For Quick Alerts
  ALLOW NOTIFICATIONS  
  For Daily Alerts

  ದಸರಾ ಬಾಕ್ಸಾಫೀಸ್ ಫೈಟ್: ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗ್ತಿದೆ ಗೊತ್ತಾ?

  |

  ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆದ್ರೆ ಕಲೆಕ್ಷನ್ ಭರ್ಜರಿಯಾಗಿ ನಡೆಯುತ್ತೆ ಅನ್ನುವ ನಂಬಿಕೆ ಚಿತ್ರರಂಗದಲ್ಲಿದೆ. ಹಬ್ಬದ ಆಚರಿಸಿ ನಂತರ ಪ್ರೇಕ್ಷಕರು ಮನರಂಜನೆಗಾಗಿ ಥಿಯೇಟರ್‌ಗೆ ಬರ್ತಾರೆ. ಅದರಲ್ಲೂ ಫ್ಯಾಮಿಲಿ ಆಡಿಯನ್ಸ್ ದೊಡ್ಡಮಟ್ಟದಲ್ಲಿ ಥಿಯೇಟರ್‌ ಬರ್ತಾರೆ ಎನ್ನುವ ಲೆಕ್ಕಾಚಾರ ಇದೆ. ಇದು ನಿಜ ಕೂಡ ಹೌದು. ಈ ಬಾರಿ ದಸರಾ ಹಬ್ಬಕ್ಕೆ ಕನ್ನಡ, ತೆಲುಗು, ಹಿಂಗಿ, ತಮಿಳು ಬಹುನಿರೀಕ್ಷಿತ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ.

  ದಕ್ಷಿಣ ಭಾರತದಲ್ಲಿ ದಸರಾ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ರಾಜ್ಯದಲ್ಲೂ ನಾಡಹಬ್ಬ ಬಹಳ ಜೋರಾಗಿರುತ್ತದೆ. ಅದೇ ಕಾರಣಕ್ಕೆ ದಸರಾ ವೀಕೆಂಡ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಸಿನಿಮಾಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಗುವುದರಿಂದ ಬೇರೆ ಭಾಷೆಯ ಸಿನಿಮಾಗಳು ಸಹ ದೊಡ್ಡಮಟ್ಟದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಇದರ ಜೊತೆಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ 'ಕಾಂತಾರ' ಹಾಗೂ 'ತೋತಾಪುರಿ' ಸಿನಿಮಾಗಳು ತೆರೆಗಪ್ಪಳಿಸಲಿದೆ.

  ವಿದೇಶಿ ನೆಲದಲ್ಲಿ ನಡೆಯಲಿದೆ ರಾಜ್ ಕಪ್; ಯಾರು ಯಾರು ಆಡಲಿದ್ದಾರೆ, ಟೂರ್ನಿ ಯಾವಾಗ? ಇಲ್ಲಿದೆ ಮಾಹಿತಿವಿದೇಶಿ ನೆಲದಲ್ಲಿ ನಡೆಯಲಿದೆ ರಾಜ್ ಕಪ್; ಯಾರು ಯಾರು ಆಡಲಿದ್ದಾರೆ, ಟೂರ್ನಿ ಯಾವಾಗ? ಇಲ್ಲಿದೆ ಮಾಹಿತಿ

  ಬಾಲಿವುಡ್‌ನ 'ವಿಕ್ರಂ ವೇದ' ಚಿತ್ರವನ್ನು ಪ್ರಪಂಚದ 100ಕ್ಕೂ ಅಧಿಕ ದೇಶಗಳಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ತಮಿಳಿನಲ್ಲಿ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗ್ತಿದೆ.

