»   » ಬೆಳಗ್ಗೆ ಭೂಮಿ ಕಂಪಿಸಿದ್ದಕ್ಕೆ ಗಡಗಡ ನಡುಗಿದ ನಟಿ ರಕ್ಷಿತಾ ಪ್ರೇಮ್.!

ಬೆಳಗ್ಗೆ ಭೂಮಿ ಕಂಪಿಸಿದ್ದಕ್ಕೆ ಗಡಗಡ ನಡುಗಿದ ನಟಿ ರಕ್ಷಿತಾ ಪ್ರೇಮ್.!

Posted By:
Subscribe to Filmibeat Kannada

ಇಂದು (ಏಪ್ರಿಲ್ 18) ಬೆಳ್ಳಂಬೆಳಗ್ಗೆಯೇ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಭೂಕಂಪನದ ಅನುಭವವಾಗಿದೆ. 2-3 ಸೆಕೆಂಡ್ ಗಳ ಕಾಲ ಮಾತ್ರ ಭೂಮಿ ಕಂಪಿಸಿದೆ. ಇದು ಹಲವರ ಆತಂಕಕ್ಕೆ ಕಾರಣವಾಗಿದೆ.

ಕರುನಾಡಲ್ಲಿ ಬೆಳ್ಳಂಬೆಳಗ್ಗೆಯೇ ಇಷ್ಟೆಲ್ಲ ಆದರೂ, ಭೂಕಂಪನದ ಅನುಭವ ಅನೇಕರಿಗೆ ಆಗಿಲ್ಲ. ಹೀಗಾಗಿ ''ಇದೆಲ್ಲ ಸುಳ್ಳು ಸುದ್ದಿ.. ನಂಬಲಸಾಧ್ಯ'' ಅಂತೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ. [ಮಂಡ್ಯ, ರಾಮನಗರದಲ್ಲಿ ಭೂಕಂಪ: ಆತಂಕದಲ್ಲಿ ಜನರು]

Earth Quake in Bengaluru: Rakshitha Prem's experience

ಯಾರು ಏನೇ ಹೇಳಿದರೂ, ಬೆಂಗಳೂರಿನಲ್ಲಿ ಭೂಕಂಪ ಆಗಿರುವುದು ನಿಜ. ಅದಕ್ಕೆ ಸಾಕ್ಷಿ ನಟಿ ರಕ್ಷಿತಾ ಪ್ರೇಮ್ ಫೇಸ್ ಬುಕ್ ನಲ್ಲಿ ಬರೆದಿರುವ ಸಾಲುಗಳು....

ಭೂಮಿ ಕಂಪಿಸಿದಾಗ... ಅದು ಭ್ರಮೆಯೋ... ಕನಸೋ... ಎಂಬುದೇ ನಟಿ ರಕ್ಷಿತಾ ರವರಿಗೆ ಗೊತ್ತಾಗಲಿಲ್ವಂತೆ. ನಂತರ ಇದು 'ಭೂಕಂಪ' ಎಂದು ಅವರಿಗೂ ಗೊತ್ತಾಗಿದೆ. ಇದೇ ಕಾರಣಕ್ಕೆ 'ಹ್ಯಾವ್ ಎ ಸ್ಟೇಬಲ್ ಡೇ ಅಹೆಡ್' ಅಂತ ರಕ್ಷಿತಾ ಮೇಡಂ ವಿಶ್ ಮಾಡಿದ್ದಾರೆ.

English summary
Kannada Actress, Producer Rakshitha Prem felt the tremor in Bengaluru today (April 18) morning.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada