'ಈಗ' ಚಿತ್ರದಲ್ಲೇ ನಾನು ಇಂಡಿಯಾ ಮಾರ್ಕೆಟ್ ನೋಡ್ಬಿಟ್ಟೆ- ಕಿಚ್ಚ ಸುದೀಪ್
'ಮ್ಯಾಕ್ಸ್' ಬಳಿಕ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಶುರುವಾಗಲಿದ್ದು ಕ್ರಿಸ್‌ಮಸ್ ಹಬ್ಬಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ ಎಂದು ಸುದೀಪ್ ಹೇಳಿದ್ದಾರೆ. ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಸತ್ಯ ಜ್ಯೋತಿ ಫಿಲ್ಮ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ.
ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಕನ್ನಡ ಮಾರ್ಕೆಟ್ ಬಿಟ್ಟು ಬೇರೆ ಕಡೆ ಮುಖ ಮಾಡುವುದು ಸರಿಯಲ್ಲ ಎನ್ನುವ ವಾದವೂ ಇದೆ. ಸದ್ಯ ಇದೇ ವಿಚಾರದ ಬಗ್ಗೆ ನಟ ಸುದೀಪ್ ಮಾತನಾಡಿದ್ದಾರೆ. ಹೊಸ ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಮಾತ್ರ ಬಿಡುಗಡೆ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ "ಈಗ' ಚಿತ್ರದಲ್ಲೇ ನಾನು ಇಂಡಿಯಾ ಮಾರ್ಕೆಟ್ ನೋಡ್ಬಿಟ್ಟೆ" ಎಂದಿದ್ದಾರೆ.

ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ತಮಿಳಿನಲ್ಲಿ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ. ಅದ್ಭುತ ಸಿನಿಮಾಗಳನ್ನು ಮಾಡಿದ್ದಾರೆ. ತಮಿಳು ಮಾರ್ಕೆಟ್ ಬೆಳೆಸಬೇಕು ಎಂದಿದ್ದರೆ ಕನ್ನಡದಲ್ಲಿ ಸಿನಿಮಾ ಮಾಡಬೇಕಿರಲಿಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಒಂದು ಕೈ ನೋಡಲು ಬಂದಿದ್ದಾರೆ. ತಮಿಳು ಸಂಸ್ಥೆ ಆಗಿರುವುದರಿಂದ ಅಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತದೆ. 2010ರಲ್ಲಿ 'ಈಗ' ಸಿನಿಮಾ ಮಾಡಿದಾಗಲೇ ನಾನು ಇಂಡಿಯಾ ಮಾರ್ಕೆಟ್ ನೋಡ್ಬಿಟ್ಟೆ. ಆದರೆ ಬಳಿಕ ಬಂದು ಕನ್ನಡ ಚಿತ್ರದಲ್ಲೇ ನಟಿಸಿದ್ದೆ. ಅವರ ಮಾರ್ಕೆಟ್ ಅವರಿಗೆ ಬಿಡೋಣ, ನಮ್ಮದು ನಾವ್ ನೊಡ್ಕೊಳ್ಳೋಣ" ಎಂದು ಸುದೀಪ್ ಹೇಳಿದ್ದಾರೆ.
ಸ್ಟಾರ್ ನಟರು ಕನ್ನಡದಲ್ಲಿ ಸಿನಿಮಾ ಮಾಡಬೇಕು. ಮೊದಲು ಕನ್ನಡ ಪ್ರೇಕ್ಷಕರನ್ನು ರಂಜಿಸಬೇಕು. ಆ ಬಳಿಕ ಪ್ಯಾನ್ ಇಂಡಿಯಾ ಎಂದು ಕೆಲವರು ಹೇಳುತ್ತಾರೆ. ನಟ ದರ್ಶನ್ ಕೂಡ ನಾನು ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಮಾಡುವುದು. ಪ್ಯಾನ್ ಇಂಡಿಯಾ ಎನ್ನವುದೆಲ್ಲಾ ಆಮೇಲೆ ಎನ್ನುತ್ತಿರುತ್ತಾರೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ 'ಮ್ಯಾಕ್ಸ್'-2 ಸಿನಿಮಾ ಬರುತ್ತದೆ ಎಂದು ಗುಲ್ಲಾಗಿತ್ತು. ಆದರೆ ಈ ಶುರು ಮಾಡುತ್ತಿರುವ ಸಿನಿಮಾ ಬೇರೆ ಕಥೆ. ಈ ಚಿತ್ರಕ್ಕೂ 'ಮ್ಯಾಕ್ಸ್' ಕಥೆಗೂ ಸಂಬಂಧ ಇಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. 'K- 47' ಚಿತ್ರದಲ್ಲಿ ಕೂಡ ನಾಯಕಿ ಇಲ್ಲ ಎಂದು ಹೇಳಲಾಗ್ತಿದೆ.
'ಮ್ಯಾಕ್ಸ್' ಚಿತ್ರದಲ್ಲಿ ಕೂಡ ನಾಯಕಿ ಇರಲಿಲ್ಲ. "ಆರಂಭದಲ್ಲಿ ಈ ಚಿತ್ರದ ಕಥೆಯಲ್ಲಿ ನಾಯಕಿ ಪಾತ್ರ ಇತ್ತು. ಬಳಿಕ ಆ ಪಾತ್ರ ಇಲ್ಲದಿದ್ದರೆ ಹೇಗೆ? ಎಂದು ಯೋಚಿಸಿ ಬದಲಿಸಲಾಯಿತು. ಪಾತ್ರಕ್ಕೆ ತೂಕ ಇಲ್ಲ ಎಂದಮೇಲೆ ಅದನ್ನು ಸುಮ್ಮನೆ ಇಡುವುದು ಬೇಡ ಎನಿಸಿತು" ಎಂದು ಸುದೀಪ್ ಹೇಳಿದ್ದಾರೆ.


Click it and Unblock the Notifications











