ರಜನಿಕಾಂತ್ ಮಾತೇ ನಿಜವಾಯಿತು; ಧ್ರುವ ಸರ್ಜಾಗೆ ಒಬ್ಬರಲ್ಲ ಇಬ್ಬರು ಸವಾಲ್

ಒಮ್ಮೊಮ್ಮೆ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರದೇ ಪ್ರೇಕ್ಷಕರ ಬರ ಎದುರಾಗುತ್ತದೆ. ಕೆಲವೊಮ್ಮೆ ಒಟ್ಟೊಟ್ಟಿಗೆ ಸಿನಿಮಾಗಳು ತೆರೆಗೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುತ್ತದೆ. ಬೇಡ ಬೇಡ ಎಂದರೂ ಚಿತ್ರರಂಗದಲ್ಲಿ ಆಗಾಗ್ಗೆ ಬಾಕ್ಸಾಫೀಸ್ ಫೈಟ್ ಕಾಮನ್ ಎನ್ನುವಂತಾಗಿಬಿಟ್ಟಿದೆ.

ಮೊದಲೇ ಪ್ಯಾನ್ ಇಂಡಿಯಾ ಹೆಸರಿನಲ್ಲಿ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವುದು ತಡವಾಗುತ್ತಿದೆ. ಇಂತಹ ಹೊತ್ತಲ್ಲಿ ಕ್ಲ್ಯಾಶ್ ಯಾರಿಗೆ ಲಾಭವೋ? ಯಾರಿಗೆ ನಷ್ಟವೋ ಗೊತ್ತಿಲ್ಲ. ಆದರೆ ಈ ಬಾರಿ ದಸರಾ ಸಂಭ್ರಮದಲ್ಲಿ 3 ಬಹುನಿರೀಕ್ಷಿತ ಸಿನಿಮಾಗಳು ಐದೈದು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗಪ್ಪಳಿಸುತ್ತಿವೆ. ಇದರಲ್ಲಿ ಒಂದು ಕನ್ನಡ ಸಿನಿಮಾ ಕೂಡ ಇದೆ.

Dussehra 2024 box-office clash Rajinikanth versus Dhuva sarja versus Suriya

ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ಕ್ಕೆ ತೆರೆಗೆ ಬರಬೇಕಿದೆ. ಇತ್ತೀಚೆಗೆ ಅದ್ಧೂರಿಯಾಗಿ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡ ಹೈಪ್ ಕ್ರಿಯೇಟ್ ಮಾಡಿದೆ. ಎ. ಪಿ ಅರ್ಜುನ್ ನಿರ್ದೇಶನದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಭಾರೀ ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಶುರುವಾಗಿದೆ.

ಅಕ್ಟೋಬರ್ 10ಕ್ಕೆ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ತೆರೆಗೆ ಬರುವುದು ಖಚಿತವಾಗಿದೆ. ಬಹಳ ಹಿಂದೆ ಸೂಪರ್ ಸ್ಟಾರ್ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಚಿತ್ರತಂಡ ಅಧಿಕೃತವಾಗಿ 'ವೆಟ್ಟೆಯಾನ್' ರಿಲೀಸ್ ಡೇಟ್ ಘೋಷಣೆ ಮಾಡಿದೆ. ಜ್ಞಾನವೇಲ್ ನಿರ್ದೇಶನದ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ಘಟಾನುಘಟಿ ಕಲಾವಿದರು ತಲೈವಾಗೆ ಸಾಥ್ ಕೊಟ್ಟಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ 'ವೆಟ್ಟೆಯಾನ್' ಸಿನಿಮಾ ನಿರ್ಮಾಣವಾಗಿದೆ. ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಶರ್ವಾನಂದ್, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ರಜನಿಕಾಂತ್ ಸಿನಿಮಾ ಅಂದರೆ ತಮಿಳು ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಭಾರೀ ನಿರೀಕ್ಷೆ ಇರುತ್ತದೆ.

