'ಎದ್ದೇಳು ಮಂಜುನಾಥ 2': ಚಿತ್ರದಲ್ಲಿ ಜಗ್ಗೇಶ್‌ಗೆ ಜಾಗವಿಲ್ಲ!

ವಿಭಿನ್ನ ಟೈಟಲ್ ಮತ್ತು ಅಲೋಚನೆಯೊಂದಿಗೆ ಬಂದ ಸಿನಿಮಾ 'ಎದ್ದೇಳು ಮಂಜುನಾಥ' ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಟ ಜಗ್ಗೇಶ್ ಚಮತ್ಕಾರ ಮಾಡಿದ್ದರು. ಈ ಸಿನಿಮಾ ಮೂಲಕ ಜಗ್ಗೇಶ್ ಅವರ ಅದೃಷ್ಟ ಖುಲಾಯಿಸಿತು ಎಂದೇ ಹೇಳಬಹುದು. ಯಾಕೆಂದರೆ ನಟ ಜಗ್ಗೇಶ್‌ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದರು, ಒಂದು ಸಮಯದಲ್ಲಿ ಅವರ ಸಿನಿಮಾಗಳು ನೆಲಕಚ್ಚಿದ್ದವು.

Recommended Video

'ಎದ್ದೇಳು ಮಂಜುನಾಥ 2' ಸಿನಿಮಾದಲ್ಲಿ ಜಗ್ಗೇಶ್ ಬದಲಿಗೆ ಗುರುಪ್ರಸಾದ್.

ಅಂತಹ ಸಮಯದಲ್ಲಿ ಬಂದ ಈ 'ಎದ್ದೇಳು ಮಂಜುನಾಥ' ಚಿತ್ರ ಜಗ್ಗೇಶ್ ಅವರಿಗೆ ಹೊಸ ಹುರುಪು ತಂದುಕೊಟ್ಟಿತು. ಈ ಸಿನಿಮಾರಂಗದ ಬಳಿಕ ಜಗ್ಗೇಶ್ ಅವರು ಮತ್ತೆ ಸಾಲು, ಸಾಲು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಬ್ಯುಸಿ ಆಗಿ ಬಿಟ್ಟರು. ಈ ಚಿತ್ರದ ಯಶಸ್ಸಿನ ಮುಖ್ಯ ರೂವಾರಿ ನಿರ್ದೇಶಕ ಗುರುಪ್ರಸಾದ್ ಎಂದರೆ ತಪ್ಪಾಗಲಾರದು.

ಈಗ ಈ ಚಿತ್ರದ ಬಗ್ಗೆ ಮಾತನಾಡಲು ಕಾರಣ 'ಎದ್ದೇಳು ಮಂಜುನಾಥ 2' ತೆರೆಗೆ ಬರುತ್ತಿರುವುದು. ಈ ಚಿತ್ರದ ಸಾರಥ್ಯವನ್ನು ನಿರ್ದೇಶಕ ಗುರುಪ್ರಸಾದ್ ಅವರೇ ವಹಿಸಿಕೊಂಡಿದ್ದಾರೆ. ಆದರೆ ಮೊದಲ ಭಾಗಕ್ಕೆ ಹೋಲಿಸಿದರೆ, ಭಾಗ ಎರಡರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಈ ಚಿತ್ರದಲ್ಲಿ ನಟ ಜಗ್ಗೇಶ್ ಇರುವುದೇ ಇಲ್ಲ.

'ಎದ್ದೇಳು ಮಂಜುನಾಥ 2' ಜಗ್ಗೇಶ್‌ ನಾಯಕ ಅಲ್ಲ!

'ಎದ್ದೇಳು ಮಂಜುನಾಥ 2' ಜಗ್ಗೇಶ್‌ ನಾಯಕ ಅಲ್ಲ!

ಡೈರೆಕ್ಟರ್ ಗುರು ಪ್ರಸಾದ್ ಮತ್ತು ಜಗ್ಗೇಶ್ ವೃತ್ತಿ ಜೀವನದ ಮರೆಯಲಾಗದ ಚಿತ್ರ 'ಎದ್ದೇಳು ಮಂಜುನಾಥ'. ಸೂಪರ್ ಹಿಟ್ ಆಗಿದ್ದ ಅದೇ ಟೈಟಲ್ ಇಟ್ಟುಕೊಂಡು ಗುರು ಪ್ರಸಾದ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಹಾಗಂತ ಇದು ಮೊದಲ ಭಾಗದ ಮುಂದುವರೆದ ಭಾಗ ಅಲ್ಲ. ಈ ಚಿತ್ರದ ಮೂಲಕ ನಿರ್ದೇಶಕ ಗುರು ಪ್ರಸಾದ್ ಹೊಸ ಚಿತ್ರ, ಹೊಸ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಟೈಟಲ್ ಮಾತ್ರ ಅದೇ ಹಳೆಯದು. ಈ ಚಿತ್ರದಲ್ಲಿ ನಿರ್ದೇಶಕ ಗುರು ಪ್ರಸಾದ್ ಅವರೇ ಹೀರೋ ಅಂತೆ.

ಹೀರೋ ಆಗಿಬಿಟ್ರು ನಿರ್ದೇಶಕ ಗುರು ಪ್ರಸಾದ್!