  ಕುತೂಹಲ ಕೆರಳಿಸಿದ 'ಕಾಂತಾರ'

  ಕುತೂಹಲ ಕೆರಳಿಸಿದ 'ಕಾಂತಾರ'

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ದಸರಾ ಹಬ್ಬಕ್ಕೂ ಮೊದಲೇ ಪ್ರೇಕ್ಷಕರ ಮುಂದೆ ಬರ್ತಿದೆ. ಹೊಂಬಾಳೆ ಫಿಲ್ಮ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ದಕ್ಷಣ ಕನ್ನಡ ಸೊಗಡಿನ ಕಥೆಯನ್ನು ಹೇಳಲಾಗಿದೆ. ಕಾಡನ್ನು ನಂಬಿ ಬದುಕುವ ಜನ ಹಾಗೂ ಅರಣ್ಯ ಇಲಾಖೆಯ ನಡುವಿನ ಸಂಘರ್ಷವೇ ಚಿತ್ರದ ಕೇಂದ್ರಬಿಂದು. ದಟ್ಟ ಕಾಡು, ಭೂತಕೋಲ, ಕಂಬಳ ಕ್ರೀಡೆ ಸೇರಿದಂತೆ ಅಲ್ಲಿನ ಸಂಪ್ರದಾಯಗಳು, ಆಚಾರ ವಿಚಾರಗಳನ್ನು 'ಕಾಂತಾರ' ಚಿತ್ರದಲ್ಲಿ ಹಾಸು ಹೊಕ್ಕಾಗಿದೆ.

  ಡಾಲಿ 26ನೇ ಸಿನಿಮಾ: ಡಾಲಿ 26ನೇ ಸಿನಿಮಾ: "ಕ್ವಾಲಿಟಿ ಬೇಕು, ಕ್ವಾಂಟಿಟಿ ಅಲ್ಲ".. "ದೊಡ್ಡ ಸಿನಿಮಾ ಮಾಡಿ ಚಿಕ್ಕದು ಬೇಡ"

  'ತೋತಾಪುರಿ' ಚಿತ್ರದಲ್ಲಿ ಕಾಮಿಡಿ ಕಚಗುಳಿ

  'ತೋತಾಪುರಿ' ಚಿತ್ರದಲ್ಲಿ ಕಾಮಿಡಿ ಕಚಗುಳಿ

  ನೀರ್‌ದೋಸೆ ಸಿನಿಮಾ ಖ್ಯಾತಿಯ ವಿಜಯ್‌ಪ್ರಸಾದ್ ಹಾಗೂ ಜಗ್ಗೇಶ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ 'ತೋತಾಪುರಿ' ಸಿನಿಮಾ ಕೂಡ ದಸರಾ ಸಂಭ್ರಮದಲ್ಲೇ ತೆರೆಗೆ ಬರ್ತಿದೆ. ಚಿತ್ರದಲ್ಲಿ ಸುಮನ್ ರಂಗನಾಥ್, ಡಾಲಿ ಧನಂಜಯ್ ,ವೀಣಾ ಸುಂದರ್ ಮತ್ತು ದತ್ತಣ್ಣ ಮುಂತಾದವರ ತಾರಾಬಳಗವಿದೆ. ಇನ್ನು ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಸಾಂಗ್ಸ್ ಸೂಪರ್ ಹಿಟ್ ಆಗಿದೆ.

  'ಗಾಡ್‌ಫಾದರ್' ಜೊತೆ 'ದಿ ಘೋಸ್ಟ್' ಎಂಟ್ರಿ

  'ಗಾಡ್‌ಫಾದರ್' ಜೊತೆ 'ದಿ ಘೋಸ್ಟ್' ಎಂಟ್ರಿ

  ಅಕ್ಟೋಬರ್ 5ಕ್ಕೆ ತೆಲುಗಿನ 'ಗಾಡ್‌ಫಾದರ್' ಹಾಗೂ 'ದಿ ಘೋಸ್ಟ್' ಸಿನಿಮಾಗಳು ರಿಲೀಸ್ ಆಗ್ತಿದೆ. ತೆಲುಗಿನ 'ಲೂಸಿಫರ್' ರೀಮೆಕ್‌ 'ಗಾಡ್‌ಫಾದರ್' ಚಿತ್ರದಲ್ಲಿ ಚಿರು ಜೊತೆ ಸಲ್ಮಾನ್ ಖಾನ್ ನಟಿಸಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ. ಇನ್ನು ಕಿಂಗ್ ನಾಗಾರ್ಜುನ ನಟನೆಯ ಆಕ್ಷನ್ ಎಂಟರ್‌ಟೈನರ್ 'ದಿ ಘೋಸ್ಟ್' ಸಿನಿಮಾ ಕೂಡ ಅದೇ ದಿನ ಪ್ರೇಕ್ಷಕರ ಮುಂದೆ ಬರ್ತಿದೆ. ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಎರಡೂ ಸಿನಿಮಾ ನೋಡುತ್ತಾರೆ ಎನ್ನುವ ನಿರೀಕ್ಷೆ ಇದೆ.

