»   » ದನ ಕಾಯುವತ್ತ ನಟ ದುನಿಯಾ ವಿಜಯ್ ಚಿತ್ತ

ದನ ಕಾಯುವತ್ತ ನಟ ದುನಿಯಾ ವಿಜಯ್ ಚಿತ್ತ

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಏನೇ ಮಾಡಿದ್ರೂ, ಚಿತ್ರ ವಿಚಿತ್ರವಾಗಿ ಮಾಡ್ತಾರೆ ಅನ್ನೋದಕ್ಕೆ ಇದೋ ಇಲ್ಲಿದೆ ಹೊಚ್ಚ ಹೊಸ ಉದಾಹರಣೆ. ಜಿನುಗುವ ಮಳೆ, ಕಿಲೋಮೀಟರ್ ಗಟ್ಟಲೆ ಡೈಲಾಗ್ಸೆಲ್ಲಾ ಪಕ್ಕಕ್ಕಿಟ್ಟು, ಮಾಸ್ ಹೀರೋ ದುನಿಯಾ ವಿಜಿ ಹಿಂದೆ ಯೋಗರಾಜ್ ಭಟ್ ಬಿದ್ದಿರುವ ಸುದ್ದಿ ಹಳೆಯದ್ದೇ.

ಈಗ ಈ ಚಿತ್ರ ಸೆಟ್ಟೇರುತ್ತಿದೆ. ಚಿತ್ರಕ್ಕೆ ಶೀರ್ಷಿಕೆ ಫಿಕ್ಸ್ ಆಗಿದೆ. ಟೈಟಲ್ ಏನ್ ಗೊತ್ತಾ? 'ದನ ಕಾಯೋನು'. ಇದೇನಪ್ಪಾ ಇಂತಹ ಟೈಟಲ್ ಅಂತ ತಲೆ ಕೆರೆದುಕೊಳ್ಳಬೇಡಿ. ನೆನಪಿರಲಿ ಇದು ಭಟ್ರ ಸಿನಿಮಾ!

Duniya Vijay-Yogaraj Bhat combination new movie titled 'Dana Kayonu'

ಈ ಚಿತ್ರಕ್ಕೆ ಈ ಹಿಂದೆ 'ಬಾಸಿಂಗ ಬಲ', 'ಮಾಮರ' ಅಂತೆಲ್ಲಾ ಶೀರ್ಷಿಕೆಗಳನ್ನ ಇಡಲಾಗಿತ್ತು. ಆದ್ರೆ, ಅದ್ಯಾವುದು ಬೇಡ, 'ದನ ಕಾಯೋನು' ಬೆಸ್ಟ್ ಅಂತ ಭಟ್ರು ಫೈನಲ್ ಮಾಡಿದ್ದಾರೆ. ಹಾಗಂದ ಮಾತ್ರಕ್ಕೆ ಚಿತ್ರದಲ್ಲಿ ದುನಿಯಾ ವಿಜಿ ದನ ಕಾಯೋನಾ? ಅಂತ ನಮ್ಮನ್ನ ಕೇಳ್ಬೇಡಿ. ಈ ಪ್ರಶ್ನೆಗೆ ಭಟ್ರು ಉತ್ತರ ಕೊಟ್ಟಿಲ್ಲ. [ಇದೇ ಮೊದಲ ಬಾರಿಗೆ 'ಕರಿಚಿರತೆ'ಗೆ ಭಟ್ ಆಕ್ಷನ್ ಕಟ್]

Duniya Vijay-Yogaraj Bhat combination new movie titled 'Dana Kayonu'

ಆರ್. ಎಸ್. ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ 'ದನ ಕಾಯೋನು' ಸಿನಿಮಾದಲ್ಲಿ ದುನಿಯಾ ವಿಜಿ ಪಾತ್ರ, ಬಾಕಿ ತಾರಾಬಳಗ ಇನ್ನೂ ಸಸ್ಪೆನ್ಸ್ ನಲ್ಲಿದೆ. ನಾಳೆ (ಜೂನ್ 9) 'ದನ ಕಾಯೋನು' ಚಿತ್ರದ ಮುಹೂರ್ತ ನಡೆಯಲಿದೆ.

English summary
Kannada Actor Duniya Vijay starrer Yogaraj Bhat directorial new movie is titled as 'Dana Kayonu'. The movie is all set to go on Floors tomorrow (June 9th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada