Landlord Teaser: ದುನಿಯಾ ವಿಜಯ್ 'ಲ್ಯಾಂಡ್‌ಲಾರ್ಡ್' ಜಬರ್ದಸ್ತ್ ಟೀಸರ್ ಬಂತು; ರಿಲೀಸ್ ಡೇಟ್ ಫಿಕ್ಸ್

ದುನಿಯಾ ವಿಜಯ್ ಹಾಗೂ ಜಡೇಶ್ ಹಂಪಿ ಕಾಂಬಿನೇಷನ್‌ 'ಲ್ಯಾಂಡ್‌ಲಾರ್ಡ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಚಿತ್ರದ ಟೀಸರ್ ಹೊರಬಿದ್ದಿದೆ. ವಿಜಯ್ ಆರ್ಭಟದ ಝಲಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.

ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ಲ್ಯಾಂಡ್‌ಲಾರ್ಡ್' ಸಿನಿಮಾ ನಿರ್ಮಾಣವಾಗಿದೆ. 'ಗುರುಶಿಷ್ಯರು' ಹಾಗೂ 'ಜಂಟಲ್‌ಮನ್' ಸಿನಿಮಾಗಳ ಸರದಾರ ಈ ಬಾರಿ ಮತ್ತೊಂದು ಹಳ್ಳಿ ಸೊಗಡಿನ ಕಥೆ ಹೇಳು ಬರ್ತಿದ್ದಾರೆ. ದುನಿಯಾ ವಿಜಯ್ ರೀತಿಯ ಮಾಸ್ ಹೀರೊ ಜೊತೆ ಸೇರಿ ಒಂದೊಳ್ಳೆ ಕಥೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

Duniya Vijay s Landlord Teaser Roars with Power A Kolar-Based Action Drama Directed by Jadesh Hampi

ರಚಿತಾ ರಾಮ್ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಶಿಶಿರ್, ರಿತನ್ಯಾ ವಿಜಯ್, ಅವಿನಾಶ್, ರಾಕೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಜಬರ್ದಸ್ತ್ ಆಕ್ಷನ್ ಸನ್ನಿವೇಶ ಸೇರಿಸಿ ಖಡಕ್ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. "ಪುರಾಣದ ರಾಮ-ಕೃಷ್ಣರು ದೇವರಾದರು. ಪಂಚತಂತ್ರದ ಹುಲಿ ಸಿಂಹಗಳು ದಂತಕಥೆಯಾದವು. ಇತಿಹಾಸದ ರಾಜರುಗಳು ನೆನಪಿನಲ್ಲಿ ಉಳಿದರು. ಆಳಿದರರೆದು ಅಳಿಯದೇ ಉಳಿದವನೊಬ್ಬ ಮಾರಿಯಾದನು. ತಲೆ ಎತ್ತಿ ಚರಿತ್ರೆಯಾದರನು" ಎನ್ನುವ ಖಡಕ್ ಡೈಲಾಗ್ ಹಿನ್ನೆಲೆಯಲ್ಲಿ 'ಲ್ಯಾಂಡ್‌ಲಾರ್ಡ್' ಟೀಸರ್ ಶುರುವಾಗುತ್ತದೆ.

ತಲೆ ತಗ್ಸಾಕಾ, ತಲೆ ಬಾಗ್ಸಾಕಾ ವ್ಯತ್ಯಾಸ ಇದೆ. ಸ್ವಾಭಿಮಾನದ ಮುಂದೆ ತಲೆ ಬಾಗೋದು ನನ್ನ ರಕ್ತದಾಗಿ ಇದೆ, ಸ್ವಾರ್ಥಿಗಳ ಮುಂದೆ ತಲೆ ತಗ್ಗಿದೋದು ನನ್ನ ಒಂದು ಹನಿ ಬೆವರಾಗೂ ಇಲ್ಲ" ಎಂದು ದುನಿಯಾ ವಿಜಯ್ ಹೇಳಿರುವ ಡೈಲಾಗ್ ಹೈಲೆಟ್ ಆಗಿದೆ. ಬಿಳಿ ಗಡ್ಡ ಮೀಸೆ ಉದ್ದ ಕೂದಲಿಗೆ ಚಿಕ್ಕದಾಗಿ ಜಡೆ ಕಟ್ಟಿದ ಲುಕ್‌ನಲ್ಲಿ ಪಂಚೆ, ಅಂಗಿ ತೊಟ್ಟು ದುನಿಯಾ ವಿಜಯ್ ಮಿಂಚಿದ್ದಾರೆ.

ಟೀಸರ್ ನೋಡ್ತಿದ್ರೆ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಚಿತ್ರದಲ್ಲಿರುವುದು ಗೊತ್ತಾಗುತ್ತಿದೆ. ಆಳುವವರ ಆರ್ಭಟದ ವಿರುದ್ಧ ತಿರುಗಿ ಬೀಳುವ ನಾಯಕನ ಕಥೆ ಇದು. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಭರ್ಜರಿ ಬಿಜಿಎಂ ಜೊತೆಗೆ 'ಲ್ಯಾಂಡ್‌ಲಾರ್ಡ್' ಟೀಸರ್ ಕಟ್ ಮಾಡಿದ್ದಾರೆ. ಮೊದಲ ನೋಟದಲ್ಲೇ ಝಲಕ್ ಗಮನ ಸೆಳೆದಿದೆ. ಜನವರಿ 23ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು 3 ತಿಂಗಳು ಕಾಯಬೇಕಾ? ಎಂದು ದುನಿಯಾ ವಿಜಯ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.

"ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ" ಎನ್ನುವ ಟ್ಯಾಗ್‌ಲೈನ್ ಚಿತ್ರಕ್ಕಿದೆ. ಸ್ವಾಮಿ ಜಿ ಗೌಡ ಛಾಯಾಗ್ರಹಣ ಚಿತ್ರಕ್ಕಿದ್ದು ಹೇಮಂತ್ ಗೌಡ ಹಾಗೂ ಸತ್ಯಪ್ರಕಾಶ್ ಬಂಡವಾಳ ಹೂಡಿದ್ದಾರೆ. 90ರ ದಶಕದ ಕಾಲಘಟ್ಟದಲ್ಲಿ ಕೋಲಾರ ಭಾಗದಲ್ಲಿ ನಡೆಯುವ ಕಥೆಯನ್ನು ಚಿತ್ರದಲ್ಲಿ ಹೇಳುತ್ತಿದ್ಧಾರೆ. ನೈಜ ಘಟನೆಗಳಿಂದ ಪ್ರೇರಣೆಗೊಂಡು ಜಡೇಶ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಕೋಲಾರ ಶೈಲಿಯ ಕನ್ನಡ ಭಾಷೆಯನ್ನು ಚಿತ್ರಕ್ಕಾಗಿ ಬಳಸಿಕೊಂಡಿದ್ದಾರೆ. ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ ಚಿತ್ರಕ್ಕಿದೆ.

More from Filmibeat

Read more about: vijay sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X