Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಎಡಕಲ್ಲು ಗುಡ್ಡ'ದ ನಂಜುಂಡನ ಬಗ್ಗೆ ನೀವು ತಿಳಿಯಬೇಕಾದ ಸಂಗತಿ
'ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್ ಇನ್ನಿಲ್ಲ ಎಂಬ ಸುದ್ದಿ ಅವರ ಅಭಿಮಾನಿಗಳ ಹೃದಯವನ್ನ ಬಾರ ಮಾಡಿದೆ. ಸ್ಯಾಂಡಲ್ ವುಡ್ ಚಿತ್ರರಂಗದ ಮತ್ತೊಂದು ಅನರ್ಗ್ಯ ರತ್ನವನ್ನ ಕಳೆದಕೊಂಡಿತ್ತು ಎಂಬ ನೋವು ಕಾಡಿದೆ.
ಚಂದ್ರಶೇಖರ್ ಅಂದ್ರೆ, 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾದಿಂದಲೇ ಅವರನ್ನ ಗುರುತಿಸುತ್ತಿದ್ದರು. ಆ ಚಿತ್ರದ 'ಸಂತೋಷ....ಹಹಾ..ಹಹಾ..ಸಂತೋಷ...ಹಹಾ....ಹಹಾ..''ಹಾಡೊಂದು ಸಾಕಾಗಿತ್ತು ಅವರನ್ನ ನೆನಪು ಮಾಡಿಕೊಳ್ಳಲು. ಪುಟ್ಟಣ್ಣ ಕಣಗಲ್ ಅವರ ಶಿಷ್ಯವೃಂದದಲ್ಲಿ ಗುರುತಿಸಿಕೊಂಡಿದ್ದ ನಟರ ಪೈಕಿ ಚಂದ್ರಶೇಖರ್ ಕೂಡ ಒಬ್ಬರು.
'ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ಚಂದ್ರಶೇಖರ್ ಇನ್ನಿಲ್ಲ
ಅಂದ್ಹಾಗೆ, ಈ ಚಿತ್ರದಿಂದ ಹೊರತು ಪಡಿಸಿ ಚಂದ್ರಶೇಖರ್ ಅವರ ಜೀವನ ಹೇಗಿತ್ತು? ಸಿನಿಮಾರಂಗಕ್ಕೆ ಅವರ ಪ್ರವೇಶ ಆಗಿದ್ದೇಗೆ? ಭಾರತ ಬಿಟ್ಟು ಕೆನಡಾದಲ್ಲಿ ಚಂದ್ರಶೇಖರ್ ನೆಲೆಸಿದ್ದು ಯಾಕೆ? ಎಂಬ ಹತ್ತಾರು ವಿಷ್ಯಗಳನ್ನ ನೀವು ತಿಳಿಯಬೇಕಿದೆ. ಈ ವಿಶೇಷವಾದ ವರದಿ ಓದಿ, ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ಚಂದ್ರಶೇಖರ್ ಅವರ ಬಗ್ಗೆ ತಿಳಿಯಿರಿ. ಮುಂದೆ ಓದಿ....

ಚಿಕ್ಕವಯಸ್ಸಿನಲ್ಲೇ ನಾಟಕದ ಕಡೆ ಆಸಕ್ತಿ
ಚಂದ್ರಶೇಖರ್ ಅವರ ಬಾಲ್ಯ ಜೀವನ ಉತ್ತಮವಾಗಿತ್ತು. ಸಿ.ಆರ್ ಸಿಂಹ, ನಟ ಶ್ರೀನಾಥ್ ಅವರು ಚಂದ್ರಶೇಖರ್ ಅವರ ಬಾಲ್ಯದ ಗೆಳೆಯರು. ನ್ಯಾಷನಲ್ ಹೈ ಸ್ಕೂಲ್ ನಲ್ಲಿ ಓದುತ್ತಿದ್ದರು. ಈ ಸಮಯದಲ್ಲಿ ಸಿ.ಆರ್ ಸಿಂಹ ಮತ್ತು ನಟ ಶ್ರೀನಾಥ್ ನಾಟಕದ ಅಭ್ಯಾಸ ಮಾಡಲು ಚಂದ್ರಶೇಖರ್ ಅವರನ್ನ ಕರೆದುಕೊಂಡು ಹೋಗುತ್ತಿದ್ದರು. ಅದರ ಜೊತೆಗೆ ಶಾಲೆಯ ಚಟುವಟಿಕೆಗಳಲ್ಲಿಯೂ ಭಾಗವಹಸುತ್ತಿದ್ದರು.

