For Quick Alerts
  ALLOW NOTIFICATIONS  
  For Daily Alerts

  ಪುನೀತ್ ನಟನೆಯ 'ಯುವರತ್ನ' ಚಿತ್ರಕ್ಕೆ ಶುಭಕೋರಿದ ದುನಿಯಾ ವಿಜಯ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದಲ್ಲಿ ತಯಾರಾಗಿರುವ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ನಟ ದುನಿಯಾ ವಿಜಯ್ ಫೇಸ್‌ಬುಕ್‌ನಲ್ಲಿ ಶುಭಕೋರಿದ್ದಾರೆ.

  'ಕೊವಿಡ್‌ನಿಂದಾಗಿ ದಿಗ್ಭ್ರಾಂತವಾಗಿದ್ದ ಸ್ಯಾಂಡಲ್‌ವುಡ್‌ ಬಾಕ್ಸ್‌ಆಫೀಸ್‌ಗೆ ಮರು ಚಾಲನೆ ನೀಡಿದ್ದು, ಧ್ರುವ ಸರ್ಜಾ ಅವರ 'ಪೊಗರು' ಮತ್ತು ದರ್ಶನ್ ನಟನೆಯ 'ರಾಬರ್ಟ್‌'. ಎರಡು ಚಿತ್ರಗಳಿಗೆ ಕನ್ನಡ ಪ್ರೇಕ್ಷಕರು ತೋರಿದ ಪ್ರೀತಿ ಅಗಾಧವಾದದ್ದು. ಇದರಿಂದ ಕನ್ನಡ ಸಿನಿಮಾವನ್ನು ಜನ ಕೈಬಿಡುವುದಿಲ್ಲ ಎಂಬುದು ನನಗೆ ಕನ್ಫರ್ಮ್ ಆಯಿತು.

  ಏಪ್ರಿಲ್ 10 ರಂದು ಹೊಸಪೇಟೆಯಲ್ಲಿ 'ಸಲಗ' ಸಂಭ್ರಮಏಪ್ರಿಲ್ 10 ರಂದು ಹೊಸಪೇಟೆಯಲ್ಲಿ 'ಸಲಗ' ಸಂಭ್ರಮ

  'ಈಗ ಅದೇ ಸಾಲಿನಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ 'ಯುವರತ್ನ' ಸಿನಿಮಾ ಏಪ್ರಿಲ್‌ 1ಕ್ಕೆ ಬಿಡುಗಡೆಯಾಗುತ್ತಿದೆ. ಕೌಟುಂಬಿಕ ಚಿತ್ರಗಳೆಂದರೆ ನಮಗೆ ಜ್ಞಾಪಕ ಬರುವುದು ಡಾ. ರಾಜ್‌ಕುಮಾರ್‌ ಅವರ ಸಿನಿಮಾಗಳು. ಅವರ ಕಿರಿಯ ಪುತ್ರ ಪುನೀತ್‌ ಅವರ ಸಿನಿಮಾಗಳು ಸಹ ಅದೇ ಸಾಲಿನಲ್ಲೇ ಮೂಡಿ ಬಂದವು.

  ಗೆಳೆಯ ಸಂತೋಷ್‌ ಆನಂದ್ ರಾಮ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಈ ಹಿಂದೆ 'ರಾಜಕುಮಾರ' ಸಿನಿಮಾ ಮೂಲಕ ಮಾಡಿದ ಮೋಡಿ ನಿಮಗೆಲ್ಲರಿಗೂ ಗೊತ್ತೇ ಇದೆ. ಈಗ ಅದೇ ಜೋಡಿ 'ಯುವರತ್ನ'ದ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದೆ. ಟ್ರೇಲರ್ ನೋಡಿದರೆ ಬಹಳ ಪರಿಣಾಮಕಾರಿ ವಿಷಯವೊಂದನ್ನು ಹೇಳಲು ಹೊರಟಿರುವಂತಿದೆ.

  ಜತಗೆ ನನ್ನ ಪ್ರೀತಿಯ ಡಾಲಿ ಇಲ್ಲೂ ತನ್ನ ಅದ್ಭುತ ನಟನೆಯನ್ನು ಮುಂದುವರೆಸಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಸಿನಿಮಾವನ್ನು ಕನ್ನಡ ಪ್ರೇಕ್ಷಕರು ಬಾಚಿ ತಬ್ಬಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಆಲ್‌ ದಿ ಬೆಸ್ಟ್‌ ಟು ಯುವರತ್ನ ಅಂಡ್ ಟೀಮ್. ಕೋವಿಡ್ ನಿಯಮಗಳನ್ನು ಪಾಲಿಸಿ ಮಾಸ್ಕ್ ಧರಿಸಿ ಚಿತ್ರಮಂದಿರಗಳಲ್ಲಿ ಸಿನಿಮಾ‌ ನೋಡಿ' ಎಂದು ದುನಿಯಾ ವಿಜಯ್ ಮನವಿ ಮಾಡಿದ್ದಾರೆ.

  Yuvarathna film team lands in trouble!

  ಅಂದ್ಹಾಗೆ, ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ಸಲಗ ಸಿನಿಮಾ ಏಪ್ರಿಲ್ 15 ರಂದು ರಿಲೀಸ್ ಆಗುತ್ತಿದೆ. ಕೆಪಿ ಶ್ರೀಕಾಂತ್ ನಿರ್ಮಿಸಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇದೆ. ಧನಂಜಯ್, ಸಂಜನಾ ಆನಂದ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Kannada Actor Duniya Vijay Wishes to Puneeth rajkumar Yuvaratna movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X