ಶ್ರೀಲೀಲಾ ಜೊತೆ ಅಸಭ್ಯ ವರ್ತನೆ, ಕನ್ನಡದ ಚೆಲುವೆಯ ಕೈ ಹಿಡಿದು ಬಲವಂತವಾಗಿ ಎಳೆದಾಡಿದ ಜನ..!

ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ. ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಮತ್ತೂ ಕೆಲವರು ಸೆಲ್ಫಿ ನೆಪದಲ್ಲಿ ಮಾಡಬಾರದ ಕೆಲಸ ಮಾಡಲು ಮುಂದಾಗುತ್ತಾರೆ.

ಅಭಿಮಾನದ ಸೋಗಿನಲ್ಲಿ ನಾಯಕಿಯರಿಗೆ ಕಿಸ್ ಕೊಡುವುದು, ಮುಟ್ಟಬಾರದ ಜಾಗವನ್ನೆಲ್ಲ ಮುಟ್ಟುವ ಪ್ರಯತ್ನ ಮಾಡುವುದನ್ನು ಮಾಡುತ್ತಾರೆ. ಇದಕ್ಕೆ ವೈರಲ್ ಆದ ಶ್ರೀಲೀಲಾ ವಿಡಿಯೋ ಮತ್ತೊಂದು ಸಾಕ್ಷಿ. ಹೌದು, ಎಲ್ಲರಿಗೆ ಗೊತ್ತಿರುವಂತೆ ಶ್ರೀಲೀಲಾ ಸದ್ಯ ಬಾಲಿವುಡ್ ಚಿತ್ರದಲ್ಲಿ ಆಕ್ಟ್ ಮಾಡುತ್ತಿದ್ದಾರೆ.

During filming with Kartik Aaryan Sreeleela is forcibly pulled into the crowd in a video

ಇನ್ನೂ ಹೆಸರಿಡದ ಈ ಚಿತ್ರವನ್ನು ಅನೇಕರು ಆಶಿಕಿ ಚಿತ್ರದ ಸಿಕ್ವೆಲ್ ಎಂದುಕೊಂಡಿದ್ದಾರೆ. ಚಿತ್ರಕ್ಕೆ ಆಶಿಕಿ 3 ಎಂದು ನಾಮಕರಣವನ್ನು ಕೂಡ ಮಾಡಿದ್ದಾರೆ. ಶ್ರೀಲೀಲಾ ಎದುರು ಕಾರ್ತಿಕ್ ಆರ್ಯನ್ ಈ ಚಿತ್ರದಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ವಾರಕ್ಕೆ ಕಡಿಮೆ ಅಂದರೂ ಎರಡು ಮೂರು ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತಿವೆ.

ಇಂತಹ ಆಶಿಕಿ 3 ಚಿತ್ರದ ಚಿತ್ರೀಕರಣದಲ್ಲಿ ಶ್ರೀಲೀಲಾ ಭಾಗಿಯಾದಾಗ ಶ್ರೀಲೀಲಾ ಅವರನ್ನು ಕೆಲವರು ಬಲವಂತವಾಗಿ ಎಳೆದಾಡಿದ್ದಾರೆ. ಜನಜಂಗುಳಿ ಇರುವ ಸ್ಥಳದಲ್ಲಿ ಹದ್ದು ಮೀರಿ ವರ್ತಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರ ಆಕ್ರೋಶಕ್ಕೂ ಕೂಡ ಈ ವಿಡಿಯೋ ಕಾರಣವಾಗಿದೆ.

ಇನ್ನು ಈ ಘಟನೆ ನಡೆದಾಗ ಕಾರ್ತಿಕ್ ಆರ್ಯನ್, ಶ್ರೀಲೀಲಾ ಅವರಿಗಿಂತ ಮುಂದೆ ಇದ್ದರು. ಹೆಚ್ಚೇನು ಇಲ್ಲ ಒಂದೆರಡು ಹೆಜ್ಜೆ ಮುಂದೆ ಇದ್ದರೂ ಕೂಡ ಕಾರ್ತಿಕ್ ಆರ್ಯನ್‌ಗೆ ತಮ್ಮ ಬೆನ್ನ ಹಿಂದೆ ಶ್ರೀಲೀಲಾ ಅವರ ಕೈಯನ್ನು ಹಿಡಿದು ಕೆಲವರು ಎಳೆದಾಡಿದ ವಿಚಾರ ಗೊತ್ತಾಗಿಲ್ಲ. ಇದು ಅನೇಕರ ಕೋಪವನ್ನು ಇನ್ನು ಹೆಚ್ಚಿಸಿದೆ. ಕಾರ್ತಿಕ್ ಆರ್ಯನ್ ಹಿಂದೆ ನಡೆದುಕೊಂಡು ಬರುತ್ತಿದ್ದ ಶ್ರೀಲೀಲಾ ಅವರ ಕೈಯನ್ನು ಹಿಡಿದು ಎಳೆದಿದ್ದು ಯಾರು, ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎನ್ನುವ ಕೂಗು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

ಇನ್ನುಳಿದಂತೆ ಶ್ರೀಲೀಲಾ ಅವರ ಜೊತೆ ಮಾಡಲಾದ ಈ ಅಸಭ್ಯ ವರ್ತನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಾರ್ಜಿಲಿಂಗ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಬಾಲಿವುಡ್ ಮಾಧ್ಯಮಗಳು ವರದಿಯನ್ನು ಮಾಡಿವೆ.

ಇನ್ನು ಶ್ರೀಲೀಲಾ ಮತ್ತು ಕಾರ್ತಿಕ್ ಆರ್ಯನ್ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಮಾತು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿವೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಗೊತ್ತಿಲ್ಲವಾದರು ಶ್ರೀಲೀಲಾ ಈ ಹಿಂದೆ ಕಾರ್ತಿಕ್ ಆರ್ಯನ್ ಮನೆಯಲ್ಲಿ ಕಾಣಿಸಿಕೊಂಡಿದ್ದರಿಂದ, ಕಾರ್ತಿಕ್ ಆರ್ಯನ್ ತಾಯಿ ತಮ್ಮ ಮನೆಗೆ ಬರುವ ಸೊಸೆ ವೈದ್ಯೆ ಆಗಿರಬೇಕು ಎಂದು ಹೇಳಿದ ಕಾರಣದಿಂದ ಅನೇಕರು ಕಾರ್ತಿಕ್ ಆರ್ಯನ್ ಮತ್ತು ಶ್ರೀಲೀಲಾ ಪ್ರೀತಿಸುತ್ತಿದ್ದಾರೆ ಎಂದುಕೊಂಡಿದ್ದಾರೆ.

ಇದರ ನಡುವೆ ಇದೀಗ ಶ್ರೀಲೀಲಾ ಅವರ ಕೈಯನ್ನು ಹಿಡಿದು ಎಳೆದಾಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಚಿತ್ರದ ಚಿತ್ರೀಕರಣಕ್ಕೆ ಮಾಡಿದ್ದಾ ಅಥವಾ ನಿಜಕ್ಕೂ ಶ್ರೀಲೀಲಾ ಜೊತೆ ಅಸಭ್ಯವಾಗಿ ವರ್ತಿಸಲಾಗಿದೆಯಾ ಎನ್ನುವುದರ ಕುರಿತು ಸ್ಪಷ್ಟನೆ ಇನ್ನು ಸಿಗಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X