ಕನ್ನಡದ 'ಕೆ ಜಿ ಎಫ್' ಗೆದ್ದರೇ ಏನೆಲ್ಲ ಆಗಬಹುದು?
Recommended Video

'ಕೆ ಜಿ ಎಫ್' ಎನ್ನುವುದು ಬರೀ ಯಶ್ ಅಭಿಮಾನಿಗಳ ಸಿನಿಮಾವಲ್ಲ. ಅದು ಕನ್ನಡದ ಹೆಮ್ಮೆಯ ಸಿನಿಮಾವಾಗುತ್ತಿದೆ. ದೊಡ್ಡ ಮಟ್ಟದಲ್ಲಿ ಯೋಚನೆ ಮಾಡಲು, ಕನ್ನಡದ ಸಿನಿಮಾವನ್ನು ನೆಕ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗಲು ಬರುತ್ತಿರುವ ಸಿನಿಮಾವೇ 'ಕೆ ಜಿ ಎಫ್'.
ಐದು ಭಾಷೆಗಳಲ್ಲಿ ರಿಲೀಸ್ ಆಗಿರುವ 'ಕೆ ಜಿ ಎಫ್' ಸಿನಿಮಾದ ಟ್ರೇಲರ್ ಸೂಪರ್ ಹಿಟ್ ಆಗಿದೆ. ಸಿನಿಮಾದ ಮೇಲೆ ಪ್ರೇಕ್ಷಕರ ನಂಬಿಕೆ ಜಾಸ್ತಿಯಾಗಿದೆ. ಇನ್ನು ಈ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗುತ್ತಿದೆ.
ಅಂದಹಾಗೆ, 'ಕೆ ಜಿ ಎಫ್' ಸಿನಿಮಾ ಗೆಲ್ಲಬೇಕು ಎನ್ನುವುದು ಎಲ್ಲರ ಆಸೆ. ಆ ರೀತಿ ಈ ಸಿನಿಮಾ ಗೆದ್ದರೇ ಅದರ ಪರಿಣಾಮ ಇಡೀ ಚಿತ್ರರಂಗದ ಮೇಲೆ ಬೀಳುತ್ತದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದರೇ ಏನೆಲ್ಲ ಆಗಬಹುದು ಎಂಬ ಕುತೂಹಲಕ್ಕೆ ಈ ಕೆಲ ಅಂಶಗಳು ಉತ್ತರ ಆಗಬಹುದು...

ಯಶ್ ನ್ಯಾಷನಲ್ ಸ್ಟಾರ್
ಕನ್ನಡಕ್ಕೆ ಸೀಮಿತವಾಗಿದ್ದ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಿಂದ ನ್ಯಾಷನಲ್ ಸ್ಟಾರ್ ಆಗಬಹುದು. ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದರೇ ಅವರಿಗೆ ಬೇರೆ ಬೇರೆ ಚಿತ್ರರಂಗದಿಂದ ದೊಡ್ಡ ಅವಕಾಶಗಳು ಬರಬಹುದು. ಅಲ್ಲದೆ, ಅವರ ಜನಪ್ರಿಯತೆ ಇಡೀ ಭಾರತ ಚಿತ್ರರಂಗಕ್ಕೆ ಹಬ್ಬಬಹುದು.

ಬಾಕ್ಸ್ ಆಫೀಸ್ ನಲ್ಲಿ ದಾಖಲೆ
ಈಗಾಗಲೇ 'ಕೆ ಜಿ ಎಫ್' ಸಿನಿಮಾ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಅದೇ ರೀತಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತದೆ. ಸಿನಿಮಾ ನೋಡಿ ಬಂದ ಪ್ರೇಕ್ಷಕರು ಇಷ್ಟ ಪಟ್ಟರೇ, ಗಲ್ಲಾ ಪಟ್ಟಿಗೆ ತುಂಬುತ್ತದೆ. ಜನ ಚಿತ್ರ ನೋಡಿ ಖುಷಿಯಾದ್ರೆ, ಸಿನಿಮಾ ದಾಖಲೆಯ ಗಳಿಕೆ ಮಾಡುವ ಎಲ್ಲ ಲಕ್ಷಣ ಕಾಣುತ್ತಿದೆ

ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್
'ಉಗ್ರಂ' ಮೂಲಕ ಮೊದಲ ಗೆಲುವು ಕಂಡಿದ್ದ ಪ್ರಶಾಂತ್ ನೀಲ್ ಈಗ 'ಕೆ ಜಿ ಎಫ್' ನಲ್ಲಿಯೂ ಅದನ್ನು ಮುಂದುವರೆಸುವ ತಯಾರಿ ಮಾಡಿಕೊಂಡಿದ್ದಾರೆ. ತಮ್ಮ ಕೆಲಸದ ಮೂಲಕ ಮಾತನಾಡುವ ಅವರ ಈ ಚಿತ್ರವೂ ಗೆದ್ದರೇ ಸ್ಟಾರ್ ಡೈರೆಕ್ಟರ್ ಆಗುತ್ತಾರೆ.

