»   » 'ಇದೀಗ ಬಂದ ಸುದ್ದಿ' ನೀವ್ ಕೇಳಿದ್ದೀರಾ?

'ಇದೀಗ ಬಂದ ಸುದ್ದಿ' ನೀವ್ ಕೇಳಿದ್ದೀರಾ?

Posted By:
Subscribe to Filmibeat Kannada

'ಇದೀಗ ಬಂದ ಸುದ್ದಿ' ಈ ಪದವನ್ನ ಸಾಮಾನ್ಯವಾಗಿ ನಾವೆಲ್ಲರೂ ದಿನನಿತ್ಯ ಜೀವನದಲ್ಲಿ ಒಂದಲ್ಲ ಒಂದು ಬಾರಿ ಈ ಪದವನ್ನ ಕೇಳಿಯೇ ಕೇಳಿರುತ್ತೇವೆ. ಆದರೆ ನಾವೀಗ ಹೇಳುತ್ತಿರುವುದು ಸಿನಿಮಾದ ಬಗ್ಗೆ. ಹೌದು ಗಾಂಧಿನಗರದಲ್ಲಿ ಸದ್ದಿಲ್ಲದೆ ಇದೀಗ ಬಂದ ಸುದ್ದಿ ಎನ್ನುವ ಹೆಸರಿನಲ್ಲಿ ಸಿನಿಮಾ ಆರಂಭ ಆಗಿ ತೆರೆಗೂ ಬರಲು ಸಿದ್ದವಾಗಿದೆ.

'ಇದೀಗ ಬಂದ ಸುದ್ದಿ' ಎಸ್ ಆರ್ ಪಾಟೀಲ್ ನಿರ್ದೇಶನ ಮಾಡಿರುವ ಚಿತ್ರ. ಬಸವ ಕಂಬೈನ್ಸ್ ನಲ್ಲಿ ನಿರ್ಮಾಣವಾಗಿದ್ದು ಟ್ರೇಲರ್ ನಿಂದಲೇ ಪ್ರೇಕ್ಷಕರ ಗಮನವನ್ನ ತನ್ನತ್ತ ಸೆಳೆದಿರುವಂಹ ಚಿತ್ರ. ಕೇವಲ ಹೊಸಬರೆ ಸೇರಿ ಮಾಡಿರುವ ಸಿನಿಮಾ ಇದಾಗಿದ್ದು ಟ್ರೇಲರ್ ನೋಡಿದರೆ ಸಿನಿಮಾದಲ್ಲಿ ಯಾವುದೋ ಗಂಭೀರ ವಿಚಾರದ ಬಗ್ಗೆ ಹೇಳಿದ್ದಾರೆ ಎನ್ನುವ ಕೌತುಕ ಮೂಡುತ್ತದೆ.

ಚಿತ್ರದಲ್ಲಿ ಕನ್ನಡಿಗ ಬಲರಾಮ್, ಮಾಧವ್, ಶಿವಕುಮಾರ್ ಲೋಕೇಶ್ವರಿ ನಾಗರಾಜ್, ಸಂಗೀತ ವಿಜಯ್, ಬೇಬಿ ಚೈತನ್ಯ ಹಾಗೂ ಮಾಸ್ಟರ್ ವೃಶಾಂಕ್ ಹೀಗೆ ಇನ್ನೂ ಅನೇಕರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

Edhiga Banda Suddi film is releasing on March 30th

ಸಸ್ಪೆಸ್ ಕಥಾಹಂದರವಿರುವ ಇದೀಗ ಬಂದ ಸುದ್ದಿ ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಒಂದು ಹಾಡು ಮಾತ್ರವಿದ್ದು ಚಿತ್ರತಂಡ ಈ ತಿಂಗಳ ಅಂತ್ಯಕ್ಕೆ ಚಿತ್ರವನ್ನ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ. ಸಿನಿಮಾ ಪೂರ್ತಿ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದ್ದು ನಿರ್ದೇಶಕ ಎಸ್ ಆರ್ ಪಾಟೀಲ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ.

Edhiga Banda Suddi film is releasing on March 30th

ವಿಭಿನ್ನವಾಗಿರುವ ಟೈಟಲ್ ಇಟ್ಟುಕೊಂಡು ಸಮಾಜಕ್ಕೆ ಒಂದು ಒಳ್ಳೆ ಸಂದೇಶವಿರುವ ಚಿತ್ರವನ್ನ ನೀಡಬೇಕು ಎನ್ನುವ ಉದ್ದೇಶ ಇದೀಗ ಬಂದ ಸುದ್ದಿ ಚಿತ್ರತಂಡದ್ದು.

English summary
Kannada movie Edhiga Banda Suddi is releasing on March 30th. The film was directed by SR Patil and the viewer appreciated the movie trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X