twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್ ನಟನೆ 'ದ್ವಿತ್ವ' ಪೋಸ್ಟರ್‌ ನಕಲು ವಿವಾದ: ಉತ್ತರ ಕೊಟ್ಟ ಡಿಸೈನರ್

    |

    ಪುನೀತ್ ರಾಜ್‌ಕುಮಾರ್ ನಟಿಸಿ ಪವನ್ ಕುಮಾರ್ ನಿರ್ದೇಶನ ಮಾಡುತ್ತಿರುವ 'ದ್ವಿತ್ವ' ಸಿನಿಮಾದ ಪೋಸ್ಟರ್‌ ಅನ್ನು ನಿನ್ನೆಯಷ್ಟೆ ಬಿಡುಗಡೆ ಮಾಡಲಾಗಿತ್ತು.

    ಪುನೀತ್ ರಾಜ್‌ಕುಮಾರ್ ಮುಖ ಒಡೆದ ರೀತಿಯಲ್ಲಿ ಕಾಣುತ್ತಿರುವಂತೆ ಡಿಸೈನ್ ಮಾಡಿದ್ದ ಪೋಸ್ಟರ್ ಕುತೂಹಲಕಾರಿ ಭಾವ ಹುಟ್ಟಿಸುತ್ತಿತ್ತು. ಪೋಸ್ಟರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನಿರ್ದೇಶಕ ಪವನ್, ಪೋಸ್ಟರ್ ಡಿಸೈನ್ ಮಾಡಿದ ಆದರ್ಶ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು.

    ಪುನೀತ್ ಚಿತ್ರದ ಪೋಸ್ಟರ್ ಕಾಪಿನಾ? 'ದ್ವಿತ್ವ' ಹೋಲುವ ಫೋಟೋ ಯಾವುದಿದು?ಪುನೀತ್ ಚಿತ್ರದ ಪೋಸ್ಟರ್ ಕಾಪಿನಾ? 'ದ್ವಿತ್ವ' ಹೋಲುವ ಫೋಟೋ ಯಾವುದಿದು?

    ಆದರೆ 'ದ್ವಿತ್ವ' ಸಿನಿಮಾದ ಪೋಸ್ಟರ್ ಅನ್ನೇ ಬಹುತೇಕ ಹೋಲುವ ಚಿತ್ರವೊಂದು ಇಂದು ಬೆಳಿಗಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, 'ದ್ವಿತ್ವ' ಸಿನಿಮಾದ ಪೋಸ್ಟರ್‌ ನಕಲು ಮಾಡಿದ ಪೋಸ್ಟರ್ ಎಂದು ಆರೋಪ ಮಾಡಲಾಯಿತು.

    ಕೃತಿಚೌರ್ಯ ಮಾಡಿಲ್ಲ: ಆದರ್ಶ್

    ಕೃತಿಚೌರ್ಯ ಮಾಡಿಲ್ಲ: ಆದರ್ಶ್

    'ದ್ವಿತ್ವ' ಸಿನಿಮಾದ ಪೋಸ್ಟರ್ ಡಿಸೈನ್ ಮಾಡಿರುವ ಆದರ್ಶ್ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, 'ದ್ವಿತ್ವ' ಸಿನಿಮಾಕ್ಕೆ ಮಾಡಲಾಗಿರುವ ಪೋಸ್ಟರ್ ಕೃತಿಚೌರ್ಯದ್ದಲ್ಲ ಬದಲಿಗೆ 'ಷಟರ್ ಸ್ಟಾಕ್' ಹೆಸರಿನ ಚಿತ್ರಗಳನ್ನು ಮಾರುವ ವೆಬ್‌ನಿಂದ ಖರೀದಿಸಿದ್ದು'' ಎಂದಿದ್ದಾರೆ.

    ''ಪವನ್ ಕುಮಾರ್ ಹಾಗೂ ನಿರ್ಮಾಣ ಸಂಸ್ಥೆಗೆ ವಿಷಯ ಗೊತ್ತಿರಲಿಲ್ಲ''

    ''ಪವನ್ ಕುಮಾರ್ ಹಾಗೂ ನಿರ್ಮಾಣ ಸಂಸ್ಥೆಗೆ ವಿಷಯ ಗೊತ್ತಿರಲಿಲ್ಲ''

    ''ಷಟರ್ ಸ್ಟಾಕ್‌ನಿಂದ ಆ ಚಿತ್ರವನ್ನು ಖರೀದಿಸಿ ಅದನ್ನು 'ದ್ವಿತ್ವ' ಸಿನಿಮಾಕ್ಕೆ ಅನುಗುಣವಾಗಿ ಅಮೂರ್ತ ಪೋಸ್ಟರ್ ಅನ್ನಾಗಿ ಬದಲಾಯಿಸಿದ ವಿಷಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆಗಾಗಿಲಿ ಅಥವಾ ನಿರ್ದೇಶಕ ಪವನ್ ಕುಮಾರ್ ಅವರಿಗಾಗಲಿ ಗೊತ್ತಿರಲಿಲ್ಲ'' ಎಂದು ಆದರ್ಶ್ ಹೇಳಿದ್ದಾರೆ.

