»   » 'ಈ ದಿಲ್ ಹೇಳಿದೆ' ಈ ಸಿನಿಮಾ ನೋಡ್ಬೇಕಂತ

'ಈ ದಿಲ್ ಹೇಳಿದೆ' ಈ ಸಿನಿಮಾ ನೋಡ್ಬೇಕಂತ

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಅಪರೂಪಕ್ಕೊಂದು ಹೊಸಬರ ಚಿತ್ರ ಇಷ್ಟವಾಗುತ್ತೆ. ವರ್ಷಕ್ಕೆ ಒಂದು ತಪ್ಪಿದ್ರೆ ಎರಡು. ಅಂತಹಾ ಸಿನಿಮಾಗಳ ಲಿಸ್ಟ್ ಕಳೆದ ವರ್ಷ ದೊಡ್ಡದಿತ್ತು. 'ಲೂಸಿಯಾ'ದಂತಹ ಟಿಪಿಕಲ್ ಸಿನಿಮಾದಿಂದ ಶುರುವಾಗಿ 'ಗೊಂಬೆಗಳ ಲವ್' ನಂತಹಾ ಸಿಂಪಲ್ ಸಿನಿಮಾಗಳು ಗೆಲುವಿನ ನಗೆ ಬೀರಿದವು.

ಆದ್ರೆ ಈ ವರ್ಷ ಮುಗೀತಾ ಬಂದ್ರು ಅಂತಹಾ ಸಿನಿಮಾಗಳ ಹೆಸರಿಲ್ಲ. ಆದ್ರೆ ಈಗ ಸಣ್ಣ ಹೆಸ್ರು ಕೇಳಿ ಬರ್ತಿರೋದು 'ಈ ದಿಲ್ ಹೇಳಿದೆ ನೀ ಬೇಕಂತ' ಚಿತ್ರದ್ದು. ನವ ನಿರ್ದೇಶಕ ಕೆಟಿಎಮ್ ಶ್ರೀನಿವಾಸ್ ಅವರ ಸಿನಿಮಾ ಶಿವಣ್ಣ ಅಭಿನಯದ 'ಬೆಳ್ಳಿ' ಚಿತ್ರದ ಜೊತೆ ತೆರೆಕಂಡಿತ್ತು. ಈಗ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಗಳಿಸ್ತಿದ್ದು ರಾಜ್ಯಾದ್ಯಂತ ಭರ್ಜರಿ ಕಲೆಕ್ಷನ್ ಮಾಡ್ತಿದೆ. ['ಈ ದಿಲ್ ಹೇಳಿದೆ ನೀ ಬೇಕಂತ' ಹೊಸ ದಾಖಲೆ]


ನಮ್ಮ ನಿಮ್ಮ ದಿಲ್ ಹೇಳೋ ಕಥೆಯನ್ನೇ ಹೊಸ ಚಿತ್ರತಂಡ ಹೇಳಿದೆ. ಕೇಳಿದ ಕೂಡಲೇ ನಿಮ್ಮನ್ನ ಸೆಳೆದುಬಿಡೋ ಹಾಡುಗಳು ಚಿತ್ರದಲ್ಲಿವೆ. ನಿರ್ಮಾಪಕ ಶ್ರೀಧರ್ ಚಿತ್ರದಲ್ಲಿರೋ ಅಷ್ಟೂ ಹಾಡುಗಳಿಗೆ ಲಿರಿಕ್ಸ್ ಬರೆದಿದ್ದಾರೆ. ಪದೇ ಪದೇ ಸಿನಿಮಾಗೆ ಸಂಗೀತ ನೀಡಿದ್ದ ಸತೀಶ್ ಆರ್ಯನ್ ಲವ್ಲೀ ಟ್ಯೂನ್ ಕೊಟ್ಟಿದ್ದಾರೆ.

ಹಾಸ್ಯ ಚಕ್ರವರ್ತಿ ನರಸಿಂಹರಾಜು ಮೊಮ್ಮಗ ಅವಿನಾಶ್ ನಟಿಸಿರೋ ಚಿತ್ರ ಇದು. ಚಿತ್ರದಲ್ಲಿ ಅವಿನಾಶ್ ಗೆ ಜೋಡಿಯಾಗಿರೋದು ಉದಯೋನ್ಮುಖ ನಟಿ ಶ್ರುತಿ. ಅವರ ಅಭಿನಯದ ಜೊತೆಗೆ ಸೌಂದರ್ಯ ನಿಮಗೆ ಬೋನಸ್.

ಚಿತ್ರದ ಸೀನ್ ಗಳಿಗಾಗಿ ಚಿತ್ರತಂಡ ಮಲೆನಾಡಿನ ರಮಣೀಯ ಕ್ಷೇತ್ರಗಳಲ್ಲಿ ತಿರುಗಾಡಿದೆ. ಲೊಕೇಶನ್ ಗಳ ಸೌಂದರ್ಯ ಚಿತ್ರದಲ್ಲಿ ನಿಮಗೆ ಮೋಡಿ ಮಾಡುತ್ತೆ. ಲಿರಿಕ್ಸ್ ಬರೆಯೋಕೆ ಸಿನಿಮಾ ಮಾಡಿದ ನಿರ್ಮಾಪಕರ ಶ್ರಮ ಸಾರ್ಥಕವಾಗಿದೆ. ಚಿತ್ರದ ಆರೂ ಹಾಡುಗಳು ಮತ್ತೆ ಮತ್ತೆ ಕೇಳಬೇಕು ಅನ್ನಿಸೋ ಹಾಗಿವೆ.

ಹೊಸತನದ ಈ ಚಿತ್ರ ಕಂಪ್ಲೀಟ್ ಎಂಟರ್ ಟೈನ್ ಮೆಂಟ್ ಪ್ಯಾಕೇಜ್ ಆಗಿದ್ದು ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಕಾಮಿಡಿ ಎಲ್ಲವೂ ಹೌಸ್ ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ.

English summary
Kannada Movie 'Ee Dil Helidhe Ni Bekantha' getting good response from Sandalwood movie goers. With an incredible performance, Avinash Diwakar has proved once again that he's talented enough to essay any role. The film directed by TM Srinivasa and produced by Sridhara S under the banner of Sai Krishna Enterprises.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada