ಆಯುಧ ಪೂಜೆ ಹಾಗೂ ವಿಜಯದಶಮಿಗೆ ರಂಗೇರಿದ ಸ್ಯಾಂಡಲ್‌ವುಡ್
ಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡುವುದು, ಹೊಸ ಸಿನಿಮಾಗಳನ್ನು ಘೋಷಣೆ ಮಾಡುವುದು ಹೊಸದೇನು ಅಲ್ಲ. ಸದ್ಯ ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಕಳೆ ಕಟ್ಟಿದೆ. ಜನ ಹಬ್ಬದ ಸಂಭ್ರಮದಲ್ಲಿ ಮುಳುಗಿ ತೇಲುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕೂಡ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮ ಜೋರಾಗಿದೆ.
ದಸರಾ ವೀಕೆಂಡ್‌ನಲ್ಲೇ ಧರ್ಉವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ತೆರೆಗೆ ಬಂದಿದೆ. ಮಿಶ್ರಪ್ರತಿಕ್ರಿಯೆ ಸಿಕ್ಕರೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು, ನಾಳೆ ಗಳಿಕೆ ನಿರ್ಣಾಯಕವಾಗಲಿದೆ. ಇನ್ನು ಹಬ್ಬಕ್ಕೆ ಕೆಲ ಸಿನಿಮಾಗಳ ಹೊಸ ಹೊಸ ಪೋಸ್ಟರ್‌ಗಳು ರಿವೀಲ್ ಆಗಿದೆ. ಯುವ ರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಘೋಷಣೆ ಆಗಿದೆ.

ಯುವ 02
ಪ್ರೀ ಲುಕ್ ಪೋಸ್ಟರ್ ಜೊತೆಗೆ ಯುವ ರಾಜ್‌ಕುಮಾರ್ ನಟನೆಯ ಹೊಸ ಸಿನಿಮಾ ಅಪ್‌ಡೇಟ್ ಸಿಕ್ಕಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಯುವ 02 ಸಿನಿಮಾ ನಿರ್ಮಾಣ ಮಾಡಲಿವೆ. ರೋಹಿತ್ ಪದಕಿ ಆಕ್ಷನ್ ಕಟ್ ಹೇಳಲಿದ್ದಾರೆ. ರಕ್ತ ಅಂಟಿದ ಕೈಯಲ್ಲಿ ಯುವ ಲಾಂಗ್ ಹಿಡಿದ ಪೋಸ್ಟರ್ ರಿಲೀಸ್ ಆಗಿದೆ. ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.
ಭೈರತಿ ರಣಗಲ್
ನರ್ತನ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ನವೆಂಬರ್ 15ಕ್ಕೆ ಸಿನಿಮಾ ತೆರೆಗೆ ಬರಲಿದೆ. ನಾಲ್ಕು ಹೊಸ ಪೋಸ್ಟರ್ ಬಿಟ್ಟು ಸಿನಿರಸಿಕರಿಗೆ ವಿಜಯ ದಶಮಿ ಶುಭಾಶಯ ಕೋರಿದೆ ಚಿತ್ರತಂಡ. ಸೂಪರ್ ಹಿಟ್ 'ಮಫ್ತಿ' ಚಿತ್ರದ ಪ್ರೀಕ್ವೆಲ್ ಇದು. ವಕೀಲನಾಗಿದ್ದ ರಣಗಲ್ ಯಾಕೆ ಮಾಫಿಯಾ ಡಾನ್ ಆದ ಎನ್ನುವ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ.

ಜೆಸಿ & ಅಣ್ಣ ಫ್ರಂ ಮೆಕ್ಸಿಕೊ
ಡಾಲಿ ಧನಂಜಯ್ ನಿರ್ಮಿಸುತ್ತಿರುವ 'ಜೆಸಿ' ಚಿತ್ರದ ಪೋಸ್ಟರ್ ಹೊರ ಬಂದಿದೆ. ಪ್ರಖ್ಯಾತ್ ಲಾಂಗ್ ಹಿಡಿದು ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಧನು 'ಅಣ್ಣ ಫ್ರಂ ಮೆಕ್ಸಿಕೊ' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ದೇವಿ ಅವತಾರದಲ್ಲಿ ಆಕೆಯ ಪೋಸ್ಟರ್ ರಿಲೀಸ್ ಮಾಡಿ ತಂಡ ದಸರಾ ಶುಭಾಶಯ ಕೋರಿದೆ.
KD & UI
ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ' ಸಿನಿಮಾ ರಿಲೀಸ್ ತಡವಾಗುತ್ತಿದೆ. ಬರೀ ಟೈಟಲ್ ಡಿಸೈನ್ ಮಾಡಿ ರಿಲೀಸ್ ಮಾಡಿ ಚಿತ್ರತಂಡ ಹಬ್ಬ ಆಚರಿಸಿದೆ. ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರತಂಡವೂ ಇದೇ ಪ್ರಯತ್ನ ಮಾಡಿದೆ. ಆದಷ್ಟು ಬೇಗ ಚಿತ್ರದ ಸಾಂಗ್ಸ್ ರಿಲೀಸ್ ಮಾಡುವ ಬಗ್ಗೆ ಸುಳಿವು ನೀಡಲಾಗಿದೆ.
ಬಘೀರ
ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ದೀಪಾವಳಿ ಸಂಭ್ರಮದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬರಲಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರಕ್ಕೆ ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಮುಂದಿನ ವಾರವೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ.
ಇನ್ನುಳಿದಂತೆ ಪ್ರಜ್ವಲ್ ದೇವರಾಜ್ ಅಭಿನಯದ 'ಕರಾವಳಿ' ಸೇರಿದಂತೆ ಒಂದಷ್ಟು ಸಿನಿಮಾಗಳ ಹೊಸ ಹೊಸ ಪೋಸ್ಟರ್‌ಗಳು ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಇನ್ನು 'ನವಗ್ರಹ' ರೀ-ರಿಲೀಸ್ ಬಗ್ಗೆ ದಿನಕರ್ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಸಿನಿಮಾಗಳು ತೆರೆಗೆ ಬರಲಿ ಎಂದು ವೀಕ್ಷಕರು ಕಾಯುವಂತಾಗಿದೆ.


Click it and Unblock the Notifications











