90 ಲಕ್ಷದಲ್ಲಿ ತಯಾರಾಗಿದ್ದ 'ಎದ್ದೇಳು ಮಂಜುನಾಥ' ಗಳಿಸಿದ್ದು ದಾಖಲೆ ಹಣ
ನವರಸ ನಾಯಕ ಜಗ್ಗೇಶ್ ಅಭಿನಯದಲ್ಲಿ ಮೂಡಿಬಂದಿದ್ದ 'ಎದ್ದೇಳು ಮಂಜುನಾಥ' 2007ರಲ್ಲಿ ಬಿಡುಗಡೆಯಾಗಿತ್ತು. ಆ ವರ್ಷದ ಸೂಪರ್ ಹಿಟ್ ಚಿತ್ರವೂ ಇದಾಗಿತ್ತು. ಈ ಚಿತ್ರದ ಚಿತ್ರಕಥೆಗಾಗಿ ಗುರುಪ್ರಸಾದ್ ಅವರಿಗೆ ರಾಜ್ಯ ಪ್ರಶಸ್ತಿ ಸಹ ಲಭಿಸಿತ್ತು.
ಜಗ್ಗೇಶ್ ವೃತ್ತಿ ಜೀವನದಲ್ಲಿ 'ಎದ್ದೇಳು ಮಂಜುನಾಥ' ಸಿನಿಮಾ ಬಹಳ ವಿಶೇಷ. ನವರಸ ನಾಯಕನಿಗೆ ದೊಡ್ಡ ಸಕ್ಸಸ್ ತಂದುಕೊಟ್ಟ ಚಿತ್ರ. ಗುರುಪ್ರಸಾದ್ ನಿರ್ದೇಶಿಸಿದ್ದ ಈ ಚಿತ್ರವನ್ನು ಸನತ್ ಕುಮಾರ್ ನಿರ್ಮಾಣ ಮಾಡಿದ್ದರು.
ಎದ್ದೇಳು ಮಂಜುನಾಥ ಸಿನಿಮಾ ಎಷ್ಟು ಗಳಿಸಿರಬಹುದು ಎಂಬ ಕುತೂಹಲ ಕಾಡುವುದು ಸಹಜ. ಈ ಕುತೂಹಲಕ್ಕೆ ನಟ ಜಗ್ಗೇಶ್ ಉತ್ತರ ನೀಡಿದ್ದಾರೆ.

ಅಭಿಮಾನಿಯೊಬ್ಬರು ಎದ್ದೇಳು ಮಂಜುನಾಥ ಸಿನಿಮಾ ಒಪ್ಪಿಕೊಳ್ಳಲು ನೀವು ಎಷ್ಟು ದಿನ ಸಮಯ ತೆಗೆದುಕೊಂಡ್ರಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಒಂದು ವಾರ ಸಮಯ ತೆಗೆದುಕೊಂಡೆ ಎಂದು ತಿಳಿಸಿದ್ದಾರೆ.
ಇನ್ನು ಈ ಚಿತ್ರ 90 ಲಕ್ಷ ಹಣದಲ್ಲಿ ತಯಾರಿಸಲಾಗಿತ್ತಂತೆ. 2007ರ ದೊಡ್ಡ ಹಿಟ್ ಆದ ಈ ಚಿತ್ರ ಆಗಿನ ಸಮಯದಲ್ಲೇ 5 ಕೋಟಿ ಗಳಿಕೆ ಕಂಡಿತ್ತು ಎಂದು ಜಗ್ಗೇಶ್ ಮಾಹಿತಿ ನೀಡಿದ್ದಾರೆ.
ಒಂದು ವಾರದಲ್ಲಿ ನಿರ್ಧರಿಸಿ ಕೇವಲ 25 ದಿನದಲ್ಲೀ ಚಿತ್ರೀಕರಣ ಪೂರ್ಣ ಗೊಳಿಸಲಾಗಿತ್ತಂತೆ. ಜಗ್ಗೇಶ್ ಜೊತೆ ತಬಲಾ ನಾಣಿ ಹಾಗೂ ಯಜ್ಞಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅನೂಪ್ ಸೀಳಿನ್ ಸಂಗೀತವಿತ್ತು.


Click it and Unblock the Notifications











