twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಸ್ಟಾರ್ ಗಳ ವಿದ್ಯಾಭ್ಯಾಸ ಏನು?, ಅವ್ರು ಓದು ನಿಲ್ಲಿಸಿದ್ದು ಏಕೆ?

    |

    ನಮ್ಮ ಮೆಚ್ಚಿನ ಸ್ಟಾರ್ ನಟರು ಏನು ಓದಿದ್ದಾರೆ, ಅವರ ವಿದ್ಯಾರ್ಹತೆ ಏನು, ಏಕೆ ಅವರು ಮುಂದೆ ಓದಲಿಲ್ಲ ಎನ್ನುವ ಕುತೂಹಲ ಕೆಲವು ಅಭಿಮಾನಿಗಳಿಗೆ ಇರಬಹುದು. ಅಂತಹ ಪ್ರಶ್ನೆಗೆ ಉತ್ತರ ಇಲ್ಲಿ ಸಿಗುತ್ತದೆ.

    Recommended Video

    ತಮಿಳು, ತೆಲುಗು ನಟರು ಮಾಡಿದ ಮೇಲೆ ನಮ್ಮೋರು ಮಾಡೋದು..? | FILMIBEAT KANNADA

    ಓದು, ಸ್ಕೂಲ್, ಶಿಕ್ಷಣ ಬೇಕು. ಆದರೆ, ಅದು ಇಲ್ಲದಿದ್ದರೂ ಸಾಧನೆ ಮಾಡಬಹುದು ಎನ್ನುವುದನ್ನು ಈ ನಟರು ಎಂದೋ ಸಾಬೀತು ಮಾಡಿದ್ದಾರೆ. ಓದು ಇಷ್ಟ ಇಲ್ಲದ ಕೆಲವು ನಟರು ತಮ್ಮ ಕನಸಿನ ಬೆನ್ನು ಹತ್ತಿ ಇಂದು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ನಟ ರಾಜ್ ಕುಮಾರ್ ಮೂರನೇ ಕ್ಲಾಸ್ ಓದಿ ಡಾಕ್ಟರೇಟ್ ಪಡೆದಿದ್ದಾರೆ.

    ಅ, ಬ, ಪ, ಮ.... ಈ ಅಕ್ಷರಗಳಲ್ಲಿದೆ ಸ್ಟಾರ್ ನಿರ್ದೇಶಕರ ಶಕ್ತಿಅ, ಬ, ಪ, ಮ.... ಈ ಅಕ್ಷರಗಳಲ್ಲಿದೆ ಸ್ಟಾರ್ ನಿರ್ದೇಶಕರ ಶಕ್ತಿ

    ರಾಜ್ ಕುಮಾರ್, ವಿಷ್ಣುವರ್ಧನ್, ರಮೇಶ್ ಅರವಿಂದ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್ ಈ ನಟರ ವಿದ್ಯಾಬ್ಯಾಸ ಹಾಗೂ ಅವರು ಓದಿಗೆ ಗುಡ್ ಬಾಯ್ ಹೇಳಿದ ಹಿಂದಿನ ಕಾರಣ ಇಲ್ಲಿದೆ ಓದಿ.

