ರಚಿತಾ ರಾಮ್ ರನ್ನು ಶ್ರೀದೇವಿಗೆ ಹೋಲಿಸಿದ ದ್ವಾರಕೀಶ್
Recommended Video
ನಟಿ ರಚಿತಾ ರಾಮ್ ಸ್ಟಾರ್ ಗಳ ಜೊತೆ ನಟಿಸುವುದರ ಮೂಲಕ ತಾವು ಕೂಡ ಸ್ಟಾರ್ ನಟಿಯಾಗಿದ್ದಾರೆ. ಇದೀಗ ರಚಿತಾ ತಮ್ಮ ನಟನೆಯ ಮೂಲಕ ದೊಡ್ಡ ಹೊಗಳಿಕೆಯೊಂದನ್ನು ನಟ ದ್ವಾರಕೀಶ್ ರಿಂದ ಪಡೆದುಕೊಂಡಿದ್ದಾರೆ.
'ಆಯುಷ್ಮಾನ್ ಭವ' ಸಿನಿಮಾದಲ್ಲಿ ರಚಿತಾ ರಾಮ್ ನಟಿಸಿದ್ದು, ಅವರ ಅಭಿನಯದ ನೋಡಿ, ಶ್ರೀದೇವಿ ನೋಡಿದ ಹಾಗೆ ಆಯ್ತು ಎಂದು ದ್ವಾರಕೀಶ್ ಹೇಳಿದ್ದಾರೆ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ದ್ವಾರಕೀಶ್ ಈ ಮಾತನ್ನು ಆಡಿದರು.

ಸಿನಿಮಾ ನೋಡಿರುವ ದ್ವಾರಕೀಶ್ ನಿರ್ದೇಶಕ ಪಿ ವಾಸು ಅವರನ್ನು ಕೆ ಬಾಲಚಂದರ್ ರಿಗೆ, ನಟ ಶಿವರಾಜ್ ಕುಮಾರ್ ರನ್ನು ಕಮಲ್ ಹಾಸನ್ ರಿಗೆ ಹಾಗೂ ರಚಿತಾ ರಾಮ್ ಅನ್ನು ಕನಸಿನ ರಾಣಿ ಶ್ರೀದೇವಿಗೆ ಹೋಲಿಸಿದರು. ದ್ವಾರಕೀಶ್ ರಿಂದ ಈ ಹೊಗಳಿಕೆ ಪಡೆದ ರಚಿತಾ ಸಖತ್ ಖುಷಿಯಾದರು.
ಅಂದಹಾಗೆ, 'ಆಯುಷ್ಮಾನ್ ಭವ' ದ್ವಾರಕೀಶ್ ನಿರ್ಮಾಣದ ಚಿತ್ರವಾಗಿದೆ. ಮೊದಲ ಬಾರಿಗೆ ರಚಿತಾ, ದ್ವಾರಕೀಶ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಫಸ್ಟ್ ಟೈಂ ಶಿವಣ್ಣನ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

ಸಿನಿಮಾದ ಪಾತ್ರದ ಬಗ್ಗೆ ಮಾತನಾಡಿರುವ ರಚಿತಾ ರಾಮ್ ''ಪಿ ವಾಸು ಸರ್ ಸಿನಿಮಾದಲ್ಲಿ ನಾಯಕಿಯರಿಗೆ ಬೇಕಾಬಿಟ್ಟಿ ಪಾತ್ರ ಇರುವುದಿಲ್ಲ. ನನ್ನ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇದೆ'' ಎಂದು ಹೇಳಿದ್ದಾರೆ.


Click it and Unblock the Notifications











