Dussehra 2025: ದಸರಾಗೆ ಬಂದ ಕನ್ನಡ ಚಿತ್ರಗಳ ಪೋಸ್ಟರ್, ಟೀಸರ್ ಅಪ್‌ಡೇಟ್ ಇಲ್ಲಿದೆ
ನಾಡಿನೆಲ್ಲೆಡೆ ದಸರಾ ಹಬ್ಬದ ಸಡಗರ ಜೋರಾಗಿದೆ. ನವರಾತ್ರಿ ಆಯುಧ ಪೂಜೆ, ವಿಜಯದಶಮಿ ಆಚರಣೆ ಸಂಭ್ರಮ ಸಡಗರದಿಂದು ಕೂಡಿದೆ. ತಾರೆಯರ ಮನೆ ಮನಗಳಲ್ಲಿ ಕೂಡ ಹಬ್ಬದ ಸಂತಹ ಮನೆ ಮಾಡಿದೆ. ಇನ್ನು ಹಬ್ಬದ ವಿಶೇಷವಾಗಿ ಅಪ್‌ಕಮ್ಮಿಂಗ್ ಸಿನಿಮಾಗಳ ಸ್ಪೆಷಲ್ ಪೋಸ್ಟರ್, ಟೀಸರ್, ಅಪ್‌ಡೇಟ್ ಸಿಕ್ಕಿದೆ.
ಮ್ಯಾಂಗೋ ಪಚ್ಚ ಟೀಸರ್
ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಟೀಸರ್ ರಿಲೀಸ್ ಆಗಿದೆ. ಮ್ಯಾಂಗೋ ಪಚ್ಚ ಮೈಸೂರು ಭಾಗದ ಕಥೆ. ಈ ದಸರ ಸಂಭ್ರಮದಲ್ಲೇ ಮೈಸೂರು ಭಾಗದ ಕಥೆಯ ಝಲಕ್ ತೋರಿಸಿರುವುದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರ ಆಗಿದ್ದು ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ. ವಿವೇಕ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಯೂರ್ ಪಟೇಲ್, ವಿಜಯ ರಾಘವೇಂದ್ರ ತಾರಾಗಣದಲ್ಲಿದ್ದಾರೆ.

ಡೆವಿಲ್ ಪೋಸ್ಟರ್
ದರ್ಶನ್ ನಟನೆಯ 'ಡೆವಿಲ್' ಚಿತ್ರದ ಸೆಕೆಂಡ್ ಸಾಂಗ್ ರಿಲೀಸ್ ಅಪ್‌ಡೇಟ್ ಬಂದಿದೆ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ 'ಒಂದೆ ಒಂದು ಸಲ' ಲಿರಿಕಲ್ ವೀಡಿಯೋ ಹೊರಬರಲಿದೆ. ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚನಾ ರೈ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಎನ್ನುವುದು ಪೋಸ್ಟರ್ ನೋಡಿದರೆ ಅರ್ಥವಾಗುತ್ತದೆ. ಡಿಸೆಂಬರ್ 12ಕ್ಕೆ ಸಿನಿಮಾ ತೆರೆಗೆ ಬರಲಿದೆ.
'ಡ್ಯಾಡ್' ಪೋಸ್ಟರ್
ಇತ್ತೀಚೆಗೆ ಶಿವಣ್ಣ ನಟನೆಯ ಡ್ಯಾಡ್ ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ಶುರುವಾಗಿತ್ತು. ಶರ್ಮಿಳಾ ಮಾಂಡ್ರೆ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪುಟ್ಟ ಬಾಲಕಿ ಹಾಗೂ ನಾಯಕನ ನಡುವಿನ ಕಥೆ ಚಿತ್ರದಲ್ಲಿದೆ. ಮೈಸೂರು ದಸರಾ ಜಂಬು ಸವಾರಿ ವೇಳೆ ಮಳೆಯಲ್ಲಿ ಮಗಳ ಜೊತೆ ನಾಯಕ ಛತ್ರಿ ಹಿಡಿರು ಕುಳಿತಿರುವಂತೆ ಪೋಸ್ಟರ್ ರಿಲೀಸ್ ಮಾಡಿ ಹಬ್ಬದ ಶುಭಾಶಯ ಕೋರಿದ್ದಾರೆ.

ಇನ್ನುಳಿದಂತೆ ಧೀರೇನ್ ರಾಮ್‌ಕುಮಾರ್ ನಟನೆಯ ಪಬ್ಬಾರ್, ಉಪೇಂದ್ರ- ರಮ್ಯಾ ನಟನೆಯ ಪ್ರೇಮ ಕಾಶ್ಮೀರ, ಶಿವಣ್ಣ, ರಾಜ್ ಬಿ ಶೆಟ್ಟಿ ಹಾಗೂ ಉಪೇಂದ್ರ ನಟನೆಯ '45' ಚಿತ್ರತಂಡಗಳು ಪೋಸ್ಟರ್ ಬಿಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. '666 ಆಪರೇಷನ್ ಡ್ರೀಮ್ ರಾಕೆಟ್' ಚಿತ್ರದ ಶೂಟಿಂಗ್ ಸೆಟ್‌ಗೆ ನಟ ಸುದೀಪ್ ಭೇಟಿ ನೀಡಿದ್ದಾರೆ. ಈ ವೇಳೆ ಧನಂಜಯ್ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದು ವೈರಲ್ ಆಗಿದೆ.
ಕಾಂತಾರ-1 ರಿಲೀಸ್
ದಸರಾ ಹಬ್ಬದ ಉಡುಗೊರೆಯಾಗಿ 'ಕಾಂತಾರ- 1' ಸಿನಿಮಾ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮೊದಲ ದಿನವೇ 150 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಆಯುಧಪೂಜೆ ದಿನವೇ ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗಿದ್ದವು. ವಿಜಯದಶಮಿ ಸಂಭ್ರಮದಲ್ಲಿ ಸಿನಿಮಾ ದೊಡ್ಡದಾಗಿ ತೆರೆಗಪ್ಪಳಿಸಿದೆ.
ತೆಲುಗಿನ 'ಅಖಂಡ'-2 ಸಿನಿಮಾ ಹೋಸ ಪೋಸ್ಟರ್ ಬಂದಿದೆ. ಡಿಸೆಂಬರ್ 5ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ.


Click it and Unblock the Notifications











