"ವಿನೋದ್ 'ರಾಜ್' ಹುಟ್ಟಿನ ಗುಟ್ಟು.. ದ್ವಾರಕೀಶ್ ಆ ಹೇಳಿಕೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ": ಪ್ರಕಾಶ್‌ ರಾಜ್ ಮೇಹು

ನಟ ಡಾ. ರಾಜ್‌ ಹಾಗೂ ಲೀಲಾವತಿ ಪುತ್ರ ವಿನೋದ್ ರಾಜ್ ಎನ್ನುವ ವಿವಾದ ಮತ್ತೆ ಚಂದನವನದಲ್ಲಿ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್ ಪೋಸ್ಟ್‌. ಅಷ್ಟಕ್ಕೂ ದಶಕಗಳ ಹಿಂದೆ ಇಂತಾದೊಂದು ಗುಸು ಗುಸು ಶುರುವಾಗಿದ್ದೇಗೆ? ಎನ್ನುವುದರ ಬಗ್ಗೆ ನಿರ್ದೇಶಕರು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. ಅಂದು ನಟ, ನಿರ್ಮಾಪಕ ದ್ವಾರಕೀಶ್ ನೀಡಿದ ಹೇಳಿಕೆ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.

ಇತ್ತೀಚಿಗೆ ಪ್ರಕಾಶ್‌ ರಾಜ್‌ ಮೇಹು ನಟಿ ಲೀಲಾವತಿ ಕುಟುಂಬದ ವೈಯಕ್ತಿಯ ವಿಚಾರಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ 2 ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಅದಕ್ಕೆ ಸಾಕ್ಷಿ ಸಿಕ್ಕಿದೆ ನೋಡಿ ಎಂದು ಬರೆದುಕೊಂಡಿದ್ದರು. ಮೊದಲನೆಯದು "ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್", ಅದಕ್ಕೆ ಸಾಕ್ಷಿ ಚೆನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ" ಎಂದು ಬರೆದುಕೊಂಡಿದ್ದರು.

Dwarakish cryptic statement Reason Behind Dr Rajkumar Leelavathi and Vinod raj Amid Controversy

ಇದೊಂದೇ ವಿಚಾರವಲ್ಲ. ವಿನೋದ್ ರಾಜ್ ಮದುವೆಯನ್ನೇ ಆಗದೇ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವುದು ಸುಳ್ಳು, ಅವರಿಗೆ ಮದುವೆಯಾಗಿದೆ. ಮಗ ಇದ್ದಾನೆ. ಇಂಜಿನಿಯರಿಂಗ್ ಓದುತ್ತಿದ್ದಾನೆ. ಇದು ಅವರ ಫ್ಯಾಮಿಲಿ ಫೋಟೊ, ಇದು ಅವರ ಮಗನ ಮಾರ್ಕ್ಸ್ ಕಾರ್ಡ್ ಎಂದು ಸಾಕ್ಷಿ ನೀಡಿದ್ದರು. ನಂತರ ಈ ಬಗ್ಗೆ ಯೂಟ್ಯೂಬ್ ಚಾನಲ್‌ವೊಂದಕ್ಕೆ ಪ್ರತಿಕ್ರಿಯಿಸಿದ ನಟಿ ಲೀಲಾವತಿ, ಹೌದು ನನ್ನ ಮಗನಿಗೆ ಮದುವೆ ಮಾಡಿದ್ದೀನಿ. ತಿರುಪತಿಯಲ್ಲಿ ಮದುವೆ ಮಾಡಿದ್ದೆ ನಡೆದಿತ್ತು ಎಂದಿದ್ದರು. ವಿನೋದ್ ರಾಜ್‌ ಕೂಡ ಇದನ್ನು ಒಪ್ಪಿಕೊಂಡಿದ್ದರು.

ಇಷ್ಟಕ್ಕೆ ಸುಮ್ಮನಾಗದ ನಿರ್ದೇಶಕ ಪ್ರಕಾಶ್ ರಾಜ್ ಮೇಹು, "ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಮತ್ತೊಂದು ಸತ್ಯವನ್ನು ಒಪ್ಪಿಕೊಂಡುಬಿಡಿ" ಎಂದು ಮತ್ತೆ ಪ್ರಕಾಶ್ ರಾಜ್ ಮೇಹು ಮತ್ತೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ನಂತರ ಫಿಲ್ಮಿಬೀಟ್ ಜೊತೆಗೆ ಪ್ರಕಾಶ್‌ ರಾಜ್‌ ಮೇಹು ಮಾತನಾಡಿದ್ದಾರೆ. "ಅಣ್ಣಾವ್ರು ಹಾಗೂ ಲೀಲಾವತಿ ಪುತ್ರ ವಿನೋದ್ ರಾಜ್‌ ಎನ್ನುವ ಗುಸು ಗುಸು ಅಥವಾ ವಿವಾದ ಹುಟ್ಟಿಕೊಳ್ಳಲು 'ಡ್ಯಾನ್ಸ್ ರಾಜ ಡ್ಯಾನ್ಸ್' ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ದ್ವಾರಕೀಶ್ ನೀಡಿದ ಹೇಳಿಕೆಯೇ ಕಾರಣ" ಎಂದಿದ್ದಾರೆ.

"ಆಗ ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಅವರ ಸಂಬಂಧ ಕಡಿದು ಹೋಗಿತ್ತು. ಮಹಾಲಿಂಗ ಭಾಗವತರ್ ಜೊತೆ ಲೀಲಾವತಿ ಮತ್ತೆ ಬದುಕಲು ಆರಂಭಿಸುತ್ತಾರೆ. ಆಗ ಮಗು ಹುಟ್ಟುತ್ತದೆ. ಆ ಮಗುವಿಗೆ ಐದಾರು ವರ್ಷ ಆದಮೇಲೆ ಮತ್ತೆ ಲೀಲಾವತಿ ನಟಿಸಲು ಆರಂಭಿಸುತ್ತಾರೆ. 'ಸಿಪಾಯಿ ರಾಮು' ಹಾಗೂ 'ಭಕ್ತ ಕುಂಬಾರ' ಸಿನಿಮಾಗಳಲ್ಲಿ ಅಣ್ಣಾವ್ರ ಜೊತೆಗೆ ನಟಿಸುತ್ತಾರೆ. ಆ ಸಿನಿಮಾ ಸೆಟ್‌ಗಳಿಗೂ ಮಹಾಲಿಂಗ ಭಾಗವತರ್ ಮಗನನ್ನು ಕರೆದುಕೊಂಡು ಬಂದಿರುತ್ತಾರೆ. ನನ್ನ ಮಗ ವಿನೋದ್‌ ಎಂದು ಹೇಳಿಕೊಂಡಿದ್ದನ್ನು ನೋಡಿರುವ ಜನ ಈಗಲೂ ಇದ್ದಾರೆ."

Dwarakish cryptic statement Reason Behind Dr Rajkumar Leelavathi and Vinod raj Amid Controversy

"ಅಂದಿನ ಕಲಾವಿದರು, ತಂತ್ರಜ್ಞರಿಗೆ ರಾಜ್‌ಕುಮಾರ್ ಮಗ ವಿನೋದ್ ಎಂದು ಅನ್ನಿಸಿರಲಿಲ್ಲ. ಯಾಕೆಂದರೆ ಅವರ ಅಪ್ಪ ಯಾರು ಎಂದು ಗೊತ್ತಿತ್ತು. ಇದೆಲ್ಲ ಆದಮೇಲೆ ದ್ವಾರಕೀಶ್‌ ಅವರೊಟ್ಟಿಗೆ ಅಣ್ಣಾವ್ರು 2 ಸಿನಿಮಾ ಮಾಡಿದ ಮೇಲೆ ಡೇಟ್ಸ್ ಕೊಟ್ಟಿರಲ್ಲ. ಕಾರಣಾಂತರಗಳಿಂದ ಇಬ್ಬರು ದೂರ ಆಗಿರ್ತಾರೆ. 80ರ ದಶಕದಲ್ಲಿ ಶಿವರಾಜ್‌ಕುಮಾರ್ ಇಂಡಸ್ಟ್ರಿಗೆ ಬಂದು 'ಆನಂದ್' ಸಿನಿಮಾ ಹಿಟ್ ಆಗುತ್ತೆ. ಡೇಟ್ಸ್ ಕೇಳಿದಾಗ ಪಾರ್ವತಮ್ಮ, ಶಿವಣ್ಣನ ಡೇಟ್ಸ್ ಕೂಡ ಕೊಡಲ್ಲ. ಆಗ ಲೀಲಾವತಿಯವರ ಮನೆಗೆ ಹೋಗಿ ದ್ವಾರಕೀಶ್ ನಿಮ್ಮ ಮಗನನ್ನು ಹೀರೊ ಮಾಡ್ತೀನಿ ಎಂದು 'ಡ್ಯಾನ್ಸ್ ರಾಜ್‌ ಡ್ಯಾನ್ಸ್' ಸಿನಿಮಾ ಮಾಡ್ತಾರೆ"

