»   » ಅಮೆರಿಕಾದಲ್ಲಿ 'ಈಗ' ಮಾಡಿರುವ ಜಾದೂ ನೋಡಿ!

ಅಮೆರಿಕಾದಲ್ಲಿ 'ಈಗ' ಮಾಡಿರುವ ಜಾದೂ ನೋಡಿ!

Posted By:
Subscribe to Filmibeat Kannada

ತೆಲುಗು ಪ್ರಿನ್ಸ್ ಮಹೇಶ್ ಬಾಬು ನಟನೆಯ ತೆಲುಗು ಚಿತ್ರ ದೂಕುಡು, ಅಮೆರಿಕಾ ಬಾಕ್ಸ್ ಆಫೀಸ್ ನಲ್ಲಿ ಈ ವರೆಗಿನ ಹೊಸ ದಾಖಲೆ ನಿರ್ಮಿಸಿದ ತೆಲುಗು ಚಿತ್ರವಾಗಿತ್ತು. 2 ನೇ ಸ್ಥಾನವನ್ನು ಗಬ್ಬರ್ ಸಿಂಗ್ ಪಡೆದಿತ್ತು. ಇತ್ತೀಚಿಗೆ ಬಿಡುಗಡೆಯಾಗಿರುವ ಎಸ್ ಎಸ್ ರಾಜಮೌಳಿಯವರ ಚಿತ್ರ 'ಈಗ' ಸದ್ಯಕ್ಕೆ ಮೂರನೆ ಸ್ಥಾನದಲ್ಲಿದೆ. ಆದರೆ, ಕೆಲವೇ ದಿನಗಳಲ್ಲಿ ಒಂದನೇ ಸ್ಥಾನ ಅಲಂಕರಿಸುವುದು ಖಾತ್ರಿ ಎನ್ನಲಾಗುತ್ತಿದೆ.

ಸುದೀಪ್ ಸಮಂತಾ ಹಾಗೂ ನಾಣಿ ನಟನೆಯ ಈಗ ಚಿತ್ರ ಪ್ರಪಂಚದಾದ್ಯಂತ 1200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಮೆರಿಕಾ ಒಂದರಲ್ಲೇ 39 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಇದು ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ಕೇವಲ 39 ತೆರೆಗಳಲ್ಲಿ ಪ್ರದರ್ಶನ ಕಂಡು ರು. 3.64 ಕೋಟಿ ಗಳಿಕೆ ದಾಖಲಿಸಿದೆ. ಈ ಗಳಿಕೆ ಈ ಮೊದಲಿನ ದೂಕುಡು ಹಾಗೂ ಗಬ್ಬರ್ ಸಿಂಗ್ ಗಳಿಸಿದ ದಾಖಲೆಗಿಂತ ಹೆಚ್ಚಾಗಿದೆ.

ಬಿಡುಗಡೆಯಾದಾಗ ಕೇವಲ 39 ಇದ್ದ ಚಿತ್ರಮಂದಿರಗಳ ಸಂಖ್ಯೆ ನಂತರ ಭಾರೀ ಬೇಡಿಕೆ ನಿಮಿತ್ತ 59 ಆಗಿದೆ. ಹೀಗಾಗಿ ರು. 1.35 ಕೋಟಿ ಎಕ್ಸ್ ಟ್ರಾ ದಾಖಲಾಗಿ ಒಟ್ಟೂ 4.99 ಕೋಟಿ ಗಳಿಕೆ ಅಮೆರಿಕಾದಲ್ಲಿ ದಾಖಲಾದಂತಾಗಿದೆ. ಭಾರತದಲ್ಲಿ ಕೂಡ ಈಗ ಚಿತ್ರದ ಗಳಿಕೆ ಭಾರೀ ಎನ್ನುವಂತಿದೆ. ಮೊದಲ ಮೂರೇ ದಿನಗಳಲ್ಲಿ ಈ ಚಿತ್ರವು ರು. 56 ಕೋಟಿ ಗಳಿಸಿ ನಾಗಾಲೋಟದಲ್ಲಿದೆ.

ಎಸ್ ಎಸ್ ರಾಜಮೌಳಿ ನಿರ್ದೇಶಿಸಿರುವ 9 ನೇ ಚಿತ್ರ 'ಈಗ'. ಈ ಮೊದಲು ಅವರ ನಿರ್ದೇಶನದ 8 ಚಿತ್ರಗಳೂ ಕೂಡ ಸೂಪರ್ ಹಿಟ್ ಆಗಿತ್ತಾದರೂ ಈ ಮಟ್ಟಿಗಿನ ಗಳಿಕೆ ದಾಖಲಿಸಿರಲಿಲ್ಲ. ಬಿಡುಗಡೆಗೂ ಮೊದಲು ಭಾರೀ ನಿರೀಕ್ಷೆ ಇತ್ತಾದರೂ ಈ ಮಟ್ಟಿಗಿನ ಐತಿಹಾಸಿಕ ಯಶಸ್ಸನ್ನು ಯಾರೂ ನಿರೀಕ್ಷಿಸಿರಲಿಲ್ಲ.

ಸ್ವತಃ ನಿರ್ದೇಶಕ ರಾಜಮೌಳಿ ಅವರಿಗಾಗಲೀ ಅಥವಾ ಚಿತ್ರದ ಕಲಾವಿದರಾಗಿರುವ ಸುದೀಪ್, ಸಮಂತಾ ಮತ್ತು ನಾಣಿಯವರಿಗಾಗಲೀ ಈ ಪರಿ ಯಶಸ್ಸು ಅನಿರೀಕ್ಷಿತವೇ ಎನ್ನಬಹುದು. ಚಿತ್ರದ ನಿರ್ಮಾಪಕರು ಹಾಗೂ ವಿತರಕರೂ ಕೂಡ ಈ ಚಿತ್ರದ ಅನಿರೀಕ್ಷಿತ ಭಾರೀ ಯಶಸ್ಸಿನಿಂದ ಸಖತ್ ಖುಷಿಯಾಗಿದ್ದಾರೆ. ಅಮೆರಿಕಾದಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಕೂಡ ಈಗ ಚಿತ್ರ ಎಲ್ಲಾ ದಾಖಲೆ ಅಳಿಸಿಹಾಜುವ ಸಂಭವವೇ ಹೆಚ್ಚಾಗಿದೆ. (ಏಜೆನ್ಸೀಸ್)

English summary
Director SS Rajamouli Telugu movie Eega is set to beat with collection record of Mahesh Babu Dookudu and Pawan Kalyan Gabbar Singh at the USA Box Office.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada