twitter
    For Quick Alerts
    ALLOW NOTIFICATIONS  
    For Daily Alerts

    ಈಗ ನಕಲಿ ಸಿಡಿ: ಸಿಕ್ಕಬಿದ್ದ ಹಾಸ್ಟೆಲ್ ವಾರ್ಡನ್

    |

    ಕಿಚ್ಚ ಸುದೀಪ್ ಅಭಿನಯ ಹಾಗೂ ಎಸ್ ಎಸ್ ರಾಜಮೌಳಿ ನಿರ್ದೇಶನದ ತೆಲುಗು 'ಈಗ' ಚಿತ್ರದ ನಕಲಿ (ಪೈರಸಿ) ಸಿಡಿ ಪ್ರದರ್ಶನ ಮಾಡುತ್ತಿದ್ದ ಹಾಸ್ಟೆಲ್ ವಾರ್ಡನ್ ಒಬ್ಬರನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ಈ ವಿಷಯವನ್ನು ಸ್ವತಃ ರಾಜಮೌಳಿಯೇ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ನಕಲಿ ಸಿಡಿ ಜಾಲ ಪತ್ತೆಯಡಿ ನಡೆದ ಪೊಲೀಸ್ ರೈಡ್ ನಲ್ಲಿ ಹೈದ್ರಾಬಾದ್ ನಿಜಾಮ್ ಪೇಟ್ ಸಿಎಮ್ ಎಸ್ ಕಾಮರ್ಸ್ ಜೂನಿಯರ್ ಕಾಲೇಜಿನ ವಾರ್ಡನ್ ಬಂಧಿತ ಆರೋಪಿ.

    ಈಗ ಚಿತ್ರ ಜಗತ್ತಿನಾದ್ಯಂತ ಗಳಿಕೆಯಲ್ಲಿ ಈ ಹಿಂದಿನ ಎಲ್ಲಾ ದಾಖಲೆಯನ್ನೂ ಮುರಿದು ಹೊಸ ದಾಖಲೆ ಸ್ಥಾಪಿಸುವತ್ತ ಸಾಗಿದೆ. ಆದರೆ ಚಿತ್ರದ ನಿರ್ದೇಶಕ ರಾಜಮೌಳಿ ಪ್ರಕಾರ ಈಗ ಚಿತ್ರ ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡುತ್ತಿತ್ತು. ಆದರೆ ಅದಕ್ಕೆ ಅಡ್ಡಿಯಾಗಿದ್ದು ಆನ್ ಲೈನ್ ನಲ್ಲಿ ಈ ಚಿತ್ರ ಲೀಕ್ ಆಗಿದ್ದು ಹಾಗೂ ಬೆಂಬಿಡದ ಪೈರಸಿ ಜಾಲ.

    ಬಹಳಷ್ಟು ಕಡೆ ಎಲ್ಲೆಂದರಲ್ಲಿ ಈಗ ಚಿತ್ರದ ನಕಲಿ ಸಿಡಿ ಪ್ರದರ್ಶನವಾಗುತ್ತಿದೆ. ಹೀಗೆ ಆಗಿರದಿದ್ದರೆ ಚಿತ್ರದ ಗಳಿಕೆ ಬಹಳ ಚೆನ್ನಾಗಿರುತ್ತಿತ್ತು. ಮಿತಿಮೀರಿರುವ ಈ ನಕಲಿ ಸಿಡಿ ಹಾವಳಿಯಿಂದ ಕಂಗಾಲಾಗಿರುವ ರಾಜಮೌಳಿ ಇದರ ವಿರುದ್ಧ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಲು ಹೋರಾಡುತ್ತಿದ್ದಾರೆ. ಆದರೆ ಪೈರಸಿಯಿಂದ ಈಗಾಗಲೇ ಗಳಿಕೆಗೆ ಹಿನ್ನಡೆಯಾಗಿದೆ.

    ಈಗ ಬಂಧಿತನಾಗಿರುವ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಆದರೆ ಈ ರೀತಿ ಎಲ್ಲವೂ ಸಾಧ್ಯವಾಗಿಲ್ಲ. ಆದರೆ ಬಹಳಷ್ಟು ಕಡೆ ಇನ್ನೂ ನಕಲಿ ಸಿಡಿ ಪ್ರದರ್ಶನ ನಡೆಯುತ್ತಿದೆ. ಆದರೆ ಸೂಕ್ತ ಮಾಹಿತಿ ಕೊರತೆಯಿಂದ ಬಹಳಷ್ಟು ಕಡೆ ಬಂಧನ ಸಾಧ್ಯವಾಗಿಲ್ಲ ಎಂಬುದು ರಾಜಮೌಳಿ ಹಾಗೂ ಚಿತ್ರತಂಡದ ಅಭಿಪ್ರಾಯ.

    ನಿನ್ನೆ, ಜುಲೈ 24 ರಂದು ಈ ಕುರಿತು ರಾಜಮೌಳಿ ಮಾಡಿರುವ ಟ್ವೀಟ್ ಹೀಗಿದೆ- "APVC along with police raided CMS Commerce junior college in nizampet where a pirated copy of eega was being screened for 300 odd girl Students. the operator, manager and the warden were arrested and equipment seized. FIR filed."

    ಕಾಲೇಜು, ಹಾಸ್ಟೆಲ್ ಇತ್ಯಾದಿ ಸ್ಥಳಗಳಿಗೆ ಹೋಗಿ ಜನರಿಗೆ ನಕಲಿ ಸಿಡಿ ನೋಡದಂತೆ ರಾಜಮೌಳಿ ವಿನಂತಿಸಿಕೊಂಡಿದ್ದಾರೆ. ತಮ್ಮ ಚಿತ್ರದ ನಿರ್ಮಾಪಕರಿಗೆ ಈ 'ಆನ್ ಲೈಲ್ ಲೀಕೇಜ್' ಹಾಗೂ 'ಪೈರಸಿ ಹಾವಳಿ'ಯಿಂದ ಸಾಕಷ್ಟು ಮೋಸವಾಗಿದೆ ಎಂದಿರುವ ರಾಜಮೌಳಿ, ಬಿಡುಗಡೆಯಾದ ಒಂದು ವಾರದೊಳಗೆ 6,55,00 ಜನರು ಈಗ ಚಿತ್ರವನ್ನು ಇಂಟರ್ನೆಟ್ ಮೂಲಕ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂಬ ರಹಸ್ಯವನ್ನು ಬಯಲಿಗೆಳೆದಿದ್ದಾರೆ. (ಏಜೆನ್ಸೀಸ್)

    English summary
    SS Rajamouli says that a hostel warden has been arrested in APVC anti-piracy raid, while screening a pirated CD of his movie Eega at a college in Nizampet.
 
    Wednesday, July 25, 2012, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X