»   » ಜೊತೆಗೆ ಹಾಡಿದ್ರು, ಈಗ ಜೊತೆಗೆ ಅಭಿನಯ : ಒಂದೇ ಸಿನಿಮಾದಲ್ಲಿ ಗಣೇಶ್ ಮತ್ತು ವಿಜಿ

ಜೊತೆಗೆ ಹಾಡಿದ್ರು, ಈಗ ಜೊತೆಗೆ ಅಭಿನಯ : ಒಂದೇ ಸಿನಿಮಾದಲ್ಲಿ ಗಣೇಶ್ ಮತ್ತು ವಿಜಿ

Posted By:
Subscribe to Filmibeat Kannada

ತೆರೆಯ ಹಿಂದೆ ಸ್ನೇಹಿತರಾಗಿರೋ ಅದೆಷ್ಟೋ ಕಲಾವಿದರು ತೆರೆಯ ಮೇಲೆ ಒಟ್ಟಿಗೆ ಅಭಿನಯಿಸಿರೋ ಉದಾಹರಣೆಗಳು ಕನ್ನಡ ಸಿನಿಮಾರಂಗದಲ್ಲಿ ಬಹಳಷ್ಟು ಸಿಗುತ್ತೆ. ಸ್ಯಾಂಡಲ್ ವುಡ್ ನಲ್ಲಿ ಬಹುಕಾಲದಿಂದ ಕುಚುಕುಗಳಾಗಿರೋ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಟ ದುನಿಯಾ ವಿಜಿ ಒಂದೇ ಚಿತ್ರದಲ್ಲಿ ಅಭಿನಯಿಸೋದು ಕನ್ಫರ್ಮ್ ಆಗಿದೆ.

ದುನಿಯಾ ವಿಜಿ ಅಭಿನಯದ 'ದನಕಾಯೋನು' ಸಿನಿಮಾದ ಒಂದು ಹಾಡಿಗೆ ಗಣೇಶ್ ಧ್ವನಿ ನೀಡಿದ್ದರು. ಆ ಸಮಯದಲ್ಲೇ ಇಬ್ಬರು ಒಂದೇ ಚಿತ್ರದಲ್ಲಿ ಅಭಿನಯಿಸುವುದಾಗಿ ಸೂಚನೆಯನ್ನೂ ನೀಡಿದ್ದರು. ಈಗ ಗಣೇಶ್ ಮತ್ತು ವಿಜಿ ಒಂದೇ‌ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಅಧಿಕೃತವಾಗಿದೆ.

ತೆರೆ ಮೇಲೆ ಕುಚುಕುಗಳ ಜೋಡಿ

ಗಣೇಶ್ ಮತ್ತು‌ ದುನಿಯಾ ಇಬ್ಬರು ನಟರು ಏಕಕಾಲದಲ್ಲಿ ಚಿತ್ರರಂಗಕ್ಕೆ ನಾಯಕರಾಗಿ ಪರಿಚಯವಾದವರು. ಅಷ್ಟೇ ಅಲ್ಲದೆ ಇಬ್ಬರು ತಮ್ಮ ಸಿನಿಮಾ ಮೂಲಕ ಟ್ರೆಂಡ್ ಸೆಟ್ ಮಾಡಿದವರು. ಈಗ ಇಬ್ಬರು ನಟರು ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ಪ್ರೀತಂ ಗುಬ್ಬಿ ನಿರ್ದೇಶನ

ಗಣೇಶ್ ಹಾಗೂ ದುನಿಯಾ ವಿಜಿ ಇಬ್ಬರಿಗೂ ಸಿನಿಮಾ ನಿರ್ದೇಶನ ಮಾಡಿ ಸಕ್ಸಸ್ ಪಡೆದಿರೋ ಡೈರೆಕ್ಟರ್ ಪ್ರೀತಂಗುಬ್ಬಿ ಗಣೇಶ್ ಹಾಗೂ ದುನಿಯಾ ವಿಜಿ ಅಭಿನಯದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಕಥೆ ಬರೆದಿರೋ ಪ್ರೀತಂ ಇನ್ನ ಕೆಲವೇ ದಿನಗಳಲ್ಲಿ ಪ್ರೀ ಪ್ರೊಡಕ್ಷನ್ ಕೆಲಸ ಶುರು ಮಾಡಲಿದ್ದಾರೆ.

ಯಾವಾಗ ಶುರುವಾಗಲಿದೆ ಸಿನಿಮಾ ?

ಸದ್ಯ ಪ್ರೀತಂಗುಬ್ಬಿ ದುನಿಯಾ ವಿಜಿ ಅಭಿನಯದ 'ಜಾನಿ‌ ಜಾನಿ ಎಸ್ ಪಪ್ಪಾ' ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ್ 'ಆರೆಂಜ್' ಚಿತ್ರದಲ್ಲಿ ಅಭಿನಯಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ‌ ಎರಡು ಚಿತ್ರಗಳ ಶೂಟಿಂಗ್ ಕಂಪ್ಲೀಟ್ ಆದ ನಂತರ ಗಣೇಶ್ ಹಾಗೂ ವಿಜಿ ಅಭಿನಯದ ‌ಚಿತ್ರ ಪ್ರಾರಂಭವಾಗಲಿದೆ.

'ಗೋಲ್ಡನ್ ಐ ಮೂವೀಸ್' ನಲ್ಲಿ ನಿರ್ಮಾಣ

ಈಗಾಗಲೇ ನಿರ್ಮಾಪಕನಾಗಿ ಸಿನಿಮಾ ಮಾಡಿರೋ ಗಣೇಶ್, ಗೆಳೆಯರಿಬ್ಬರು ಅಭಿನಯಿಸುತ್ತಿರೋ ಚಿತ್ರವನ್ನ ನಿರ್ಮಾಣ ಮಾಡುವ ಸಾಧ್ಯತೆಗಳಿವೆ. ಗೋಲ್ಡನ್ ಸ್ಟಾರ್ ಜೊತೆಯಲ್ಲಿ ಮತ್ತೊಬ್ಬ ನಿರ್ಮಾಪಕ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ.

English summary
Kannada actors Duniya Viji and Ganesh both act in the same movie, Preetham Gubbi is planning to direct the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada