»   » ದುನಿಯಾ ವಿಜಿ ಜೊತೆ ಅಖಾಡಕ್ಕೆ ಇಳಿಯಲು 'ಸಾಮ್ರಾಟ್' ಸಿದ್ಧ

ದುನಿಯಾ ವಿಜಿ ಜೊತೆ ಅಖಾಡಕ್ಕೆ ಇಳಿಯಲು 'ಸಾಮ್ರಾಟ್' ಸಿದ್ಧ

Posted By:
Subscribe to Filmibeat Kannada

ದುನಿಯಾ ವಿಜಿ 'ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾದ ನಂತರ ಯಾವುದೇ ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಕಾರಣ ಇಷ್ಟೇ ಸ್ಯಾಂಡಲ್ ವುಡ್ ನ ಕರಿ ಚಿರತೆ ಕುಸ್ತಿ ಸಿನಿಮಾಗಾಗಿ ದುನಿಯಾ ವಿಜಿ ತಮ್ಮ ಎಲ್ಲಾ ಸಮಯವನ್ನು ಮುಡಿಪಾಗಿ ಇಟ್ಟಿದ್ದಾರೆ.

ದುನಿಯಾ ವಿಜಿ ಹಾಗೂ ಅವರ ಪುತ್ರ ಸಾಮ್ರಾಟ್ ಇಬ್ಬರು ಒಟ್ಟಿಗೆ ಅಭಿನಯ ಮಾಡುತ್ತಿರುವ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಸಾಮ್ರಾಟ್ ಕುಸ್ತಿ ಸಿನಿಮಾ ಮೂಲಕ ಚಿತ್ರರಂಗವನ್ನ ಪ್ರವೇಶ ಮಾಡುತ್ತಿದ್ದಾರೆ.

ದುನಿಯಾ ವಿಜಯ್ ಜೊತೆ 'ಕುಸ್ತಿ' ಅಖಾಡಕ್ಕಿಳಿದ ಮಗ 'ಸಾಮ್ರಾಟ್'

ಕುಸ್ತಿ ಹೆಸರಿಗೆ ತಕ್ಕಂತೆ ಈಗಾಗಲೇ ದುನಿಯಾ ವಿಜಯ್ ಕಟ್ಟುಮಸ್ತಾದ ದೇಹವನ್ನು ಹೊಂದಿದ್ದಾರೆ. ಆದರೆ ಸಾಮ್ರಾಟ್ ಇನ್ನು ಚಿಕ್ಕ ವಯಸ್ಸಿನವನು. ಕುಸ್ತಿಗಾಗಿ ಹೇಗೆ ತಯಾರಾಗುತ್ತಾನೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಆದರೆ ಸಾಮ್ರಾಟ್ ಯಾರಿಗೂ ಕಡಿಮೆ ಇಲ್ಲ. ಮುಂದಿನ ದಿನಗಳಲ್ಲಿ ಅಪ್ಪನನ್ನೂ ಮೀರಿಸಿದರೂ ಅನುಮಾನವಿಲ್ಲ.

ಅಖಾಡಕ್ಕೆ ಇಳಿಯಲು ವಿಜಯ್ ಸಜ್ಜು

ನಟ ದುನಿಯಾ ವಿಜಿ ಅಭಿನಯದ ಮುಂದಿನ ಸಿನಿಮಾ ಕುಸ್ತಿಗಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಾನಿ ಚಿತ್ರದ ನಂತರ ದುನಿಯಾ ವಿಜಯ್ ಯಾವುದೇ ಸಿನಿಮಾಗಳನ್ನ ಒಪ್ಪಿಕೊಳ್ಳದೇ ಕುಸ್ತಿ ಚಿತ್ರಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.

ತಪ್ಪುತ್ತಿಲ್ಲ ವರ್ಕ್ ಔಟ್

ದುನಿಯಾ ವಿಜಿ ಇದೇ ಸಿನಿಮಾ ಅಂತಲ್ಲ. ಪ್ರತಿ ಚಿತ್ರಕ್ಕೂ ಕೆಲ ಸಮಯ ತೆಗೆದುಕೊಂಡು ಪಾತ್ರಕ್ಕೆ ತಕ್ಕಂತೆ ರೆಡಿಯಾಗುತ್ತಾರೆ. ಅದೇ ರೀತಿ ಕುಸ್ತಿ ಚಿತ್ರಕ್ಕಾಗಿ ಪ್ರತಿ ದಿನ ಐದು ಗಂಟೆಗಳ ಕಾಲ ವರ್ಕ್ ಔಟ್ ಶುರು ಮಾಡಿದ್ದಾರೆ.

ಅಖಾಡಕ್ಕೆ ಇಳಿಯಲು ಸಾಮ್ರಾಟ್ ಸಿದ್ಧ

ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಕೂಡ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಅಪ್ಪನ ಜೊತೆಯಲ್ಲಿ ಪ್ರತಿ ನಿತ್ಯ ನಾಲ್ಕು ಗಂಟೆಗಳ ಕಾಲ ವರ್ಕ್ ಔಟ್ ಮಾಡುತ್ತಿದ್ದಾರೆ.

ಸುದ್ದಿ ಬಿಟ್ಟು ಕೊಡದ ದುನಿಯಾ ವಿಜಿ

ಸದ್ಯ ಕಥೆಯನ್ನ ತಯಾರಿ ಮಾಡಿಸುತ್ತಿರುವ ದುನಿಯಾ ವಿಜಿ ಯಾವ ನಿರ್ದೆಶಕರು ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವುದನ್ನ ತಿಳಿಸಿಲ್ಲ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಯಾರೆಲ್ಲಾ ಅಭಿನಯ ಮಾಡುತ್ತಾರೆ ಎಂಬುದನ್ನು ಗುಟ್ಟಾಗಿಯೇ ಉಳಿಸಿದ್ದಾರೆ.

English summary
Kannada actor Duniya Viji's son samraat workout daily four hours in gym for Kusthi movie. Duniya Vijay and samraat acting in Kusthi movie

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X