   'ವಿಕ್ರಂ ವೇದ' ಗ್ರ್ಯಾಂಡ್ ರಿಲೀಸ್

  'ವಿಕ್ರಂ ವೇದ' ಗ್ರ್ಯಾಂಡ್ ರಿಲೀಸ್

  ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿಖಾನ್ ನಟನೆಯ 'ವಿಕ್ರಂ ವೇದ' ಚಿತ್ರ ಸೆಪ್ಟೆಂಬರ್ 30ಕ್ಕೆ ತೆರೆಗಪ್ಪಳಿಸ್ತಿದೆ. 5 ವರ್ಷಗಳ ಹಿಂದೆ ಕಾಲಿವುಡ್‌ನಲ್ಲಿ 'ವಿಕ್ರಂ ವೇದ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮಾಧವನ್, ವಿಜಯ್ ಸೇತುಪತಿ ಲೀಡ್‌ ರೋಲ್‌ಗಳಲ್ಲಿ ಅಬ್ಬರಿಸಿದ್ದರು. ತಮಿಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಗೆದ್ದ ಪುಷ್ಕರ್- ಗಾಯತ್ರಿ ದಂಪತಿ ಬಾಲಿವುಡ್‌ನಲ್ಲೂ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

  ಸೆಪ್ಟೆಂಬರ್ 30ಕ್ಕೆ 'ಪೊನ್ನಿಯಿನ್ ಸೆಲ್ವನ್' ಅಬ್ಬರ

  ಸೆಪ್ಟೆಂಬರ್ 30ಕ್ಕೆ 'ಪೊನ್ನಿಯಿನ್ ಸೆಲ್ವನ್' ಅಬ್ಬರ

  ಮಣಿರತ್ನಂ ಸಾರಥ್ಯದ ಕಾಸ್ಟ್ಯೂಮ್ ಡ್ರಾಮಾ 'ಪೊನ್ನಿಯಿನ್ ಸೆಲ್ವನ್' ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗ್ತಿದೆ. ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಷಾ, ಶರತ್ ಕುಮಾರ್, ಪ್ರಕಾಶ್ ರೈ, ಕಿಶೋರ್ ಸೇರಿದಂತೆ ಘಟಾನುಘಟಿ ಕಲಾವಿದರು ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. 400 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗಿದೆ.

  ಸೆಪ್ಟೆಂಬರ್ 29ಕ್ಕೆ 'ನಾನೇ ವರುವೇನ್'

  ಸೆಪ್ಟೆಂಬರ್ 29ಕ್ಕೆ 'ನಾನೇ ವರುವೇನ್'

  ರಾಷ್ಟ್ರಪ್ರಶಸ್ತಿ ವಿಜೇತ ನಟ ಧನುಷ್‌ ದ್ವಿಪಾತ್ರದಲ್ಲಿ ನಟಿಸಿರುವ 'ನಾನೇ ವರುವೇನ್' ಸಿನಿಮಾ ಸೆಪ್ಟೆಂಬರ್ 29ಕ್ಕೆ ರಿಲೀಸ್ ಆಗ್ತಿದೆ. ಧನುಷ್ ಸಹೋದರ ಸೆಲ್ವ ರಾಘವನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಭಾರೀ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಹೀರೊ, ವಿಲನ್ ಆಗಿ ಧನುಷ್ ಅಬ್ಬರಿಸಿದ್ದಾರೆ. ಒಟ್ನಲ್ಲಿ ದೊಡ್ಡದೊಡ್ಡ ಸಿನಿಮಾಗಳು ದಸರಾ ಸಂಭ್ರಮದಲ್ಲಿ ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಶ್‌ ಕ್ಲ್ಯಾಶ್ ಗ್ಯಾರೆಂಟಿ.

  English summary
  Dussehra Release Movies 2022 Kannada Tamil Telugu Hindi on Theaters
  Tuesday, September 20, 2022, 10:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X