    ಮೂರನೇ ಕ್ಲಾಸ್ ಓದಿ ಡಾಕ್ಟರೇಟ್ ಪಡೆದ ರಾಜ್

    ಮೂರನೇ ಕ್ಲಾಸ್ ಓದಿ ಡಾಕ್ಟರೇಟ್ ಪಡೆದ ರಾಜ್

    ವರನಟ ಡಾ ರಾಜ್ ಕುಮಾರ್ ಓದಿದ್ದು ಮೂರನೇ ಕ್ಲಾಸ್. ಎಂಟನೇ ವಯಸ್ಸಿಗೆ ರಾಜ್ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು. ತಂದೆ ಪುಟ್ಟಸ್ವಾಮಿ ಹಾಗೂ ತಾಯಿ ಲಕ್ಷ್ಮಮ್ಮ ಇಬ್ಬರು ರಂಗಭೂಮಿ ಕಲಾವಿದರಾಗಿರುವ ಕಾರಣ ತಾವು ಕೂಡ ನಾಟಕಗಳಲ್ಲಿ ನಟಿಸಲು ಶುರು ಮಾಡಿದರು. ನಾಟಕದ ನಂತರ ಸಿನಿಮಾ ಪ್ರಯಾಣ ಪ್ರಾರಂಭ ಆಯಿತು. ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿದ ಅವರು ಡಾಕ್ಟರೇಟ್ ಪಡೆದರು.

    ಪರದೆ ಮೇಲೆ ಸ್ಟಾರ್ ನಟರ ಹೆಸರು ಮೊದಲ ಬಾರಿಗೆ ಮೂಡಿದ್ದು ಹೀಗೆ ನೋಡಿ!ಪರದೆ ಮೇಲೆ ಸ್ಟಾರ್ ನಟರ ಹೆಸರು ಮೊದಲ ಬಾರಿಗೆ ಮೂಡಿದ್ದು ಹೀಗೆ ನೋಡಿ!

    ಪದವೀಧರ ವಿಷ್ಣುವರ್ಧನ್

    ಪದವೀಧರ ವಿಷ್ಣುವರ್ಧನ್

    ಸಾಹಸ ಸಿಂಹ ವಿಷ್ಣುವರ್ಧನ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೈಸೂರಿನಲ್ಲಿ ಹುಟ್ಟಿದ ವಿಷ್ಣುವರ್ಧನ್ ಗೋಪಾಲಸ್ವಾಮಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದರು. ನಂತರ ಬೆಂಗಳೂರಿಗೆ ಬಂದ ಮೇಲೆ ಪ್ರೌಢ ಶಿಕ್ಷಣ ಮುಗಿಸಿದರು. 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದರು. 'ವಂಶವೃಕ್ಷ' ಅವರ ಮೊದಲ ಸಿನಿಮಾ. ಆದಾದ ನಂತರ 'ನಾಗರಹಾವು' ಸಿನಿಮಾ ಬಂತು. ಆ ಚಿತ್ರದಿಂದ ವಿಷ್ಣು ಪ್ರಭಾವ ಶುರುವಾಯ್ತು.

    ಇಂಜಿನಿಯರ್ ಸುದೀಪ್

    ಇಂಜಿನಿಯರ್ ಸುದೀಪ್

    ಚಿತ್ರರಂಗದಲ್ಲಿ ಸಾಕಷ್ಟು ನಟರು ಇಂಜಿನೀಯರಿಂಗ್ ಮಾಡಿದ್ದಾರೆ. ಅದರಲ್ಲಿ ನಟ ಸುದೀಪ್ ಕೂಡ ಒಬ್ಬರು. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ನಲ್ಲಿ Industrial and production engineering ವಿಭಾಗದಲ್ಲಿ ಸುದೀಪ್ ತಮ್ಮ ಇಂಜಿನೀಯರಿಂಗ್ ಪದವಿ ಮುಗಿಸಿದರು. ಶಿವಮೊಗ್ಗದಲ್ಲಿ ಹುಟ್ಟಿದ ಕಿಚ್ಚ ವಾಸವಿ ವಿದ್ಯಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾಡಿದ್ದರು. ನಟನ ತರಬೇತಿಗಾಗಿ ಮುಂಬೈಗೆ ಹೋದ ಸುದೀಪ್, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

    'ಪಾಲಿಟೆಕ್ನಿಕ್'ಗಾಗಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇದು'ಪಾಲಿಟೆಕ್ನಿಕ್'ಗಾಗಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ಇದು

