ದ್ವಾರಕೀಶ್ ಬ್ಯಾನರ್ ನಲ್ಲಿ ಮೊದಲ ಬಾರಿಗೆ ಶಿವಣ್ಣ ಸಿನಿಮಾ!
ನಟ ಶಿವರಾಜ್ ಕುಮಾರ್ ಅವರ ಖಾತೆಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಅದರ ಜೊತೆಗೆ ಅವರ ಹುಟ್ಟುಹಬ್ಬದ ವಿಶೇಷವಾಗಿ ಒಂದಷ್ಟು ಸಿನಿಮಾಗಳು ಅನೌನ್ಸ್ ಆಗಿವೆ. ಅವುಗಳಲ್ಲಿ ದ್ವಾರಕೀಶ್ ಬ್ಯಾನರ್ ಸಿನಿಮಾ ಕೂಡ ಒಂದಾಗಿದೆ.
ಇತ್ತೀಚೆಗಷ್ಟೆ ದ್ವಾರಕೀಶ್ ಬ್ಯಾನರ್ ನಲ್ಲಿ ಬಂದ 'ಅಮ್ಮ ಐ ಲವ್ ಯೂ' ಸಿನಿಮಾ ಯಶಸ್ವಿಯಾಗಿತ್ತು. ಆದರೆ ಆ ಚಿತ್ರದ ನಂತರ ಈಗ ದ್ವಾರಕೀಶ್ ಸಂಸ್ಥೆಯ ಹೊಸ ಸಿನಿಮಾದ ಪ್ಲಾನಿಂಗ್ ನಡೆಯುತ್ತಿದೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಸಿನಿಮಾಗೆ ದ್ವಾರಕೀಶ್ ಸಂಸ್ಥೆ ಬಂಡವಾಳ ಹಾಕುತ್ತಿದೆ.
ಅಂದಹಾಗೆ, ಶಿವರಾಜ್ ಕುಮಾರ್ ಅವರ ಈ ಹೊಸ ಸಿನಿಮಾದ ಕೆಲವು ವಿವರಗಳು ಮುಂದಿದೆ ಓದಿ...

ದ್ವಾರಕೀಶ್ ಸಂಸ್ಥೆಯ 52ನೇ ಸಿನಿಮಾ
'ಚೌಕ' ಸಿನಿಮಾ ದ್ವಾರಕೀಶ್ ಬ್ಯಾನರ್ ನಲ್ಲಿ ಬಂದ 50ನೇ ಸಿನಿಮಾವಾಗಿತ್ತು. 'ಅಮ್ಮ ಐ ಲವ್ ಯೂ' 51ನೇ ಚಿತ್ರವಾಗಿತ್ತು. ಈಗ ಈ ಎರಡು ಹಿಟ್ ಸಿನಿಮಾಗಳ ಬಳಿಕ 52ನೇ ಸಿನಿಮಾ ಶುರುವಾಗುತ್ತಿದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರ್ ನಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.

ಪಿ.ವಾಸು ನಿರ್ದೇಶನ
ದ್ವಾರಕೀಶ್ ಹಾಗೂ ಶಿವರಾಜ್ ಕುಮಾರ್ ಜೋಡಿಯ ಈ ಸಿನಿಮಾವನ್ನು ಪಿ.ವಾಸು ನಿರ್ದೇಶನ ಮಾಡುತ್ತಾರೆ. ಈ ಹಿಂದೆ ಶಿವರಾಜ್ ಕುಮಾರ್ ಅವರಿಗೆ 'ಶಿವಲಿಂಗ' ಸಿನಿಮಾ ಮಾಡಿದ್ದ ಪಿ.ವಾಸು ಆ ಹಿಟ್ ಚಿತ್ರದ ನಂತರ ಮತ್ತೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮತ್ತೆ ಒಂದಾದ 'ಆಪ್ತಮಿತ್ರ' ಜೋಡಿ
ಈ ಹಿಂದೆ ಪಿ.ವಾಸು ನಿರ್ದೇಶನ ಮಾಡಿದ್ದ 'ಆಪ್ತಮಿತ್ರ' ಸಿನಿಮಾವನ್ನು ದ್ವಾರಕೀಶ್ ಚಿತ್ರ ಸಂಸ್ಥೆ ನಿರ್ಮಾಣ ಮಾಡಿತ್ತು. ಆ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ದೊಡ್ಡ ಹಿಟ್ ಸಿನಿಮಾವಾಗಿತ್ತು. ಈ ಚಿತ್ರದ ಬಳಿಕ ಈಗ ಮತ್ತೆ ದ್ವಾರಕೀಶ್ ಬ್ಯಾನರ್ ನಲ್ಲಿ ಪಿ.ವಾಸು ಸಿನಿಮಾ ಮಾಡುತ್ತಿದ್ದಾರೆ.

ಹೆಚ್ಚಿನ ಮಾಹಿತಿ ಇಲ್ಲ
ಸದ್ಯಕ್ಕೆ ದ್ವಾರಕೀಶ್ ಬ್ಯಾನರ್ ನಲ್ಲಿ ಶಿವಣ್ಣ ನಟಿಸುತ್ತಿರುವ ಸುದ್ದಿ ಬಹಿರಂಗ ಆಗಿದೆ. ಅದು ಬಿಟ್ಟರೆ ಆ ಸಿನಿಮಾದ ಹೆಸರು, ಕಲಾವಿದರ ಪಟ್ಟಿ ಸೇರಿದಂತೆ ಹೆಚ್ಚಿನ ವಿವರಗಳು ಹೊರ ಬಂದಿಲ್ಲ.

ಶಿವಣ್ಣನ ಸಿನಿಮಾಗಳು
ಸದ್ಯ ಶಿವರಾಜ್ ಕುಮಾರ್ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. 'ದಿ ವಿಲನ್', 'ಕವಚ', 'ರುಸ್ತುಂ', 'ಎಸ್.ಆರ್.ಕೆ', 'ದ್ರೋಣ' ಶಿವಣ್ಣನ ಮುಂದಿನ ಸಿನಿಮಾಗಳಾಗಿವೆ.


Click it and Unblock the Notifications











