ತಿಳುವಳಿಕೆ ಹೇಳಬೇಕು. ಆದ್ರೆ, ಅವರು ಹೇಳುತ್ತಿಲ್ಲ. ಹಾದಿ ತಪ್ಪಿಸುತ್ತಿದ್ದಾರೆ. ಕೊನೆಗೆ ಯಾರು ಬೀದಿಗೆ ಬರ್ತಾರೆ.? ಯಾರು ಹಾಳಾಗುತ್ತಾರೆ ಹೇಳಿ.?'' ಎಂದು ಪ್ರಶ್ನಿಸುತ್ತಾರೆ ನಾಗರತ್ನ

ಕೀರ್ತಿ ಗೌಡ ಬಂದಿರೋದು ದುಡ್ಡಿಗೆ

ಕೀರ್ತಿ ಗೌಡ ಬಂದಿರೋದು ದುಡ್ಡಿಗೆ

''ಈಗ ಯಾರೋ ಬಂದಿರೋಳು (ಕೀರ್ತಿ ಗೌಡ), ಸ್ವಲ್ಪ ದಿನ ಇರ್ತಾಳೆ, ಆಮೇಲೆ ಹೋಗ್ತಾಳೆ. ಅವಳು ಬಂದಿರೋದು ದುಡ್ಡಿಗೆ. ಸಂಸಾರ ಮಾಡಲು ಯಾರೂ ಬರಲ್ಲ. ನಮಗೆ ಮೂರು ಮಕ್ಕಳಿವೆ. ನಮಗೆ ವಿಧಿ ಇಲ್ಲ. ನಾವು ಸಂಸಾರ ಮಾಡಲೇಬೇಕು'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಮೂರು ತಿಂಗಳು ಮಕ್ಕಳನ್ನ ಮಾತನಾಡಿಸಿರಲಿಲ್ಲ.!

ಮೂರು ತಿಂಗಳು ಮಕ್ಕಳನ್ನ ಮಾತನಾಡಿಸಿರಲಿಲ್ಲ.!

''ಕೀರ್ತಿ ಗೌಡ ಬಂದ ಮೇಲೆ ಮೂರು ತಿಂಗಳು ನನ್ನ ಮಕ್ಕಳನ್ನ ದುನಿಯಾ ವಿಜಯ್ ಮಾತನಾಡಿಸಲಿಲ್ಲ. ನನ್ನ ಮಗುಗೆ ಹುಷಾರಿರಲಿಲ್ಲ. ರಾಧಾ ಕೃಷ್ಣ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೆ. ತುಂಬಾ ಸೀರಿಯಸ್ ಆಗಿತ್ತು. ನೋಡಲು ಒಬ್ಬರೂ ಬರಲಿಲ್ಲ. ಮಕ್ಕಳು ನನ್ನನ್ನೂ ಬಿಡುವ ಹಾಗಿಲ್ಲ. ಅವರನ್ನೂ (ದುನಿಯಾ ವಿಜಯ್) ಬಿಡುವ ಹಾಗಿಲ್ಲ. ಮಧ್ಯದಲ್ಲಿ ಸಿಲುಕಿದ್ದಾರೆ. ಮಕ್ಕಳು ತುಂಬಾ ನೊಂದುಕೊಂಡಿದ್ದಾರೆ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಮಕ್ಕಳಿಗೆ ತೊಂದರೆ ಆದರೆ...

ಮಕ್ಕಳಿಗೆ ತೊಂದರೆ ಆದರೆ...

''ಅವಳಿಂದ (ಕೀರ್ತಿ ಗೌಡ) ಮಕ್ಕಳಿಗೂ ತುಂಬಾ ತೊಂದರೆ ಆಗುತ್ತಿದೆ. ಇವತ್ತು ನನಗೆ ಹೊಡೆದಿದ್ದಾರೆ. ನಾಳೆ ಮಕ್ಕಳಿಗೂ ಹೊಡೆಯಬಹುದು. ನನ್ನ ಮಕ್ಕಳಿಗೆ ಸ್ವಲ್ಪ ತೊಂದರೆ ಆದರೂ ನಾನು ಮಾತ್ರ ಯಾರನ್ನೂ ಸುಮ್ಮನೆ ಬಿಡುವುದಿಲ್ಲ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಕೀರ್ತಿ ಗೌಡದು ದರಿದ್ರ ಕಾಲು

ಕೀರ್ತಿ ಗೌಡದು ದರಿದ್ರ ಕಾಲು

''ನನ್ನ ಅತ್ತೆ-ಮಾವ ಬುದ್ಧಿ ಹೇಳಬೇಕಿತ್ತು. ಆದ್ರೆ, ಅವರು ಹೇಳುತ್ತಿಲ್ಲ. ಆ ಕೀರ್ತಿ ಗೌಡದು ದರಿದ್ರ ಕಾಲು ಅನ್ಸುತ್ತೆ. ಅವಳಿಂದಲೇ ಇಷ್ಟೆಲ್ಲ ಆಗಿದ್ದು. ದುನಿಯಾ ಮಾಡುವಾಗ ನನ್ನ ಗಂಡ ಎಷ್ಟು ಕಷ್ಟಪಟ್ಟರು ಅನ್ನೋದು ನನಗೆ ಗೊತ್ತು. ಇವತ್ತು ಅವರ ಹತ್ತಿರ ದುಡ್ಡಿದೆ ಅಂತ ಬಂದು ಸೇರ್ಕೊಂಡರೆ, ಆಕೆಗೆ ಯಾವುದರಲ್ಲಿ ಹೊಡೆಯಬೇಕು.? ನಮ್ಮ ಸಹವಾಸಕ್ಕೆ ಆಕೆ ಬಾರದೆ, ನಮ್ಮ ಮನೆ ಬಿಟ್ಟು ಆಕೆ ಹೊರಗೆ ಹೋದರೆ ಸರಿ. ಇಲ್ಲಾಂದ್ರೆ, ಸರಿಯಾದ ಕ್ರಮ ನಾನು ತೆಗೆದುಕೊಳ್ಳುತ್ತೇನೆ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

ಕಿಟ್ಟಿ ಜೊತೆ ಗಲಾಟೆ ಆಗಿದ್ಯಾಕೆ ಅನ್ನೋದು ಗೊತ್ತಿಲ್ಲ

ಕಿಟ್ಟಿ ಜೊತೆ ಗಲಾಟೆ ಆಗಿದ್ಯಾಕೆ ಅನ್ನೋದು ಗೊತ್ತಿಲ್ಲ

''ಪಾನಿಪೂರಿ ಕಿಟ್ಟಿ ಒಳ್ಳೆಯ ಮನುಷ್ಯ. ವಿಜಯ್ ಜೊತೆಗೆ ತುಂಬಾ ಚೆನ್ನಾಗಿ ಇದ್ದರು. ಪಾನಿಪೂರಿ ಕಿಟ್ಟಿ ತಮ್ಮ ಮನೆಯಿಂದ ವಿಜಯ್ ಗೆ ಊಟ ತಂದು ಕೊಡ್ತಿದ್ರು. ಯಾಕೆ ಗಲಾಟೆ ಆಯ್ತು ಅನ್ನೋದು ನನಗೆ ಗೊತ್ತಿಲ್ಲ'' - ನಾಗರತ್ನ, ದುನಿಯಾ ವಿಜಯ್ ಪತ್ನಿ

More from Filmibeat

English summary
Duniya Vijay wife Nagaratna lashes out against Keerthi Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X