ಸೆಟ್ಟೇರಿತು ದ್ವಾರಕೀಶ್ ಬ್ಯಾನರ್ ನ 51ನೇ ಸಿನಿಮಾ 'ಅಮ್ಮ ಐ ಲವ್ ಯು'
ನಟಿ ಮೇಘನಾ ರಾಜ್ ಜೊತೆ ನಿಶ್ಚಿತಾರ್ಥ ನೆರವೇರಿದ ಬಳಿಕ ಚಿರಂಜೀವಿ ಸರ್ಜಾ ರವರ ಹೊಸ ಚಿತ್ರ ಸೆಟ್ಟೇರಿದೆ. ದ್ವಾರಕೀಶ್ ಬ್ಯಾನರ್ ನ 51ನೇ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟಿಸುತ್ತಿದ್ದು, ಚಿತ್ರಕ್ಕೆ 'ಅಮ್ಮ ಐ ಲವ್ ಯು' ಎಂದು ಹೆಸರಿಡಲಾಗಿದೆ.
ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.

'ಅಮ್ಮ ಐ ಲವ್ ಯು' ಹೆಸರಿನ ಈ ಚಿತ್ರ ತಮಿಳಿನ 'ಪಿಚ್ಚಕಾರನ್' ಸಿನಿಮಾದ ರೀಮೇಕ್ ಆಗಿದ್ದು, 50 ದಿನಗಳ ಕಾಲ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ವಿದೇಶಗಳಲ್ಲಿ ಚಿತ್ರೀಕರಣಗೊಳ್ಳಲಿದೆ.
ಚಿರಂಜೀವಿ ಸರ್ಜಾ, ಸಿತಾರಾ, ಪ್ರಕಾಶ್ ಬೆಳವಾಡಿ, ಗಿರೀಶ್ ದ್ವಾರಕೀಶ್ ಮುಂತಾದವರು 'ಅಮ್ಮ ಐ ಲವ್ ಯು' ತಾರಾಗಣದಲ್ಲಿದ್ದು, ಚಿತ್ರಕ್ಕೆ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜಿಸಲಿದ್ದಾರೆ.
More from Filmibeat
English summary
Chiranjeevi Sarja starrer Dwarakish's 51st film 'Amma I Love You' launched. ದ್ವಾರಕೀಶ್ ಬ್ಯಾನರ್ ನ 51ನೇ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟಿಸುತ್ತಿದ್ದು, ಚಿತ್ರಕ್ಕೆ 'ಅಮ್ಮ ಐ ಲವ್ ಯು' ಎಂದು ಹೆಸರಿಡಲಾಗಿದೆ.
chiranjeevi sarja dwarakish kannada movie sandalwood ಚಿರಂಜೀವಿ ಸರ್ಜಾ ದ್ವಾರಕೀಶ್ ಕನ್ನಡ ಸಿನಿಮಾ ಸ್ಯಾಂಡಲ್ ವುಡ್


Click it and Unblock the Notifications











