'ದುರ್ಯೋಧನ' ಅವತಾರದಲ್ಲಿ ಬಂದ ಗಣೇಶ: ಡಿ-ಬಾಸ್ ಭಕ್ತರು ಫುಲ್ ಖುಷ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕುರುಕ್ಷೇತ್ರ ಸಿನಿಮಾದ ಹವಾ ಹೆಚ್ಚಾಗಿದೆ. ಅದರಲ್ಲೂ ದರ್ಶನ್ ಅವರನ್ನ ದುರ್ಯೋಧನನಾಗಿ ನೋಡಿದ ಪ್ರೇಕ್ಷಕರು ನಿಜಕ್ಕೂ ಸಂತೋಷಗೊಂಡಿದ್ದಾರೆ.
ಈ ಖುಷಿ ಮತ್ತು ಸಂಭ್ರಮ ಗಣೇಶ ಹಬ್ಬಕ್ಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಹೌದು, ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಗೆ 'ದುರ್ಯೋಧನ' ಗಣೇಶನ ಪ್ರವೇಶವಾಗಿದೆ. ಇದು ಸಹಜವಾಗಿ ಡಿ-ಬಾಸ್ ಭಕ್ತರಿಗೆ ಸಂತಸಕ್ಕೆ ಕಾರಣವಾಗಿದೆ.
ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ದುರ್ಯೋಧನನ ಗಣೇಶ ತಯಾರು ಮಾಡಿರುವುದು ವಿಷವಾಗಿ ಗಮನ ಸೆಳೆಯುತ್ತಿದೆ.

ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ (ದುರ್ಯೋಧನ) ಕುಳಿತಿರುವ ಸ್ಟೈಲ್ ನಲ್ಲಿ ದುರ್ಯೋಧನ ಗಣೇಶವನ್ನ ಕೂಡ ಡಿಸೈನ್ ಮಾಡಲಾಗಿದೆ. ಸಿಂಹಾಸನದ ಮೇಲೆ ದುರ್ಯೋಧನ ಗಣೇಶ ಕೂತಿದ್ದು, ಕೈಯಲ್ಲಿ ಗದೆ ಹಿಡಿದುಕೊಂಡಿವರುವಂತೆ ತಯಾರು ಮಾಡಲಾಗಿದೆ.
ಬಹುಶಃ ಈ ಬಾರಿಯ ಗಣೇಶ ಉತ್ಸವದಲ್ಲಿ ದುರ್ಯೋಧನ ಗಣೇಶ ಪ್ರಮುಖ ಆಕರ್ಷಣೆಯಾಗಬಹುದು. ದುರ್ಯೋಧನ ಗಣೇಶನಂತೆ ಈಗಾಗಲೇ ಪೈಲ್ವಾನ್ ಗಣೇಶ ಕೂಡ ಮಾರುಕಟ್ಟೆಗೆ ಬಂದಿದೆ. ಜೊತೆಗೆ ಕೆಜಿಎಫ್ ಶೈಲಿಯ ಗಣೇಶ ಕೂಡ ತಯಾರಾಗಿದೆ.

ಈ ಹಿಂದೆ ಪ್ರಭಾಸ್ ಅಭಿನಯದ ಬಾಹುಬಲಿ, ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾದ ಶೈಲಿಯ ಗಣೇಶಗಳು ಭಾರಿ ಸದ್ದು ಮಾಡಿತ್ತು. ಈ ಸಲ ಕುರುಕ್ಷೇತ್ರ, ಪೈಲ್ವಾನ್ ಮತ್ತು ಕೆಜಿಎಫ್ ಸದ್ದು ಮಾಡಬಹುದು.


Click it and Unblock the Notifications