Dussehra 2024 box-office clash Rajinikanth versus Dhuva sarja versus Suriya

ಸೂಪರ್ ಹಿಟ್ 'ಜೈಲರ್' ಬಳಿಕ ರಜನಿಕಾಂತ್ ನಟಿಸಿರುವ 'ವೆಟ್ಟೆಯಾನ್' ತೆರೆಗೆ ಬರ್ತಿದೆ. ಹಾಗಾಗಿ ಸಹಜವಾಗಿಯೇ ಕುತೂಹಲವಿದೆ. ಸದ್ಯ ಬಂದಿರುವ ಟೀಸರ್ ನಿರಾಸೆ ಮೂಡಿಸಿದರೂ ಸಿನಿಮಾ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ವಿಪರ್ಯಾಸ ಎಂದರೆ ಸೂರ್ಯ ನಟನೆಯ 'ಕಂಗುವ' ಸಿನಿಮಾ ಕೂಡ ಅಕ್ಟೋಬರ್ 10ಕ್ಕೆ ತೆರೆಗೆ ಬರುತ್ತದೆ ಎಂದು ಚಿತ್ರತಂಡ ಘೋಷಿಸಿದೆ.

ನಾವು ಕೂಡ ರಜನಿಕಾಂತ್ ಅಭಿಮಾನಿಗಳು. ಅವರ ಸಿನಿಮಾ ಜೊತೆಗೆ ನಮ್ಮ ಸಿನಿಮಾ ರಿಲೀಸ್ ಮಾಡಲ್ಲ, ಎಲ್ಲಾ ಮಾತುಕತೆ ಮಾಡಿಕೊಂಡು ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದೀವಿ ಎಂದು 'ಕಂಗುವ' ನಿರ್ಮಾಪಕರು ಹೇಳಿದ್ದರು. ಅದೇ ಕಾರಣಕ್ಕೆ 'ವೆಟ್ಟೆಯಾನ್' ರಿಲೀಸ್ ಡೇಟ್ ಬದಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ದಸರಾ ವೀಕೆಂಡ್ ಲಾಭ ಕಳೆದುಕೊಳ್ಳದಿರಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ದೊಡ್ಡ ಸಿನಿಮಾಗಳಿಗೆ ದೊಡ್ಡ ವೀಕೆಂಡ್, ಹಬ್ಬದ ರಜೆಗಳು ಸಿಕ್ಕರೆ ಕಲೆಕ್ಷನ್ ಚೆನ್ನಾಗಿ ಆಗುತ್ತೆ ಎನ್ನುವ ಲೆಕ್ಕಾಚಾರವಿದೆ. ಹಾಗಾಗಿ 'ಕಂಗುವ' ಜೊತೆಗೆ 'ವೆಟ್ಟೆಯಾನ್' ಬಿಡುಗಡೆ ಮಾಡುವ ಧೈರ್ಯ ಮಾಡಿದ್ದಾರೆ. ಇತ್ತ ಧ್ರುವ ಸರ್ಜಾ 'ಮಾರ್ಟಿನ್' ಕೂಡ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗಲಿದೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮೂಡಿ ಬಂದಿದೆ. ಹಾಗಾಗಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. 3 ಪ್ಯಾನ್ ಇಂಡಿಯಾ ಸಿನಿಮಾಗಳಾಗಿರುವುದರಿಂದ ಥಿಯೇಟರ್ ಹಂಚಿಕೆ ಸಮಸ್ಯೆ ಎದುರಾಗಬಹುದು.

ಅಕ್ಟೋಬರ್ 10ಕ್ಕೆ 'ವೆಟ್ಟೆಯಾನ್' ಬರಲ್ಲ ಎಂದು 'ಕಂಗುವ' ರಿಲೀಸ್‌ಗೆ ಡೇಟ್ ಫಿಕ್ಸ್ ಮಾಡಿದ್ದರು. ಈಗ ಏನು ಮಾಡುತ್ತಾರೆ ಕಾದು ನೋಡಬೇಕಿದೆ. ಶಿವ ನಿರ್ದೇಶನದ 'ಕಂಗುವ' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ಬಂದ ಟ್ರೈಲರ್ ಸೂಪರ್ ಹಿಟ್ ಆಗಿದೆ. ಕಾಲಿವುಡ್ 'ಬಾಹುಬಲಿ' ಎಂದೇ ಬಿಂಬಿದಲಾಗುತ್ತಿದೆ. ಸೂರ್ಯ ಗೆಟಪ್, ಲುಕ್ ಹುಬ್ಬೇರಿಸುವಂತಿದೆ. ಹಾಗಾಗಿ 'ಕಂಗುವ' ಅಥವಾ 'ಮಾರ್ಟಿನ್' ರಿಲೀಸ್ ಡೇಟ್ ಬದಲಾಗುತ್ತಾ ಕಾದು ನೋಡಬೇಕಿದೆ.

More from Filmibeat

English summary
Super star Rajinikanth words came true; Vettaiyan release date confirmed
Read more about: dhruva sarja surya rajinikanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X