    ಪುನೀತ್ ಫೊಟೊಶೂಟ್ ಮಾಡಿಸಲಾಗಿರಲಿಲ್ಲ: ಪವನ್

    ಪುನೀತ್ ಫೊಟೊಶೂಟ್ ಮಾಡಿಸಲಾಗಿರಲಿಲ್ಲ: ಪವನ್

    ''ಸಿನಿಮಾಕ್ಕೆ ಪೋಸ್ಟರ್ ಮಾಡುವವ ವೇಳೆಗೆ ಲಾಕ್‌ಡೌನ್ ಹಾಗಾಗಿ ಪುನೀತ್ ರಾಜ್‌ಕುಮಾರ್ ಅವರ ಫೊಟೊಶೂಟ್ ಮಾಡಿಸಲು ಆಗಲಿಲ್ಲ ಹಾಗಾಗಿ ನಾವು ಷಟರ್ ಸ್ಟಾಕ್‌ನಿಂದ ಸಿನಿಮಾಕ್ಕೆ ಪೂರಕವಾಗುವ ಚಿತ್ರವನ್ನು ತೆಗೆದುಕೊಂಡು ಅದನ್ನು ಉನ್ನತೀಕರಿಸಿ ಸಿನಿಮಾದ ಪೋಸ್ಟರ್ ಆಗಿ ಬಳಸಿಕೊಂಡೆವು'' ಎಂದಿದ್ದಾರೆ ಆದರ್ಶ್.

    Recommended Video

    ಅಪ್ಪು ಅಭಿಮಾನಿಗಳ ಖುಷಿ ಹೆಚ್ಚಿಸಿದ ವಿಜಯ್ ಕಿರಗಂದೂರ್ | Filmibeat Kannada
    ಚಿತ್ರದ ಎಲ್ಲ ಹಕ್ಕುಗಳು ನಮ್ಮವೇ ಆಗಿವೆ: ಆದರ್ಶ್

    ಚಿತ್ರದ ಎಲ್ಲ ಹಕ್ಕುಗಳು ನಮ್ಮವೇ ಆಗಿವೆ: ಆದರ್ಶ್

    ಮೂಲ ಚಿತ್ರವನ್ನು ನಮ್ಮ ಕ್ರಿಯೇಟಿವ್ ಕ್ರಿವ್ ಸಂಸ್ಥೆಯವರು ಮಾಡಿಲ್ಲವಾದರೂ ಅದರ ಮೇಲಿನ ಎಲ್ಲ ಕಾನೂನಾತ್ಮಕ ಹಕ್ಕುಗಳು ನಮ್ಮವೇ ಆಗಿವೆ. ಅದರ ದಾಖಲಾತಿಗಳು ನಮ್ಮ ಬಳಿ ಇವೆ. ನಾವು ಖರೀದಿಸಿದ ಚಿತ್ರ ಯಾರದ್ದೇ ಬೌದ್ಧಿಕ ಆಸ್ತಿ ಆಗಿರುವುದಿಲ್ಲ. ಡಿಸೈನ್ ಏಜೆನ್ಸಿಯಾಗಿರುವ ನಾವು ನಮ್ಮ ಡಿಸೈನ್‌ಗೆ ಅವಶ್ಯಕತೆ ಇರುವ ಚಿತ್ರಗಳನ್ನು ಎಲ್ಲಿಂದ ಪಡೆಯಬೇಕು, ಹೇಗೆ ಬಳಸಬೇಕು ಎಂಬುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ. ಈ ವಿಷಯದ ಕುರಿತು ಅನವಶ್ಯಕವಾಗಿ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ನಿರ್ದೇಶಕರನ್ನು ಹೊಣೆಗಾರರನ್ನಾಗಿಸಬಾರದು, ಅನವಶ್ಯಕ ವಿವಾದಕ್ಕೆ ಸಿಲುಕಿಸಬಾರದು ಎಂದು ಮನವಿ ಮಾಡುತ್ತೇನೆ'' ಎಂದಿದ್ದಾರೆ ಆದರ್ಶ್.

    English summary
    Netizen said Puneeth Rajkumar's new movie Dvitva's poster copied. So poster designer Adarsh gave clafication.
    Saturday, July 3, 2021, 9:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X