ದಸರಾ ದಂಗಲ್ : ಕಾಂತಾರ VS ಇಡ್ಲಿ ಕಡೇ - ಈ ವಾರ ಬಿಡುಗಡೆಯಾಗುತ್ತಿರುವ 5 ಸೌತ್ ಸಿನಿಮಾಗಳಿವು

ಹಬ್ಬ ಹರಿದಿನ ಬಂದರೆ ಸಾಕು ಬಣ್ಣದ ಪ್ರಪಂಚ ಝಗಮಗಿಸುತ್ತೆ. ಚಿತ್ರಸಂತೆ ರಂಗೇರುತ್ತೆ. ದೊಡ್ಡ ದೊಡ್ಡ ಚಿತ್ರಗಳಿಂದ ಚಿತ್ರಮಂದಿರ ತುಂಬಿ ತುಳುಕುತ್ತೆ. ಇನ್ನೂ ದಸರಾ ರಜೆಯ ಮಜಾನೇ ಬೇರೆ. ನವರಾತ್ರಿ ಸಮಯದಲ್ಲಿ ಹಲವರು ತಮ್ಮ ಚಿತ್ರಗಳನ್ನು ತೆರೆಗೆ ತರುತ್ತಾರೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲು ಅಣಿಯಾಗುತ್ತಾರೆ. ಈ ವರ್ಷ ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ.

ದಕ್ಷಿಣ ಭಾರತದಲ್ಲಿ ಒಂದಲ್ಲ.. ಎರಡಲ್ಲ.. ಈ ದಸರಾ ಹಬ್ಬಕ್ಕೆ ಐದು ಚಿತ್ರಗಳು ಬಿಡುಗಡೆಯಾಗುತ್ತಿವೆ. ಆ ಪೈಕಿ ನಮ್ಮ ನೆಲದ ''ಕಾಂತಾರ'' ಮೇಲೆ ಎಲ್ಲರ ಕಣ್ಣಿದೆ. ಪಕ್ಕದ ಮನೆಯಲ್ಲಿ ತಯಾರಾದ ಇಡ್ಲಿ ಕಡಾಯಿ ಮೇಲೆ ಕೂಡ ಅನೇಕರಿಗೆ ಭರವಸೆ ಇದೆ. ಹಾಗಿದ್ದರೆ.. ಈ ವಾರ ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿರುವ ಚಿತ್ರಗಳು ಯಾವುವು..? ಎಂದು ತಿಳಿಯಲು ಮುಂದೆ ಓದಿ

dussehra-showdown-choose-your-champion-kantara-idli-kadai-and-the-3-other-south-films-you-cant

1 ಕಾಂತಾರ

ತಾರಾಗಣ - ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಹರಿಪ್ರಶಾಂತ್ ಎಂಜಿ, ಶನೀಲ್ ಗೌತಮ್

ನಿರ್ದೇಶನ: ರಿಷಬ್ ಶೆಟ್ಟಿ

ನಿರ್ಮಾಣ : ಹೊಂಬಾಳೆ ಫಿಲ್ಮ್ಸ್

ಭಾಷೆ: ಕನ್ನಡ

ಅವಧಿ: 2 ಗಂಟೆ 48 ನಿಮಿಷಗಳು

ಬಿಡುಗಡೆ ದಿನಾಂಕ: ಅಕ್ಟೋಬರ್ 2, 2025

ಮೂರು ವರ್ಷದ ಹಿಂದೆ ತೆರೆಗೆ ಬಂದು ಐತಿಹಾಸಿಕ ಗೆಲುವನ್ನು ಕಂಡಿದ್ದ ಕಾಂತಾರ ಚಿತ್ರದ ಮತ್ತೊಂದು ಅಧ್ಯಾಯ ಈ ಅಕ್ಟೋಬರ್ 2ರಂದು ಬೆಳ್ಳಿತೆರೆಯ ಮೇಲೆ ಅನಾವರಣವಾಗಲಿದೆ. ಮೊದಲ ಭಾಗದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಪ್ಯಾನ್ ಇಂಡಿಯಾ ಈ ಚಿತ್ರ ತೆರೆಗೆ ಬರುತ್ತಿದ್ದು ರಿಷಬ್ ಶೆಟ್ಟಿ ತಮ್ಮ ಈ ಕನಸಿಗೆ ತನು-ಮನ ಅರ್ಪಿಸಿರುವುದು ಚಿತ್ರದ ಟ್ರೇಲರ್‌ ಮತ್ತು ಮೇಕಿಂಗ್‌ ವಿಡಿಯೋ ಸ್ಪಷ್ಟವಾಗಿ ಕಾಣಿಸುತ್ತೆ. ಈ ವಾರ ಬಿಡುಗಡೆಯಾಗುತ್ತಿರುವ ಉಳಿದ ನಾಲ್ಕು ಸೌತ್ ಸಿನಿಮಾಗಳ ಪೈಕಿ ಹಲವರ ಮೊದಲ ಆದ್ಯತೆ ''ಕಾಂತಾರ'' ಚಿತ್ರವೇ ಆಗಿದ್ದು ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಬೀಳುವ ನಿರೀಕ್ಷೆ ಇದೆ.

dussehra-showdown-choose-your-champion-kantara-idli-kadai-and-the-3-other-south-films-you-cant