ಕನ್ನಡ ಸಿನಿಮಾ ಮಾರ್ಕೆಟ್ ಹೆಚ್ಚುತ್ತದೆ
ಸ್ಯಾಂಡಲ್ ವುಡ್ ಮಾರ್ಕೆಟ್ ಅನ್ನು ಗಡಿ ದಾಟಿ ತಗೆದುಕೊಂಡು ಹೋಗಲು ಈ ಸಿನಿಮಾ ಸಹಾಯ ಮಾಡುತ್ತದೆ. ಬೇರೆ ಭಾಷೆಯ ವಿತರಕರು ನಮ್ಮ ಸಿನಿಮಾವನ್ನು ತೆಗೆದುಕೊಳ್ಳುತ್ತಾರೆ. ಕನ್ನಡದಲ್ಲಿಯೂ ದುಡ್ಡು ಇದೆ, ಅದನ್ನು ತೆಗೆಯುವುದು ತಿಳಿದಿರಬೇಕು ಎಂಬುದನ್ನು ಈ ಚಿತ್ರ ತೋರಿಸಿಕೊಡಲಿದೆ.

ನಟಿ ಶ್ರೀನಿಧಿ ಶೆಟ್ಟಿಗೆ ಆಫರ್ ಗಳು
ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅವರಿಗೆ ಈ ಸಿನಿಮಾದ ನಂತರ ದೊಡ್ಡ ದೊಡ್ಡ ಅವಕಾಶಗಳು ಹುಡುಕಿಕೊಂಡು ಬರಬಹುದು. ಮೊದಲ ಸಿನಿಮಾದಲ್ಲಿಯೇ ದೊಡ್ಡ ಮಟ್ಟದಲ್ಲಿ ಲಾಂಚ್ ಆಗುತ್ತಿರುವ ಅವರಿಗೆ ಇನ್ನೂ ಒಳ್ಳೆಯ ಅವಕಾಶ ಸಿಗಬಹುದು.

ಹೆಚ್ಚು ಭಾಷೆಗಳಲ್ಲಿ ಕನ್ನಡ ಚಿತ್ರಗಳು
'ಕೆ ಜಿ ಎಫ್' ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತದೆ. ಐದೂ ಭಾಷೆಯ ಟ್ರೇಲರ್ ಗಳು ಈಗ ಹಿಟ್ ಆಗಿದೆ. ಅದರ ಹಿಂದೆಯೇ 'ಪೈಲ್ವಾನ್' ಚಿತ್ರ ಕೂಡ ಎಂಟು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ರೀತಿ ಕನ್ನಡದ ಬಿಗ್ ಬಜೆಟ್ ಚಿತ್ರಗಳು ನಾಲ್ಕೈದು ಭಾಷೆಗಳಲ್ಲಿ ರಿಲೀಸ್ ಆಗುವ ಟ್ರೆಂಡ್ ಹೆಚ್ಚಾಗುತ್ತದೆ.

ಕ್ವಾಲಿಟಿ ಆಫ್ ಮೇಕಿಂಗ್
'ಕೆ ಜಿ ಎಫ್' ಈ ಮಟ್ಟಿಗೆ ಸದ್ದು ಮಾಡುತ್ತಿರುವುದಕ್ಕೆ ಕಾರಣ ಚಿತ್ರದ 'ಕ್ವಾಲಿಟಿ'. ಒಂದು ಒಳ್ಳೆಯ ಕ್ವಾಲಿಟಿ ಸಿನಿಮಾ ಕೊಟ್ಟರೆ ಜನ ಅದನ್ನು ಯಾವ ಮಟ್ಟಿಗೆ ಇಷ್ಟ ಪಡುತ್ತಾರೆ ಎನ್ನುವುದಕ್ಕೆ ಈ ಸಿನಿಮಾ ಉತ್ತಮ ಉದಾಹರಣೆ. ಈ ಚಿತ್ರದ ನಂತರ ಉಳಿದ ನಿರ್ದೇಶಕರುಗಳೂ ಕ್ವಾಲಿಟಿಗೆ ಹೆಚ್ಚು ಗಮನ ನೀಡಬಹುದು.

ತಾಂತ್ರಿಕ ವರ್ಗಕ್ಕೆ ಡಿಮ್ಯಾಂಡ್
ಈ ಸಿನಿಮಾದಲ್ಲಿ ಕೆಲಸ ಮಾಡಿದ ತಾಂತ್ರಿಕ ವರ್ಗಕ್ಕೆ ಒಳ್ಳೆಯ ಹೆಸರು ಸಿಗುತ್ತದೆ. ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್, ಸಿನಿಮಾಟೋಗ್ರಾಫರ್ ಭುವನ್ ಗೌಡ ಸೇರಿದಂತೆ ಅನೇಕರ ಡಿಮ್ಯಾಂಡ್ ಜಾಸ್ತಿಯಾಗುತ್ತದೆ.

ದೊಡ್ಡ ಬಜೆಟ್, ದೊಡ್ಡ ಯೋಚನೆಗಳು
ಎಲ್ಲದಕ್ಕಿಂತ ಹೆಚ್ಚಾಗಿ 'ಕೆ ಜಿ ಎಫ್' ಸಿನಿಮಾ ದೊಡ್ಡ ದೊಡ್ಡ ಯೋಚನೆ ಮಾಡಲು ಸ್ಫೂರ್ತಿ ನೀಡುತ್ತಿದೆ. ಕನ್ನಡದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಹಾಗೂ ಒಳ್ಳೆಯ ಸಿನಿಮಾಗಳು ಬರಬೇಕು, ಅವು ಬೇರೆ ಭಾಷೆಗೆ ಸವಾಲು ಹಾಕಬೇಕು, ಕನ್ನಡದ ಚಿತ್ರರಂಗ ತನ್ನ ಘನತೆ ಹೆಚ್ಚಿಕೊಳ್ಳಬೇಕು ಎಂಬ ಕನಸನ್ನು ನನಸು ಮಾಡಬಹುದು.


Click it and Unblock the Notifications











