ಮಾರ್ಚ್ 2ಕ್ಕೆ ಶ್ರುತಿ ಪ್ರಕಾಶ್ ಕೊಡ್ತಾರೆ ಸರ್ಪ್ರೈಸ್

ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಅಭಿನಯದ ಚೊಚ್ಚಲ ಸಿನಿಮಾ 'ಲಂಡನ್ ನಲ್ಲಿ ಲಂಬೋದರ' ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ಚಿತ್ರದ ಮೊದಲ ಹಾಡು 'ಟೇಕ್ ಆಫ್' ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.

ಇದೀಗ, ಚಿತ್ರದ ಇನ್ನೊಂದು ಹಾಡನ್ನ ಪ್ರೇಕ್ಷಕರ ಮುಂದೆ ತರುತ್ತಿದೆ ಚಿತ್ರತಂಡ. ಹೌದು, ನಟಿ ಶ್ರುತಿ ಪ್ರಕಾಶ್ ಅವರೇ ಹಾಡಿರುವ 'ಈ ಮನಸು.....' ಹಾಡು ಮಾರ್ಚ್ 2 ರಂದು ಬಿಡುಗಡೆಯಾಗುತ್ತಿದೆ.

Ee Manasu Song will release on march 2nd

ಶ್ರುತಿ ಪ್ರಕಾಶ್ ನಟನೆಯ ಜೊತೆಗೆ ಗಾಯಕಿಯೂ ಕೂಡ ಹೌದು. ಬಿಗ್ ಬಾಸ್ ಮನೆಯಲ್ಲಿ ಶ್ರುತಿ ಹಾಡಿರುವ ಕೆಲವು ಹಾಡುಗಳನ್ನ ಕೇಳಿರ್ತಿರಾ. ಇದೀಗ, ಸಿನಿಮಾದಲ್ಲಿ ಅವರ ಹಾಡು ಕೇಳಬಹುದು.

ಸದ್ಯ ಈ ಹಾಡಿನ ಮೇಕಿಂಗ್ ತುಣುಕು ರಿಲೀಸ್ ಆಗಿದ್ದು, ಬಹುಶಃ ಈ ಮೆಲೋಡಿ ಹಾಡು ಎಲ್ಲರಿಗೂ ಇಷ್ಟವಾಗುವುದ್ರಲ್ಲಿ ಯಾವುದು ಅನುಮಾನವಿಲ್ಲವೆನಿಸುತ್ತಿದೆ. ಪ್ರಣವ್ ಅಯ್ಯಂಗರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ ಮತ್ತು ಪ್ರಣವ್ ಸಾಹಿತ್ಯ ರಚಿಸಿದ್ದಾರೆ.

ಇನ್ನುಳಿದಂತೆ ರಾಜ್ ಸೂರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಲಂಡನ್ ಸ್ಕ್ರೀನ್ಸ್ ಸಂಸ್ಥೆಯಡಿ ಲಂಡನ್​ನಲ್ಲಿ ಅನಿವಾಸಿ ಭಾರತೀಯ ಸ್ನೇಹಿತರೆಲ್ಲ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Bigg boss fame shruthi prakash's londonalli lambodhara movie team will release second lyrical video song on march 2nd. music by pranav iyenger.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X