ಹೀರೋ ಆಗಿಬಿಟ್ರು ನಿರ್ದೇಶಕ ಗುರು ಪ್ರಸಾದ್!

ಹೌದು ಈ ಚಿತ್ರದ ಮೂಲಕ ನಿರ್ದೇಶಕ ಗುರು ಪ್ರಸಾದ್ ನಾಯಕ ನಟನಾಗಿ ಹೊರ ಹೊಮ್ಮುತ್ತಿದ್ದಾರೆ. ಈ ಹಿಂದೆಯೂ ಕೆಲವು ಸಿನಿಮಾಗಳಲ್ಲಿ ಗುರು ಪ್ರಸಾದ್ ಅಭಿನಯಿಸಿದ್ದಾರೆ. ಆದರೆ ಹೀರೋ ಆಗಿ ಕಾಣಿಸಿಕೊಂಡಿರಲಿಲ್ಲ. ಇದೆ ಮೊದಲ ಬಾರಿಗೆ 'ಎದ್ದೇಳು ಮಂಜುನಾಥ' ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಮೊದಲ ಭಾಗದಲ್ಲಿ ನಟ ಜಗ್ಗೇಶ್ ಅವರು ಕಮಾಲ್ ಮಾಡಿದ್ದರು. ಆದರೆ ಈ ಚಿತ್ರದಲ್ಲಿ ಗುರು ಪ್ರಸಾದ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರ ಹೇಗೆ ಇರಲಿದೆ ಎನ್ನುವ ಕುತೂಹಲ ಮೂಡಿದೆ.

'ಎದ್ದೇಳು ಮಂಜುನಾಥ' ಟೈಟಲ್ ಕೇಳಿದ್ರೆ ನೆನಪಾಗುತ್ತಾರೆ ಜಗ್ಗೇಶ್!

'ಎದ್ದೇಳು ಮಂಜುನಾಥ' ಟೈಟಲ್ ಕೇಳಿದ್ರೆ ನೆನಪಾಗುತ್ತಾರೆ ಜಗ್ಗೇಶ್!

'ಎದ್ದೇಳು ಮಂಜುನಾಥ' ಎಂದಾಕ್ಷಣ ಮೊದಲು ನೆನಪಾಗುವುದೇ ನಟ ಜಗ್ಗೇಶ್. ಯಾಕೆಂದರೆ ಚಿತ್ರದಲ್ಲಿ ಅವರ ಪಾತ್ರ, ಅಭಿನಯ ಅಷ್ಟು ಚೆನ್ನಾಗಿ ಇತ್ತು. ಪ್ರೇಕ್ಷಕರನ್ನೂ ಇಂದಿಗೂ ಅವರ ಪಾತ್ರ ಕಾಡುತ್ತೆ. 2009ರಲ್ಲಿ ಈ ಚಿತ್ರ ರಿಲೀಸ್ ಆಯ್ತು, ನಿರೀಕ್ಷೆ ಮಟ್ಟ ಮೀರಿ ಸಿನಿಮಾ ಜನ ಮನ್ನಣೆ ಪಡೆಯಿತು. ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ಸೂಪರ್ ಹಿಟ್ ಜೋಡಿ ಆಗಿ ಹೊರ ಹೊಮ್ಮಿತು. ಆದರೆ ನಂತರ ಜಗ್ಗೇಶ್, ಗುರು ಪ್ರಸಾದ್ ಇಬ್ಬರೂ ಜಗಳ ಮಾಡಿಕೊಂಡು ದೂರಾದರು. ಆದರೆ ಈಗ 'ರಂಗನಾಯಕ' ಚಿತ್ರದ ಮೂಲಕ ಒಂದಾಗಿದ್ದಾರೆ.

'ಎದ್ದೇಳು ಮಂಜುನಾಥ 2' ಚಿತ್ರೀಕರಣ ಸಂಪೂರ್ಣ!

'ಎದ್ದೇಳು ಮಂಜುನಾಥ 2' ಚಿತ್ರೀಕರಣ ಸಂಪೂರ್ಣ!

ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದೆ ಅನ್ನೋದು ಬಿಗ್ ನ್ಯೂಸ್. ಗುರುಪ್ರಸಾದ್ ತಮ್ಮದೇ ಧಾಟಿಯಲ್ಲಿ ಈ ಚಿತ್ರ ಮಾಡಿದ್ದಾರೆ. ರಚಿತಾ ಮಹಾಲಕ್ಷ್ಮಿ ಚಿತ್ರದ ನಾಯಕಿ. ತಮಿಳು ಕಿರುತೆರೆಯಲ್ಲಿ ಈ ನಟಿ ಹೆಚ್ಚು ಹೆಸರುವಾಸಿ. ಚಿತ್ರ ಸಂಪೂರ್ಣ ಚಿತ್ರೀಕರಣ ಮುಗಿಸಿದೆ. ಹಾಗಾಗಿ ಸದ್ಯದಲ್ಲೇ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಿದ್ದಾರೆ ಗುರು ಪ್ರಸಾದ್.

More from Filmibeat

English summary
Eddelu Manjunatha Part 2 Is Comming But Jaggesh Is Not Hero For Movie,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X