100 ಕೋಟಿ ವಂಚನೆ ಹಗರಣ: ನಟ ಪ್ರಕಾಶ್ ರೈಗೆ ಜಾರಿ ನಿರ್ದೇಶನಾಲಯ ಸಮನ್ಸ್

ಹೆಚ್ಚಿನ ಆದಾಯ ನೀಡುವ ಭರವಸೆಯೊಂದಿಗೆ ಚಿನ್ನದ ಹೂಡಿಕೆ ಯೋಜನೆಯ ನೆಪದಲ್ಲಿ ಸಾರ್ವಜನಿಕರಿಂದ 100 ಕೋಟಿ ವಸೂಲಿ ಮಾಡಿರುವ ತಿರುಚ್ಚಿಯ ಪಾಲುದಾರಿಕೆ ಸಂಸ್ಥೆ ಪ್ರಣವ್ ಜ್ಯುವೆಲರ್ಸ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.

ನಟ ಪ್ರಕಾಶ್ ರೈ, ಪ್ರಣವ್ ಜ್ಯುವೆಲರ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಈ ವಿಷಯದಲ್ಲಿ ಅವರ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 20 ರಂದು ಆಪಾದಿತ ಪೊಂಜಿ ಸ್ಕೀಮ್ ಅನ್ನು ನಡೆಸುತ್ತಿದ್ದಕ್ಕಾಗಿ ಪ್ರಣವ್ ಜ್ಯುವೆಲರ್ಸ್ ಸಂಸ್ಥೆಯ ಮೇಲೆ ಸೋಮವಾರ ಇಡಿ ದಾಳಿ ನಡೆಸಿತ್ತು. 2002 ರ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (PMLA), 2002 ರ ನಿಬಂಧನೆಗಳ ಅಡಿಯಲ್ಲಿ ದಾಳಿ ಮಾಡಲಾಗಿದೆ.

ed-summons-actor-prakash-raj

ನವೆಂಬರ್ 20 ರಂದು ಇಡಿ ದಾಳಿ ನಡೆಸಿ 23.70 ಲಕ್ಷ ರೂಪಾಯಿ ನಗದು ಮತ್ತು ಕೆಲವು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಬುಧವಾರ ನೀಡಿದ ಇಡಿ ಹೇಳಿಕೆಯಲ್ಲಿ, "ಪ್ರಣವ್ ಜ್ಯುವೆಲರ್ಸ್ ಮತ್ತು ಇತರ ಸಂಪರ್ಕಿತ ವ್ಯಕ್ತಿಗಳು ಸಾರ್ವಜನಿಕ ಹಣವನ್ನು ಚಿನ್ನಾಭರಣಗಳ ಖರೀದಿಯ ನೆಪದಲ್ಲಿ ಬಳಸುವ ಮೂಲಕ ಸಾರ್ವಜನಿಕರಿಗೆ ವಂಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ" ಎಂದು ಮಾಹಿತಿ ನೀಡಿದೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ (58) ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಎಂದು ಮೂಲವೊಂದು ತಿಳಿಸಿದೆ. ಹೀಗಾಗಿ ಡಿಸೆಂಬರ್ ಮೊದಲ ವಾರದಲ್ಲಿ ಚೆನ್ನೈನಲ್ಲಿರುವ ತನಿಖಾ ಅಧಿಕಾರಿಯ ಮುಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.

"ಪ್ರಣವ್ ಜ್ಯುವೆಲರ್ಸ್ ಕಂಪನಿಯು ಪ್ರಕಾಶ್ ರೈ ಮಾಡಿದ ಕೆಲವು ಪಾವತಿಗಳನ್ನು ಮತ್ತು ಇತರ ಕೆಲವು ಹಣಕಾಸಿನ ವಹಿವಾಟುಗಳನ್ನು ಖಚಿತಪಡಿಸಿಕೊಳ್ಳಲು ಇಡಿ ಅವರ ಹೇಳಿಕೆಯನ್ನು ದಾಖಲಿಸಲು ನಿರ್ಧರಿಸಿದೆ" ಎಂದು ಮೂಲಗಳು ತಿಳಿಸಿವೆ.

ಪ್ರಣವ್ ಜ್ಯುವೆಲರ್ಸ್ ನಡೆಸುತ್ತಿದ್ದ ಮಳಿಗೆಗಳು ಅಕ್ಟೋಬರ್‌ನಲ್ಲಿ ಬಂದ್ ಆಗಿದ್ದವು. ಪೊಂಜಿ ಸ್ಕೀಮ್ ವಿರುದ್ಧ ಬಂದಿದ್ದ ದೂರುಗಳ ಆಧಾರದ ಮೇಲೆ ತಮಿಳುನಾಡಿನ ತಿರುಚ್ಚಿಯ ಆರ್ಥಿಕ ಅಪರಾಧಗಳ ವಿಭಾಗ ದೂರು ದಾಖಲಿಸಿತ್ತು. ಪ್ರಣವ್ ಜ್ಯುವೆಲರ್ಸ್ಮಾಲೀಕ ಮದನ್ ವಿರುದ್ಧ ಪ್ರಕರಣ ದಾಖಲಿಸಿದೆ. ಈ ತಿಂಗಳ ಆರಂಭದಲ್ಲಿ ಮಾಲೀಕ ಮತ್ತು ಅವರ ಪತ್ನಿ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

More from Filmibeat

English summary
ED summons actor Prakash Raj in a fraud case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X