ದ್ವಾರಕೀಶ್ ಆರೋಗ್ಯದ ಸ್ಥಿತಿ ಬಗ್ಗೆ ಸುಳ್ಳು ಸುದ್ದಿ- ಫಿಲ್ಮಿಬೀಟ್ ಗೆ ನಿರ್ದೇಶಕ ಚೈತನ್ಯ ಸ್ಪಷ್ಟನೆ
''ದ್ವಾರಕೀಶ್ ಸರ್ ಆರಾಮಾಗಿ ಇದ್ದಾರೆ. ಅವರ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು'' ಎಂದು ನಿರ್ದೇಶಕ ಕೆ ಎಮ್ ಚೈತನ್ಯ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ.
ಕಳೆದ ರಾತ್ರಿಯಿಂದ ವಾಟ್ಸ್ ಅಪ್ ನಲ್ಲಿ ದ್ವಾರಕೀಶ್ ಆರೋಗ್ಯದ ಬಗ್ಗೆ ಕೆಲವು ಮೆಸೇಜ್ ಗಳು ಹರಿದಾಡಿದವು. ದ್ವಾರಕೀಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕೆಲವು ಸುದ್ದಿಗಳು ಬಂದರೆ, ಕೆಲವು ಕಡೆ RIP ದ್ವಾರಕೀಶ್ ಎಂಬ ಮೆಸೇಜ್ ಗಳು ಬಂದವು.
ಈ ಘಟನೆಯ ಬಗ್ಗೆ ಮಾತನಾಡಿರುವ ನಿರ್ದೇಶಕ ಚೈತನ್ಯ ''ನನಗೆ ನಿನ್ನೆ ಮಧ್ಯರಾತ್ರಿ ಈ ವಿಷಯ ತಿಳಿಯಿತು. ಆಗ ತಕ್ಷಣ ಅವರ ಮಗನ ಜೊತೆಗೆ ಮಾತನಾಡಿದೆ. ದ್ವಾರಕೀಶ್ ಸರ್ ಗೆ ಏನು ಆಗಿಲ್ಲ ಎಂದು ಅವರು ಹೇಳಿದ್ದಾರೆ. ವಯಸ್ಸಾಗಿರುವ ಆಗಿರುವ ಕಾರಣ ಆಗಾಗ ಆಸ್ಪತ್ರೆಗೆ ಹೋಗಬೇಕಾಗುತ್ತದೆ ಅಷ್ಟೇ.'' ಎಂದು ತಿಳಿಸಿದ್ದಾರೆ. ಸದ್ಯ, ದ್ವಾರಕೀಶ್ ಆರೋಗ್ಯ ಸ್ಥಿತಿ ಸಹಜವಾಗಿ ಇದ್ದು, ಅವರು ಮನೆಯಲ್ಲಿಯೇ ಇದ್ದಾರಂತೆ.

ಅಂದಹಾಗೆ, ನಿರ್ದೇಶಕ ಚೈತನ್ಯ ದ್ವಾರಕೀಶ್ ಬ್ಯಾನರ್ ನಲ್ಲಿ 'ಆಟಗಾರ' ಹಾಗೂ 'ಅಮ್ಮ ಐ ಲವ್ ಯೂ' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ, ದ್ವಾರಕೀಶ್ ಕುಟುಂಬದ ಆಪ್ತರಲ್ಲಿ ಒಬ್ಬರಾಗಿದ್ದಾರೆ.


Click it and Unblock the Notifications











