Bheema box office collection day 3: 'ಭೀಮ'ನ ಬಜೆಟ್ ಎಷ್ಟು? 3 ದಿನಕ್ಕೆ ಗಳಿಸಿದ್ದೆಷ್ಟು?

ಚಿತ್ರಮಂದಿರಗಳಲ್ಲಿ 'ಭೀಮ'ನ ಆರ್ಭಟ ಜೋರಾಗಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ವರ್ಷದ ಮೊದಲ ಕನ್ನಡ ಬ್ಲಾಕ್‌ಬಸ್ಟರ್ ಸಿನಿಮಾ ಎನ್ನುವ ಪಟ್ಟವೂ ಸಿಕ್ಕಿದೆ. ದುನಿಯಾ ವಿಜಯ್ ನಿರ್ದೇಶನ ಹಾಗೂ ನಟನೆಗೆ ಫುಲ್ ಮಾರ್ಕ್ಸ್ ಸಿಕ್ಕಿದೆ.

ಮಾಸ್ ಪ್ರೇಕ್ಷಕರನ್ನೇ ಮನಸ್ಸಿನಲ್ಲಿಟ್ಟುಕೊಂಡು ಕಟ್ಟಿಕೊಟ್ಟಿರುವ ಸಿನಿಮಾ 'ಭೀಮ'. ಸೆನ್ಸಾರ್ ಮಂಡಳಿ ಕೂಡ 'ಎ' ಸರ್ಟಿಫಿಕೇಟ್ ಕೊಟ್ಟಿದೆ. ಕಲಾಸಿಪಾಳ್ಯ, ಜೆ.ಸಿ ರಸ್ತೆ ಸುತ್ತಮುತ್ತಲ ನೈಜ ಚಿತ್ರಣವನ್ನು ವಿಜಿ ತೆರೆಗೆ ತಂದಿದ್ದಾರೆ. ಆ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಒಂದಷ್ಟು ತಪ್ಪುಗಳ ಹೊರತಾಗಿಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಚರಣ್ ರಾಜ್‌ ಸಂಗೀತ ಚಿತ್ರಕ್ಕೆ ದೊಡ್ಡ ಬಲ ತಂದುಕೊಟ್ಟಿದೆ.

Duniya vijay s Bheema box office collection day 3 early reports

ಶುಕ್ರವಾರವೇ 'ಭೀಮ' ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ಶನಿವಾರ, ಭಾನುವಾರ ಸಿನಿಮಾ ನೋಡಲು ಪ್ರೇಕ್ಷಕರು ಮುಗಿಬಿದ್ದರು. ಪರಿಣಾಮ 'ಭೀಮ'ನ ಗಳಿಕೆ ಹೆಚ್ಚಾಯಿತು. ಈ ವರ್ಷ 'ಉಪಾಧ್ಯಕ್ಷ', 'ಯುವ' ಸೇರಿ ಒಂದೆರಡು ಸಿನಿಮಾ ಹಾಕಿದ ಬಂಡವಾಳ ವಾಪಸ್ ಪಡೆದಿದ್ದವು. ಇನ್ನುಳಿದಂತೆ ಬಂದ 100 ಸಿನಿಮಾಗಳಲ್ಲಿ ಬಹುತೇಕ ಸಿನಿಮಾಗಳು ಸೋತು ಸುಣ್ಣವಾಗಿವೆ.

ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಾರೋ ಇಲ್ಲವೋ ಎನ್ನುವ ಗೊಂದಲದಲ್ಲೇ 'ಭೀಮ' ಕೂಡ ಬಂದಿದ್ದ. ಆದರೆ ಒಳ್ಳೆ ಸಿನಿಮಾಗಳನ್ನು ಪ್ರೇಕ್ಷಕರು ಕೈ ಬಿಡಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ದೊಡ್ಡ ಚಿತ್ರಕ್ಕಾಗಿ ಕಾಯುತ್ತಿದ್ದ ಪ್ರೇಕ್ಷಕರು ಡ್ರಗ್ಸ್ ಮಾಫಿಯಾ ವಿರುದ್ಧ 'ಭೀಮ'ನ ಸಮರ ನೋಡಲು ಮುಗಿಬಿದ್ದಿದ್ದಾರೆ.