"ವಿನೋದ್ ಎನ್ನುವ ಹೆಸರನ್ನು ವಿನೋದ್ ರಾಜ್ ಮಾಡಿ ಸಿನಿಮಾ ಮಾಡಿದರು. ಅದಕ್ಕೂ ಮುನ್ನ ಎಲ್ಲಾ ದಾಖಲೆಗಳಲ್ಲೂ ಹೆಸರು ವಿನೋದ್ ಅಂತಲೇ ಇತ್ತು. ರಾಜ್‌ ಅಂತ ಸೇರಿಸಿದ್ದು ನಾನು ಅಪರಾಧ ಎನ್ನಲ್ಲ. ಆ ಕಾಲದಲ್ಲಿ ಚರಣ್ ರಾಜ್, ಸುಂದರ್ ರಾಜ್ ಅಂತೆಲ್ಲಾ ಇದ್ದರು. ಸಂಪೂರ್ಣ ರಾಜ್‌ಮಯವಾಗಿತ್ತು. ಇಂಡಸ್ಟ್ರಿ ಅಂದರೆ ರಾಜ್ ಎನ್ನುವಂತಾಗಿತ್ತು. ಹಾಗಾಗಿ ಅದರ ಬಗ್ಗೆ ನನ್ನ ಆಕ್ಷೇಪಣೆ ಇಲ್ಲ. ಆದರೆ ದ್ವಾರಕೀಶ್ ಸಿನಿಮಾ ಪ್ರತಿಕಾಗೋಷ್ಠಿಯಲ್ಲಿ ಒಂದು ಹೇಳಿಕೆ ಕೊಡುತ್ತಾರೆ. ಅದೇ ಇಷ್ಟಕ್ಕೆಲ್ಲಾ ಕಾರಣ"

"ಅಂದು ದ್ವಾರಕೀಶ್ ಮಾತನಾಡುತ್ತಾ "ವಿನೋದ್ ರಾಜ್‌ ಹುಟ್ಟಿನ ಬಗ್ಗೆ ಗುಟ್ಟೊಂದು ಇದೆ. 'ಡ್ಯಾನ್ಸ್ ರಾಜ ಡ್ಯಾನ್ಸ್' ಸಿನಿಮಾ ಬಿಡುಗಡೆಯ ನಂತರ ಆ ಗುಟ್ಟನ್ನು ಬಹಿರಂಗ ಪಡಿಸುತ್ತೇನೆ" ಎಂದು ಹೇಳಿಕೆ ಕೊಡುತ್ತಾರೆ. ಸಿನಿಮಾ ಬಿಡುಗಡೆ ಆದಮೇಲೂ ದ್ವಾರಕೀಶ್ ಏನನ್ನೂ ಹೇಳಲ್ಲ. ಆದರೆ ಅದೊಂದು ಗುಟ್ಟು ಇದೆ ಎಂದು ಹೇಳಿದ್ದರಿಂದ ಇಷ್ಟೆಲ್ಲಾ ಆಯಿತು. ರಾಜ್‌ಕುಮಾರ್ ಹಾಗೂ ಲೀಲಾವತಿಯವರಿಗೆ ಸಂಬಂಧ ಎಂದು ಕೆಲವರಿಗೆ ಗೊತ್ತಿದ್ದರಿಂದ ಎರಡನ್ನು ಲಿಂಕ್ ಮಾಡಿ ಅವರ ಮಗ ವಿನೋದ್ ರಾಜ್ ಅನ್ನೋದು ತಾನೇ ತಾನಾಗಿ ಬೆಳೆದುಕೊಂಡು ಹೋಯಿತು"

