For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದ ಯೋಗಿ ಸ್ಟೈಲ್: ಈ ಸಲಾ ಕಪ್ ನಮ್ದೆ

  By Bharath Kumar
  |
  ಈ ಸಲ ಕಪ್ ನಮ್ಮದೇ ಅಂತಿದ್ದಾರೆ ಲೂಸ್ ಮಾದ | Filmibeat Kannada

  'ಈ ಸಲಾ ಕಪ್ ನಮ್ದೆ'.....ಕರ್ನಾಟಕದಲ್ಲಿ ಎಲ್ಲೇ ನೋಡಿದ್ರೂ ಈ ಡೈಲಾಗ್ ಈಗ ಟ್ರೆಂಡ್ ಆಗಿದೆ. ಐಪಿಎಲ್ ಕ್ರಿಕೆಟ್ ನಲ್ಲಿ 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ಈ ಸಲಾ ಕಪ್ ಗೆದ್ದೇ ಗೆಲ್ಲುತ್ತೆ ಎಂಬ ವಿಶ್ವಾಸದಲ್ಲಿರುವ ಅಭಿಮಾನಿಗಳು 'ಈ ಸಲಾ ಕಪ್ ನಮ್ದೆ' ಎಂಬ ಘೋಷವಾಕ್ಯವನ್ನ ವೈರಲ್ ಮಾಡಿದ್ದಾರೆ.

  ಇದೀಗ, ಸ್ಯಾಂಡಲ್ ವುಡ್ ನಟ ಲೂಸ್ ಮಾದ ಯೋಗಿ ಕೂಡ ತಮ್ಮದೇ ಸ್ಟೈಲ್ ನಲ್ಲಿ 'ಈ ಸಲಾ ಕಪ್ ನಮ್ದೆ' ಎನ್ನುತ್ತಿದ್ದಾರೆ. ಹೌದು, ಯೋಗಿ ನಾಯಕರಾಗಿ ನಟಿಸುತ್ತಿರುವ, 'ಲಂಬೋದರ' ಚಿತ್ರತಂಡ ಐಪಿಎಲ್ ಗಾಗಿ 30 ಸೆಕೆಂಡ್‍ನ ಪ್ರಮೋಷನ್ ವಿಡಿಯೋ ಬಿಡುಗಡೆ ಮಾಡಿದ್ದು, ಈ ಸಾಂಗ್ ಈಗ ಸಖತ್ ಸದ್ದು ಮಾಡುತ್ತಿದೆ.

  ಐಪಿಎಲ್ ಉದ್ಘಾಟನೆ ದಿನ ಈ ನಟನ ಡ್ಯಾನ್ಸ್ ಗೆ ಅತಿ ಹೆಚ್ಚು TRP.!ಐಪಿಎಲ್ ಉದ್ಘಾಟನೆ ದಿನ ಈ ನಟನ ಡ್ಯಾನ್ಸ್ ಗೆ ಅತಿ ಹೆಚ್ಚು TRP.!

  ಈ ಪ್ರಮೋಷನಲ್ ಹಾಡಿನಲ್ಲಿ ಲೂಸ್ ಮಾದ ಯೋಗಿ ಜೊತೆ ಧರ್ಮಣ್ಣ ಮತ್ತು ಸಿದ್ದು ಕೂಡ ಕಾಣಿಸಿಕೊಂಡಿದ್ದಾರೆ. ಪೆನಿಸಿಯಾ ಸ್ಟುಡಿಯೋ ಚಿತ್ರೀಕರಿಸಿರುವ ಈ ವಿಡಿಯೋದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ.

  ಅಂದ್ಹಾಗೆ, ಕೆ.ಕೃಷ್ಣರಾಜ್ ನಿರ್ದೇಶನದ 'ಲಂಬೋದರ' ಚಿತ್ರವನ್ನ ವೃಷಾಂಕ್ ಮೂವಿ ಮೇಕರ್ಸ್ ಲಾಂಛನದಲ್ಲಿ ವಿಶ್ವೇಶ್ವರ್ ಪಿ. ಹಾಗೂ ರಾಘವೇಂದ್ರ ಭಟ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಶರ್ಮ ಸಂಗೀತ ನಿರ್ದೇಶನ, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಹಾಗೂ ಹರೀಶ್ ಗಿರಿಗೌಡ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ರಚಿಸಿದ್ದಾರೆ.

  ಇನ್ನುಳಿದಂತೆ ಈ ಚಿತ್ರದ ನಾಯಕಿ ಆಕಾಂಕ್ಷಾ. ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗಡೆ, ಸಿದ್ದು ಮೂಲಿಮನಿ ಪ್ರಮುಖರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  The shooting for Yogi starrer 'Lambodara' is in full progress and now the team has released a promotional video for the promotion of Indian Premier League. Yogi, Dharmanna and Siddu has featured in the promotional song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X