ಬಯಸದೇ ಬಂದ ಭಾಗ್ಯ
'ನಮ್ಮ ಮಕ್ಕಳು' ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಲು ಅವಕಾಶ ದೊರೆಯಿತು. ನಾಗೇಂದ್ರ ರಾವ್, ವಾದಿರಾಜ್ ಸ್ವತಃ ಮನೆಗೆ ಬಂದಿದ್ದರು. ಆಡಿಷನ್ ಮೂಲಕ ಚಂದ್ರಶೇಖರ್ ಅವರನ್ನ ಆಯ್ಕೆ ಮಾಡಿಕೊಂಡರು. ಆಗ 10ನೇ ತರಗತಿ ಓದುತ್ತಿದ್ದ ಮಗನನ್ನ ಸಿನಿಮಾಗೆ ಕಳುಹಿಸಲು ತಂದೆಗೆ ಇಷ್ಟವಿರಲಿಲ್ಲ. ಆದ್ರು, ಅವರನ್ನ ಒಪ್ಪಿಸಿ ಕರೆದುಕೊಂಡು ಹೋದರು. ಒಂದೂವರೆ ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ವಾಪಸ್ ಕಳುಹಿಸಿದರು.

ವಿಷ್ಣುವರ್ಧನ್ ಜೊತೆ ಸ್ನೇಹ
ಶಾಲೆ ಮುಗಿಸಿ ನ್ಯಾಷನಲ್ ಕಾಲೇಜಿಗೆ ಪ್ರವೇಶ ಪಡೆದ ಚಂದ್ರಶೇಖರ್, ಕುಮಾಅರ್ ಎಂಬ ಹುಡುಗನ ಪರಿಚಯವಾಗಯಿತು. ಆಗಿನ ಕುಮಾರ್ ಇಂದಿನ ವಿಷ್ಣುವರ್ಧನ್. ಇಬ್ಬರು ಒಟ್ಟಿಗೆ ಓದುವಾಗಲೇ ವಂಶವೃಕ್ಷ ಚಿತ್ರದಲ್ಲಿ ನಟಿಸಲು ಅವಕಾಶ ಬಂತು. ಈ ಚಿತ್ರಕ್ಕೆ ಅವಾರ್ಡ್ ಕೂಡ ಬತು ಎನ್ನುವುದು ವಿಶೇಷ. ಚಂದ್ರಶೇಖರ್ ಗಿಂತಿ ದೊಡ್ಡವರಾಗಿದ್ದರು ವಿಷ್ಣು. ಕಾಲೇಜು ಮುಗಿದ ಮೇಲೂ ಇವಿರಿಬ್ಬರ ಸಂಬಂಧ ಚೆನ್ನಾಗಿತ್ತು. ತದ ನಂತರ ವಿಷ್ಣುವರ್ಧನ್ 'ನಾಗರಹಾವು' ಚಿತ್ರಕ್ಕೆ ಆಯ್ಕೆಯಾದರು. ಅದರ ಬೆನ್ನಲ್ಲೆ ಚಂದ್ರಶೇಖರ್ ಗೂ ಅದಷ್ಟ ಖುಲಾಯಿಸಿತು.