Dwarakish cryptic statement Reason Behind Dr Rajkumar Leelavathi and Vinod raj Amid Controversy

"ಯಾರು ಕೂಡ ಬಾಯಿ ಬಿಟ್ಟು ಏನು ಅನ್ನುವುದನ್ನು ಹೇಳಲಿಲ್ಲ. ಆದರೆ ದ್ವಾರಕೀಶ್ ಹೇಳದೆಯೇ ಹೇಳಿದಂತೆ ಅದು ಬೆಳೆದುಕೊಂಡು ಹೋಯಿತು. ಬರೀ ಅಂತೆಕಂತೆಯಲ್ಲೇ ಎಲ್ಲಾ ಆಗಿ ಹೋಯಿತು. ಲೀಲಾವತಿ ಅವರಿಗೂ ಹೇಳಲು ಧೈರ್ಯ ಇರಲಿಲ್ಲ. ಯಾಕಂದರೆ ಅವರಿಗೆ ಸತ್ಯ ಗೊತ್ತಿತ್ತು. ನಂತರ ಅವರ ಮಗ ಸ್ಟಾರ್ ಆದಮೇಲೆ ಸಿನಿಮಾ ನಿರ್ಮಾಣ ಆರಂಭಿಸಿದರು. ವಿನೋದ್ ರಾಜ್ ಮಾಡಿದ 'ನಂಜುಂಡ', 'ಕನ್ನಡದ ಕಂದ', 'ರಾಜಣ್ಣ' ಎಲ್ಲಾ ಸಿನಿಮಾಗಳಲ್ಲಿ ಅಪ್ಪ, ಹೆಂಡತಿ, ಮಗನಿಗೆ ಮೋಸ ಮಾಡಿದ ಕಥೆಯನ್ನೇ ಹೇಳಿದ್ದರು. ಆ ಮೂಲಕ ಕೂಡ ಸುಳ್ಳು ಕಥೆಯನ್ನು ಸತ್ಯ ಎಂದು ಹಬ್ಬಿಸುತ್ತಾ ಹೋದರು."

"ಯಾವಾಗ ರವಿ ಬೆಳಗೆರೆಯವರ ಬಳಿ 'ರಾಜ್ ಲೀಲಾ ವಿನೋದ' ಪುಸ್ತಕ ಬರೆಸಿದರೋ ಆಗ ಆ ಸುಳ್ಳನ್ನು ಸತ್ಯ ಮಾಡಲು ಹೋದರು. ಅಣ್ಣಾವ್ರು ಇಲ್ಲ ಎನ್ನುವ ಒಂದೇ ಒಂದು ಧೈರ್ಯದಿಂದ" ಎಂದು ಪ್ರಕಾಶ್ ರಾಜ್ ಮೇಹು ವಿವರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಮ್ಮ 'ಅಂತರಂಗದ ಅಣ್ಣ' ಪುಸ್ತಕದಲ್ಲಿ ಬರೆದಿರುವುದಾಗಿ ತಿಳಿಸಿದ್ದಾರೆ. ಪ್ರಕಾಶ್ ರಾಜ್ ಮೇಹು ಹೇಳಿಕೆ ವೈರಲ್ ಆಗುತ್ತಿದೆ.

More from Filmibeat

English summary
Dwarakish cryptic statement Reason Behind Dr Rajkumar, Leelavathi and Vinod raj Amid Controversy. Director Prakash Raj Mehu Shocking Comments on Actor, Director, Producer Dwarakish. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X