2. ಇಡ್ಲಿ ಕಡೈ

ತಾರಾಗಣ : ಧನುಷ್, ನಿತ್ಯಾ ಮೆನೆನ್, ಅರುಣ್ ವಿಜಯ್, ರಾಜ್‌ಕಿರಣ್, ಸತ್ಯರಾಜ್, ಆರ್. ಪಾರ್ತಿಬನ್, ಶಾಲಿನಿ ಪಾಂಡೆ, ಸಮುದ್ರಕನಿ, ಗೀತಾ ಕೈಲಾಸಂ

ನಿರ್ದೇಶನ: ಧನುಷ್

ನಿರ್ಮಾಣ - ಧನುಷ್ (ವಂಡರ್‌ಬಾರ್ ಫಿಲ್ಮ್ಸ್)

ಭಾಷೆ: ತಮಿಳು

ಅವಧಿ: 2 ಗಂಟೆ 27 ನಿಮಿಷಗಳು

ಬಿಡುಗಡೆ ದಿನಾಂಕ: ಅಕ್ಟೋಬರ್ 1, 2025

ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಮುರುಗನ್ ಎಂಬ ಯುವಕನ ಕಥೆ ''ಇಡ್ಲಿ ಕಡೈ'' ಚಿತ್ರದಲ್ಲಿದೆ. ತನ್ನ ತಂದೆಯ ಇಡ್ಲಿ ಅಂಗಡಿಗೆ ಮರು ಜೀವ ನೀಡಲು ಚಿತ್ರದ ಕಥಾ ನಾಯಕ ಮುರುಗನ್ (ಧನುಷ್) ಮುಂಧಾದಾಗ ಎದುರಾಗುವ ಸವಾಲುಗಳೇನು..? ಎನ್ನುವ ಕಥಾಹಂದರದ ಈ ಚಿತ್ರ ಎಲ್ಲರ ಮಧ್ಯಮ ಮತ್ತು ಬಡ ವರ್ಗದ ಪ್ರೇಕ್ಷಕರ ಹೃದಯಕ್ಕೆ ನಾಟುತ್ತೆ ಎನ್ನುವ ಮಾತು ಕೇಳಿ ಬರುತ್ತಿದೆ. ಇಂದೇ ( ಅಕ್ಟೋಬರ್ 1 ) ಈ ಚಿತ್ರ ಬಿಡುಗಡೆಯಾಗುತ್ತಿದ್ದು ಕೆಲವೇ ಕ್ಷಣಗಳಲ್ಲಿ ಈ ಚಿತ್ರದ ಫಲಿತಾಂಶ ಹೊರ ಬೀಳಲಿದೆ.

ಈ ಎರಡು ಚಿತ್ರಗಳನ್ನು ಹೊರತು ಪಡಿಸಿದರೆ ಶ್ರೀಕಾಂತ್, ಅಜಯ್, ಕಮಲ್ ಕಾಮರಾಜು, ಸುಮನ್ ಬಾಬು, ಕಾರುಣ್ಯ ಚೌಧರಿ, ಸಂಜನಾ ಶೆಟ್ಟಿ, ಭಾನು ಶ್ರೀ, ಅಲಿ ಅಭಿನಯದ ಹಾರರ್ ಥ್ರಿಲ್ಲರ್ ಚಿತ್ರ ''ಎರ್ರಾ ಚಿರಾ'' ಇಂದು ( ಅಕ್ಟೋಬರ್ 1) ಬಿಡುಗಡೆಯಾಗುತ್ತಿದೆ. ಇದರ ಜೊತೆಯಲ್ಲಿ ಸಾಯಿಶ್ರೀ ಪ್ರಭಾಕರನ್, ಪಾವೆಲ್ ನವಗೀತನ್, ಸಿದ್ದು ಕುಮರೇಶನ್, ವಿಘ್ನೇಶ್ ರವಿ, ಸುಧಾ ಪುಷ್ಪ ಅಭಿನಯದ ಹರಿ ಕೆ ಸುಧನ್ ನಿರ್ದೇಶನದ 2 ಗಂಟೆ 15 ನಿಮಿಷ ಅವಧಿಯ ತಮಿಳು ಚಿತ್ರ ''ಮಾರಿಯಾ'' ಅಕ್ಟೋಬರ್ 3ರಂದು ತೆರೆಗೆ ಬರಲಿದೆ.

ಇನ್ನೂ ತೆಲುಗಿನಲ್ಲಿ ಈ ದಸರಾ ಹಬ್ಬದ ಪ್ರಯುಕ್ತ ರಾಮನ್ ರೆಡ್ಡಿ ಕೊರಿವಿ, ವರ್ಷಾ ವಿಶ್ವನಾಥ್, ಜೆಮಿನಿ ಸುರೇಶ್, ಸನಪಾಲ ರಾಮಕೃಷ್ಣ, ಗೋವಿಂದರಾಜ್ ನೀರುಡಿ, ಕಿರಣ್ ಮೇಡಸಾನಿ ಅಭಿನಯದ ರಾಮಚಂದ್ರ ವಟ್ಟಿಕುಟಿ ನಿರ್ದೇಶನದ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಚಿತ್ರ ''ಮಟನ್ ಸೂಪ್'' ನಾಳೆ ( ಅಕ್ಟೋಬರ್ 2) ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಅವಧಿ 2 ಗಂಟೆ 12 ನಿಮಿಷ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X