ಮೊದಲ ಬಾರಿಗೆ ಹೀರೋ ಆದ ನಟ
ನಮ್ಮ ಮಕ್ಕಳು, ವಂಶವೃಕ್ಷ ಚಿತ್ರದಲ್ಲಿ ನಟಿಸಿದ ಚಂದ್ರಶೇಖರ್ ಅವರ ಮೇಲೆ ಪುಟ್ಟಣ್ಣ ಕಣಗಲ್ ಅವರ ಕಣ್ಣು ಬಿತ್ತು. ಪುಟ್ಟಣ್ಣ ನಿರ್ದೇಶನ ಮಾಡುತ್ತಿದ್ದ 'ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್ ಅವರನ್ನ ನಾಯಕ ಎಂದು ಘೋಷಿಸಿದ್ರು. ಈ ಚಿತ್ರದ ಚಂದ್ರಶೇಖರ್ ಪಾಲಿಗೆ ವರದಾನವಾಯಿತು. ಅಲ್ಲಿಂದ ಬಣ್ಣದ ಬದುಕು ಅಧಿಕೃತವಾಗಿ ಆರಂಭವಾಯಿತು.

ಚಂದ್ರಶೇಖರ್ ಜೀವನವನ್ನೇ ಬದಲಿಸಿದ 'ಎಡಕಲ್ಲು'
1973....ಅಂದಿನ ಕಾಲಕ್ಕೆ ಕನ್ನಡ ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯವನ್ನ ಈ ಮಟ್ಟಕ್ಕೆ ತೋರಿಸಿದ ಚಿತ್ರ ಇದಾಗಿತ್ತು. ಜಯಂತಿ, ಆರತಿ ಅಭಿನಯಿಸಿದ್ದ ಈ ಚಿತ್ರದಲ್ಲಿ ಚಂದ್ರಶೇಖರ್ ಚಿರಯುವಕನಾಗಿ ಬಣ್ಣ ಹಚ್ಚಿದ್ದರು. ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧವಿಟ್ಟುಕೊಳ್ಳುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಈ ಪಾತ್ರ, ಚಂದ್ರಶೇಖರ್ ಅವರ ವೃತ್ತಿ ಜೀವನದ ಮೈಲಿಗಲ್ಲು ಆಗಿ ಉಳಿದುಕೊಂಡಿದೆ. ಇಂದಿಗೂ ಚಂದ್ರಶೇಖರ್ ಅವರನ್ನ ಎಡಕಲ್ಲು ಗುಡ್ಡದ ಮೇಲೆ ನಟ ಎಂದೇ ಗುರುತಿಸುತ್ತಾರೆ.

ಡಾ.ರಾಜ್ ಜೊತೆ ನಟಿಸಿದ ಸಂದರ್ಭ
ಆಗಾಗಲೇ ಸೂಪರ್ ಸ್ಟಾರ್ ಆಗಿದ್ದ ಡಾ ರಾಜ್ ಕುಮಾರ್ ಅವರ ಜೊತೆ 'ರಾಜ ನನ್ನ ರಾಜ' ಚಿತ್ರದಲ್ಲಿ ಮೊದಲ ಭಾರಿಗೆ ನಟಿಸಿದರು. 'ನೂರು ಕಣ್ಣು ಸಾಲುದು......' ಹಾಡಿನ ಚಿತ್ರೀಕರಣದಲ್ಲಿ ಮೊದಲ ಸಲ ರಾಜ್ ಕುಮಾರ್ ಅವರರೊಂದಿಗೆ ತೆರೆಹಂಚಿಕೊಂಡರು.

ಚಂದ್ರಶೇಖರ್ ಗೆ ಕೆನಡಾ ನಂಟು
ಕಾರ್ಯಕ್ರಮವೊಂದರಲ್ಲಿ ಒಂದು ಹುಡುಗಿಯನ್ನ ನೋಡಿದ ಚಂದ್ರಶೇಖರ್ ಲವ್ವಲ್ಲಿ ಬಿದ್ದರು. ನಂತರ 1984ರಲ್ಲಿ ಶೀಲಾ ಅವರೊಂದಿಗೆ ಮದುವೆ ಕೂಡ ಆದರು. ಮದುವೆ ನಂತರ ಕೆನಡಾಗೆ ಹೋದ ಚಂದ್ರಶೇಖರ್ ಪತ್ನಿಯ ಆಸೆಯಂತೆ ಅಲ್ಲೇ ನೆಲೆಸಿದರು. ನಟನೆಯಿಂದ ತಾಂತ್ರಿಕವಾಗಿ ತೊಡಗಿಕೊಂಡ ನಟ ಕಾರ್ಪೋರೆಟ್, ಟೆಲಿಫಿಲಂ ಮಾಡಿದರು, ಆ ಚಿತ್ರಗಳನ್ನ ಭಾರತದಲ್ಲೂ ಪ್ರದರ್ಶಿಸಿದರು. ಅಲ್ಲಿಗೆ ತಾತ್ಕಾಲಿಕವಾಗಿ ಚಿತ್ರರಂಗಕ್ಕೆ ಬ್ರೇಕ್ ನೀಡಿದ್ದರು.