'ಭೀಮ' ಫಸ್ಟ್ ವೀಕೆಂಡ್ ಕಲೆಕ್ಷನ್ ಎಷ್ಟು ಎನ್ನುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಚಿತ್ರತಂಡ ಕೂಡ ಕಲೆಕ್ಷನ್ ಲೆಕ್ಕ ತೆಗೆಸುತ್ತಿದೆ. ಒಂದು ಅಂದಾಜಿನ ಪ್ರಕಾರ ಮೊದಲ 3 ದಿನದಲ್ಲಿ ಸಿನಿಮಾ 12ರಿಂದ 14 ಕೋಟಿ ರೂ. ಕೊಳ್ಳೆ ಹೊಡೆದಿದೆ ಎನ್ನಲಾಗ್ತಿದೆ. ಶುಕ್ರವಾರ 4.1 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ ಸಿನಿಮಾ 3. 90 ಕೋಟಿ ರೂ. ಹಾಗೂ ಭಾನುವಾರ 4.3 ಕೋಟಿ ಸೇರಿ ಗಳಿಕೆ 12 ಕೋಟಿ ದಾಟಿದೆ ಎಂದು ಹೇಳಲಾಗ್ತಿದೆ.

Duniya vijay s Bheema box office collection day 3 early reports

ಅಂದಾಜು 17 ರಿಂದ 18 ಕೋಟಿ ರೂ. ಬಜೆಟ್‌ನಲ್ಲಿ 'ಭೀಮ' ಸಿನಿಮಾ ನಿರ್ಮಾಣವಾಗಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ ಭರ್ಜರಿ ಬೆಳೆ ತೆಗೆದಿದೆ. ಶೀಘ್ರದಲ್ಲೇ ಸಿನಿಮಾ ಲಾಭದ ಮುಖ ನೋಡಲಿದೆ. ಇನ್ನು ಸೋಮವಾರ 'ಭೀಮ'ನಿಗೆ ಬಹಳ ನಿರ್ಣಾಯಕ. ವಾರದ ದಿನ ಆಗಿರುವುದರಿಂದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಾರಾ? ಎನ್ನುವ ಲೆಕ್ಕಾಚಾರವೂ ನಡೀತಿದೆ. ಆದರೆ 3 ದಿನಗಳಲ್ಲಿ ಸಿಕ್ಕ ರೆಸ್ಪಾನ್ಸ್ ನೋಡುತ್ತಿದ್ದರು ಸೋಮವಾರವೂ ಸಿನಿಮಾ ಗೆಲ್ಲುವುದು ಬಹುತೇಕ ಖಚಿತ ಎನ್ನಬಹುದು.

ಬುಕ್‌ಮೈ ಶೋನಲ್ಲಿ ಕೂಡ 'ಭೀಮ' ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಬಿ, ಸಿ ಸೆಂಟರ್‌ಗಳಿಗೆ ಹೇಳಿಮಾಡಿಸಿದಂತ ಸಿನಿಮಾ. ಹಾಗಾಗಿ ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ಒಳ್ಳೆ ಕಲಕ್ಷನ್ ಆಗ್ತಿದೆ. ಬುಕ್‌ಮೈ ಶೋಗಿಂತ ಜನ ನೇರವಾಗಿ ಚಿತ್ರಮಂದಿರಗಳಿಗೆ ಹೋಗಿ ಟಿಕೆಟ್ ಖರೀದಿಸುತ್ತಿದ್ದಾರೆ. ಒಟ್ಟಾರೆ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕಂಡು ನಿರ್ಮಾಪಕರು ಖುಷಿಯಾಗಿದ್ದಾರೆ.

ಇನ್ನು ದುನಿಯಾ ವಿಜಯ್ ಮಾತ್ರವಲ್ಲದೇ ಚಿತ್ರದಲ್ಲಿ ನಟಿಸಿರುವ ಹೊಸ ಪ್ರತಿಭೆಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲೇಡಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಪ್ರಿಯಾ ಶಠಮರ್ಷಣ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಗಿಲಿಗಿಲಿ ಚಂದ್ರ, ಶುಂಠಿ, ಮಲ್ಲ ಹೀಗೆ ಚಿತ್ರವಿಚಿತ್ರ ಪಾತ್ರಗಳು ಚಪ್ಪಾಳೆ ಗಿಟ್ಟಿಸುತ್ತಿವೆ. ಗಾಂಜಾ, ಡ್ರಗ್ಸ್ ಚಟಕ್ಕೆ ಬಿದ್ದ ಮೀಸೆ ಮೂಡದ ಹುಡುಗರು, ಅವರವರ ನಡುವೆ ಕಿರಿಕ್‌ಗಳು ಎಲ್ಲವೂ ತೆರೆಗೆ ಬಂದಿದೆ. ಒಟ್ಟಾರೆ ದುನಿಯಾ ವಿಜಯ್ ಬೆಂಗಳೂರಿನ ಹೃದಯ ಭಾಗದಲ್ಲೇ ಇರುವ ಒಂದು ವಿಚಿತ್ರ ಕತ್ತಲ ಪ್ರಪಂಚವನ್ನು ಅನಾವರಣ ಮಾಡಿ ಗೆದ್ದಿದ್ದಾರೆ.

More from Filmibeat

English summary
Bheema First Weekend Box Office Collections;
Read more about: vijay sandalwood box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X