ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಹಾಸ್ಯನಟ ದರ್ಶನ್‌ಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಪ್ರಭಾವಿಗಳು. ತೆರೆಯ ಮೇಲೆ ಎಷ್ಟೇ ಒಳ್ಳೆಯವರಾಗಿ ಕಂಡರೂ, ತೆರೆಯ ಹಿಂದೆ ತಪ್ಪುಗಳನ್ನು ಮಾಡಿ ಸಿಕ್ಕಿ ಬಿದ್ದ ಅದೆಷ್ಟೋ ಉದಾಹರಣೆಗಳು ಇದ್ದಾವೆ. ಇಂತಹದ್ದೇ ಒಂದು ಪ್ರಕರಣ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಹಿನ್ನೆಲೆಯಲ್ಲಿ ಹಾಸ್ಯನಟ ದರ್ಶನ್ ಎಂಬುವವರಿಗೆ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ.
ಹರಿಯಾಣ ಜನಪ್ರಿಯರ ಕುಬ್ಜ ಹಾಸ್ಯ ನಟ ದರ್ಶನ್, ಈ ಕಠಿಣ ಶಿಕ್ಷೆಗೆ ಒಳಗಾಗಿದ್ದಾನೆ. ಹರಿಯಾಣದ ಹಿಸಾರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಟನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಈ ನಟರ ಮೇಲೆ ಪೋಕ್ಸೋ ಕೇಸ್ ದಾಖಲಾಗಿತ್ತು. ತನಿಖೆಯಲ್ಲಿ ಹಾಸ್ಯನಟ ದರ್ಶನ್ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿರುವುದು ಸಾಬೀತಾದ ಬೆನ್ನಲ್ಲೇ ಈ ಶಿಕ್ಷೆ ವಿಧಿಸಲಾಗಿದೆ.

ಅಷ್ಟಕ್ಕೂ ಘಟನೆ ಬಗ್ಗೆ ನೋಡುವುದಾರೆ, ಹರಿಯಾಣದ ಕಬ್ಜ ಹಾಸ್ಯ ನಟ ದರ್ಶನ್ ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಫೇಮಸ್. ಈತ ಯೂಟ್ಯೂಬ್‌ಗಾಗಿ ಕಾಮಿಡಿ ವಿಡಿಯೋಗಳನ್ನು ಮಾಡುತ್ತಿದ್ದ. ಇಂತಹದ್ದೆ ಒಂದು ವಿಡಿಯೋದಲ್ಲಿ ನಟಿಸುವಂತೆ ಅಲ್ಲಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿಯೊಬ್ಬಳನ್ನು ಸಂಪರ್ಕ ಮಾಡಿದ್ದ. ಬಳಿಕ ತನ್ನ ವಿಡಿಯೋದಲ್ಲಿ ನಟಿಸುವುದಕ್ಕೆ ಅವಕಾಶ ಕೊಡುವುದಾಗಿ ನಂಬಿಸಿ ಆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆಂದು ಆರೋಪಿಸಲಾಗಿತ್ತು.
ಸಂತ್ರಸ್ಥೆಯ ವಕೀಲರಾದ ರೇಖಾ ಮಿತ್ತಲ್ ಅವರ ಪ್ರಕಾರ, 2020, ಸೆಪ್ಟೆಂಬರ್ 21ರಂದು ಹಾಸ್ಯನಟ ದರ್ಶನ್ ಅಪ್ರಾಪ್ತ ಬಾಲಕಿಯನ್ನು ವಿಡಿಯೋ ಶೂಟ್ ಮಾಡುವುದಕ್ಕೆಂದು ತನ್ನಲ್ಲಿಗೆ ಕರೆಸಿಕೊಂಡಿದ್ದ. ಬಳಿಕ ಆಕೆಯನ್ನು ಚಂಡೀಗಢಕ್ಕೆ ಬರುವಂತೆ ಒತ್ತಡವನ್ನು ಹಾಕಿದ್ದ. ಆಕೆ ಬರಲು ನಿರಾಕರಿಸಿದಾಗ ಬೆದರಿಕೆ ಹಾಕಿ ಕರೆದುಕೊಂಡು ಹೋಗಿದ್ದ. ತನ್ನ ಸಹೋದರನೊಂದಿಗೆ ಬಾಲಕಿಯನ್ನು ಚಂಢೀಗಡಕ್ಕೆ ಕರೆದುಕೊಂಡು ಹೋಗಿ ಹೋಟೆಲ್ ರೂಮ್‌ನಲ್ಲಿ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಿದ್ದಾರೆ.
ಇಷ್ಟೆ ಅಲ್ಲ. ಬಾಲಕಿ ಅಪ್ರಾಪ್ತೆಯಾಗಿದ್ದರಿಂದ ವಯಸ್ಕಳಂತೆ ತೋರಿಸುವುದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದ. ಹಾಗೇ ತನ್ನನೊಂದಿಗೆ ಮದುವೆಯಾಗುವಂತೆ ಬಲವಂತ ಮಾಡಿದ್ದ. ಸಂತ್ರಸ್ತೆ ಮನೆಗೆ ತೆರಳಿದ ಬಳಿಕ ತಾಯಿಯ ಬಳಿಕ ನಡೆದ ಘಟನೆ ಹೇಳಿಕೊಂಡಿದ್ದಳು. ಮಗಳಿಗಾದ ಅನ್ಯಾಯವನ್ನು ಅರಿತ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಆ ಬಳಿಕ ದರ್ಶನ್‌ರನ್ನು ಬಂಧಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣ ಹಾಸ್ಯ ನಟ ದರ್ಶನ್ ಮಾರ್ಚ್ 11ರಂದೇ ತಪ್ಪಿತಸ್ಥ ಎಂದು ತಿಳಿದು ಬಂದಿತ್ತು. ಅಂದಿನಿಂದ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್‌ರನ್ನು ಇರಿಸಲಾಗಿತ್ತು. ಈ ಸಂಬಂಧ ಹರಿಯಾಣ ನ್ಯಾಯಾಲಯ ಪೋಕ್ಸೊ ಕಾಯ್ದೆಯಡಿ 20 ವರ್ಷ ಜೈಲು ಶಿಕ್ಷೆ ಸೇರಿದಂತೆ 1 ಲಕ್ಷ ರೂ. ದಂಡ ವಿಧಿಸಿದೆ. ಭಾರತೀಯ ದಂಡ ಸಂಹಿತೆ ಪ್ರಕಾರ, 363, 343 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ಹಾಸ್ಯ ನಟ ದರ್ಶನ್‌ಗೆ ಈ ಪ್ರಕರಣದಲ್ಲಿ ಜಾಮೀನು ಸಿಕ್ಕಿತ್ತು. ಆದರೂ, ದರ್ಶನ್ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು ಸಾಬೀತಾಗಿದ್ದರಿಂದ ಶಿಕ್ಷೆ ಪ್ರಕಟವಾಗಿದೆ. ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.


Click it and Unblock the Notifications