    ಪಾಲಿಟೆಕ್ನಿಕ್ ಕಾಲೇಜ್ ಗೆ ದರ್ಶನ್ ಅರ್ಜಿ

    ಪಾಲಿಟೆಕ್ನಿಕ್ ಕಾಲೇಜ್ ಗೆ ದರ್ಶನ್ ಅರ್ಜಿ

    ಅಪ್ಪ ದೊಡ್ಡ ಕಲಾವಿದ ಆಗಿದ್ದ ಕಾರಣವೋ ಏನೋ, ನಟ ದರ್ಶನ್ ಗೆ ಸಿನಿಮಾ.. ನಟನೆಯ ಮೇಲೆ ಆಸೆ ಇತ್ತು. ಅದಕ್ಕಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ಮೈಸೂರಿನಲ್ಲಿ ದರ್ಶನ್ ಪಿಯುಸಿ ವರೆಗಿನ ಶಿಕ್ಷಣವನ್ನು ಮುಗಿಸಿದರು. 1995-96 ರಲ್ಲಿ ದರ್ಶನ್ ಪಾಲಿಟೆಕ್ನಿಕ್ ಕಾಲೇಜಿಗೆ ಅಡ್ಮಿಶನ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ನಂತರ ನೀನಾಸಂ ಗೆ ಸೇರಿ ರಂಗ ಶಿಕ್ಷಣ ಪಡೆದರು. ದರ್ಶನ್ ಓದು ಬಿಡುವುದು ತಂದೆ ತೂಗುದೀಪ ಶ್ರೀನಿವಾಸ್ ರಿಗೆ ಇಷ್ಟ ಇರಲಿಲ್ಲ.

    ಇಂಜಿನೀಯರಿಂಗ್ ನಲ್ಲಿ ದಿಕ್ಕು ಬದಲಿಸಿದ ರಮೇಶ್

    ಇಂಜಿನೀಯರಿಂಗ್ ನಲ್ಲಿ ದಿಕ್ಕು ಬದಲಿಸಿದ ರಮೇಶ್

    ನಟ, ನಿರ್ದೇಶಕ ರಮೇಶ್ ಇಂಜಿನೀಯರಿಂಗ್ ಪದವಿ ಪಡೆದಿದ್ದಾರೆ. ಬೆಂಗಳೂರಿನ UVCE ಕಾಲೇಜ್ ನಲ್ಲಿ ರಮೇಶ್ ತಮ್ಮ ವಿದ್ಯಾಬ್ಯಾಸ ಪಡೆದರು. ಕಾಲೇಜು ದಿನದಲ್ಲಿ ಸಿನಿಮಾ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡಿದ್ದರು. ನಂತರ ಟಿವಿ ಕಾರ್ಯಕ್ರಮಗಳ ನಿರೂಪಣೆ, ಸಿನಿಮಾ ನಟನೆ ಪ್ರಾರಂಭ ಆಯ್ತು. ಅಲ್ಲಿಂದ ಇಂಜಿನಿಯರ್ ಆಕ್ಟರ್, ಡೈರೆಕ್ಟರ್ ಆಗಿ ಬದಲಾದರು.

    ಡಿಗ್ರಿ ಮುಗಿಸಿದ ಶಿವರಾಜ್ ಕುಮಾರ್

    ಡಿಗ್ರಿ ಮುಗಿಸಿದ ಶಿವರಾಜ್ ಕುಮಾರ್

    ನಟ ಶಿವರಾಜ್ ಕುಮಾರ್ ಹುಟ್ಟಿದ್ದು ಮದ್ರಾಸ್ ನಲ್ಲಿ. ಹೀಗಾಗಿ ಅಲ್ಲಿಯೇ ಅವರ ಓದು ಕೂಡ ಶುರುವಾಯ್ತು. ತಮಿಳಿನಾಡಿನ ನ್ಯೂ ಕಾಲೇಜ್ ನಲ್ಲಿ ಶಿಕ್ಷಣ ಪಡೆದರು. ಬ್ಯಾಚುಲರ್ ಆಫ್ ಸೈನ್ಸ್ ಮುಗಿಸಿದರು. ಕಮಲ್ ಹಾಸನ್ ಅಭಿಮಾನಿಯಾಗಿದ್ದ ಶಿವಣ್ಣ, ಕಾಲೇಜಿನಲ್ಲಿ ಹೆಚ್ಚು ಹೆಚ್ಚು ಸಿನಿಮಾ ನೋಡುತ್ತಿದ್ದರು. ಕಾಲೇಜು ಮುಗಿಯುತ್ತಿದ್ದ ಹಾಗೆ ಆಕಸ್ಮಿಕವಾಗಿಯೇ ಚಿತ್ರರಂಗಕ್ಕೆ ಬಂದರು.