ಹಾಗೇ ಸುಮ್ಮನೇಯಲ್ಲಿ ಮತ್ತೆ ಬಂದ ನಟ
ಪ್ರೀತಂ ಗುಬ್ಬಿ ನಿರ್ದೇಶನ ಹಾಗೆ ಸುಮ್ಮನೆ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಂದ್ರಶೇಖರ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಅಲ್ಲಿಂದ ಮತ್ತೆ ಸಿನಿಮಾಗಳನ್ನ ಮಾಡಿದ ಚಂದ್ರಶೇಖರ್ ಕಾರಂಜಿ', 'ಚೆಲುವೆ ನಿನ್ನ ನೋಡಲು', ರೋಸ್, ಶಿವಲಿಂಗ, ಜೀವಾ, ಅಸ್ತಿತ್ವ ಅಂತಹ ಚಿತ್ರಗಳಲ್ಲಿ ನಟಿಸಿದರು.

ಕೊನೆಯ ಸಿನಿಮಾ
ಇತ್ತೀಚೆಗಷ್ಟೇ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರದಲ್ಲಿ ಚಂದ್ರಶೇಖರ್ ಅಭಿನಯಿಸಿದ್ದರು. ಇದು ಇವರು ಅಭಿನಯದ ಕೊನೆಯ ಸಿನಿಮಾ ತೆರೆಕಂಡಿತ್ತು. ಆದ್ರೆ, ಈ ಚಿತ್ರದ ನಂತರ 'ಎಡಕಲ್ಲು ಗುಡ್ಡದ ಮೇಲೆ' ಎಂಬ ಹೊಸ ಚಿತ್ರದಲ್ಲೂ ಚಂದ್ರಶೇಖರ್ ಅಭಿನಯಿಸಿದ್ದರು. ಈ ಸಿನಿಮಾ ಇನ್ನು ಬುಡಿಗಡೆಯಾಗಬೇಕಿದೆ.

ಚಂದ್ರಶೇಖರ್ ಅಭಿನಯದ ಪ್ರಮುಖ ಚಿತ್ರಗಳು
'ನಮ್ಮ ಮಕ್ಕಳು', 'ಸಂಸ್ಕಾರ', 'ಪಾಪ ಪುಣ್ಯ', 'ವಂಶವೃಕ್ಷ', 'ಸೀತೆಯಲ್ಲ ಸಾವಿತ್ರಿ', 'ಎಡಕಲ್ಲು ಗುಡ್ಡದ ಮೇಲೆ', 'ಕಸ್ತೂರಿ ವಿಜಯ', 'ಒಂದು ರೂಪ ಎರಡು ಗುಣ', 'ಮನೆ ಬೆಳಕು', 'ಹಂಸಗೀತೆ', 'ಸೂತ್ರದ ಗೊಂಬೆ', 'ಪರಿವರ್ತನೆ', 'ರಾಜ ನನ್ನ ರಾಜ', 'ಕನಸು ನನಸು', 'ಬೆಸುಗೆ', 'ಮುಯ್ಯಿಗೆ ಮುಯ್ಯಿ', 'ಶಂಕರ್ ಗುರು', 'ಶನಿ ಪ್ರಭಾವ', 'ದೇವರ ದುಡ್ಡು', 'ಸೋಸೆ ತಂದ ಸೌಭಾಗ್ಯ','ಶ್ರೀಮಂತನ ಮಗಳು', 'ಹಾಲು ಜೇನು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.