ಸಿನಿಮಾಗಳು ಸೋತು ನಾಲ್ಕೈದು ಮನೆ ಮಾರಿದ್ದಾರೆ ದ್ವಾರಕೀಶ್

''ಸಿನಿಮಾ ಬಿಟ್ಟು ನಾನು ಬೇರೆನೂ ಮಾಡಿಲ್ಲ. ಸಿನಿಮಾ ಸಿನಿಮಾ ಎಂದು ಸಿನಿಮಾದಲ್ಲಿಯೇ ಸತ್ತಿದ್ದೇನೆ.'' ಎಂದು ಭಾವುಕವಾಗಿ ಮಾತನಾಡಿದರು ದ್ವಾರಕೀಶ್.

ನಿರ್ಮಾಪಕ ಜಯಣ್ಣಗೆ ದ್ವಾರಕೀಶ್ 5 ಕೋಟಿ ಹಣ ನೀಡಬೇಕಿದ್ದು, ಈ ಘಟನೆ ಈಗ ದೊಡ್ಡ ಸುದ್ದಿಯಾಗಿದೆ. ಈ ಬಗ್ಗೆ ಮಾತನಾಡಿರುವ ದ್ವಾರಕೀಶ್ ''ಅವರು ಕೋರ್ಟ್ ಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಹೀಗೆಲ್ಲ ಮಾಡುವುದು ತಪ್ಪು. ಕೋರ್ಟ್ ಆದೇಶ ನೀಡಿದರೆ ಮನೆ ಮಾರಿಯಾದರೂ ಹಣ ನೀಡುತ್ತಿದ್ದೆ.'' ಎಂದಿದ್ದಾರೆ.

ಈ ಹಿಂದೆ ಸಿನಿಮಾಗಳು ಸೋತಾಗ ದ್ವಾರಕೀಶ್ ಮನೆ ಮಾರಿಯೇ ಸಾಲ ತೀರಿಸಿದ್ದಾರಂತೆ. ತಮ್ಮ ಜೀವನದಲ್ಲಿ 80 ಕೋಟಿ ರೂಪಾಯಿ ಮನೆಗಳನ್ನು ಮಾರಿದ್ದೇನೆ ಎಂದು ಅವರೇ ಹೇಳಿದ್ದಾರೆ.

Dwarakish Reaction About His And Jayanna Financial Fight

ದ್ವಾರಕೀಶ್ ಗೆ ಈ ಹಿಂದೆ ಅನೇಕ ಬಾರಿ ಮನೆ ಮಾರುವ ಪರಿಸ್ಥಿತಿ ಬಂದಿದೆ. ಹೀಗಾಗಿ ನಾಲ್ಕೈದು ಬಾರಿ ಅವರ ಮನೆ ಬದಲಾಗಿದೆ. ಬನಶಂಕರಿಯ ಮನೆ, ಎನ್ ಆರ್ ಕಾಲೋನಿಯ ಮನೆ, ಕೋರಮಂಗಲದ ಮನೆ ಹೀಗೆ ನಾಲ್ಕೈದು ಮನೆಯನ್ನು ದ್ವಾರಕೀಶ್ ಮಾರಿದ್ದಾರೆ. ಸದ್ಯ ಎಚ್ ಎಸ್ ಆರ್ ಲೇ ಔಟ್ ನಲ್ಲಿ ವಾಸವಾಗಿದ್ದಾರೆ.

'ಆಯುಷ್ಮಾನ್ ಭವ' ಸಿನಿಮಾವನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. ಸಿನಿಮಾ ಯಶಸ್ಸು ಕಾಣದ ಕಾರಣ ಅವರ ಜಯಣ್ಣಗೆ ನೀಡಬೇಕಾದ ಹಣ ನೀಡಲು ಆಗಲಿಲ್ಲ. ಇದರಿಂದ ಜಯಣ್ಣ ಹಾಗೂ ಯೋಗೇಶ್ ದ್ವಾರಕೀಶ್ ನಡುವೆ ಗಲಾಟೆ ನಡೆದಿದೆ. ಈಗ ಮತ್ತೆ ದ್ವಾರಕೀಶ್ ಮನೆ ಮಾರುವ ಮಾತನ್ನು ಆಡಿದ್ದಾರೆ.

More from Filmibeat

English summary
Producer Dwarakish reaction about his and Jayanna financial fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X