    ನಮ್ಮ ನಟ ನಟಿಯರ ರಿಯಲ್ ನೇಮ್ &ರೀಲ್ ನೇಮ್ನಮ್ಮ ನಟ ನಟಿಯರ ರಿಯಲ್ ನೇಮ್ &ರೀಲ್ ನೇಮ್

    ಬಿ ಕಾಂ ಓದಿದ್ದಾರೆ ಉಪೇಂದ್ರ

    ಬಿ ಕಾಂ ಓದಿದ್ದಾರೆ ಉಪೇಂದ್ರ

    ಬೆಂಗಳೂರಿನ ಎಪಿಎಸ್ ಕಾಲೇಜ್ ನಲ್ಲಿ ಉಪೇಂದ್ರ ಬಿ ಕಾಂ ಓದಿದರು. ಕಾಲೇಜಿನಲ್ಲಿ ಇದ್ದಾಗಲೇ ನಾಟಕ ಹಾಗೂ ಬರವಣಿಗೆ ಬಗ್ಗೆ ಹೆಚ್ಚು ಉಪ್ಪಿ ಆಸಕ್ತಿ ಇತ್ತು. ಕಾಲೇಜಿಗೆ ಹೊಗುವುದರ ಜೊತೆ ಜೊತೆಗೆ ಕೆಲ ಸಿನಿಮಾಗಳಿಗೆ ಸಂಭಾಷಣೆ ಬರೆದರು. ಅದೇ ವೇಳೆಗೆ ಕಾಶೀನಾಥ್ ಜೊತೆಗೆ ಕೆಲಸ ಮಾಡುವ ಅವಕಾಶ ಕೂಡ ಸಿಕ್ಕಿತು.

    ಪುನೀತ್ ಗೆ ಓದಿನ ಬಗ್ಗೆ ಆಸಕ್ತಿ ಕಡಿಮೆ

    ಪುನೀತ್ ಗೆ ಓದಿನ ಬಗ್ಗೆ ಆಸಕ್ತಿ ಕಡಿಮೆ

    ಅವರೇ ಹೇಳುವ ಹಾಗೆ ಪುನೀತ್ ರಾಜ್ ಕುಮಾರ್ ಗೆ ಓದಿನಲ್ಲಿ ಆಸಕ್ತಿ ಕಡಿಮೆ. ಪುನೀತ್ ಶಾಲೆಗೆ ಅಂತ ಹೋಗಿದ್ದು ಕೇವಲ ಒಂದೆರಡು ವರ್ಷ ಮಾತ್ರ. ಆರು ತಿಂಗಳ ಮಗು ಇದಾಗಲೇ ತೆರೆ ಮೇಲೆ ಕಾಣಿಸಿಕೊಂಡ ಅಪ್ಪು ಸ್ಕೂಲ್ ಗಿಂತ ಶೂಟಿಂಗ್ ಸೆಟ್ ನಲ್ಲಿಯೇ ಇರುತ್ತಿದ್ದರು. ನಂತರ ಮನೆಯಲ್ಲಿಯೇ ಟ್ಯೂಷನ್ ಮೂಲಕ ಓದಿ ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್ ಮುಗಿಸಿದರು.

    English summary
    Educational qualification of kannada actors.
    Tuesday, November 5, 2019, 12:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X