twitter
    For Quick Alerts
    ALLOW NOTIFICATIONS  
    For Daily Alerts

    'ಕುರುಕ್ಷೇತ್ರ' ಗೆದ್ದರೆ ಇಂಡಸ್ಟ್ರಿಯಲ್ಲಾಗುವ 5 ಬದಲಾವಣೆಗಳಿವು.!

    |

    Recommended Video

    Kurukshetra Movie: ಪರ ಭಾಷೆಗಳಲ್ಲೂ ತೆರೆ ಕಾಣುತ್ತಿದೆ ಕುರುಕ್ಷೇತ್ರ

    ಕೆಜಿಎಫ್ ಸಿನಿಮಾ ಹಿಟ್ ಆದ್ಮೇಲೆ ಸ್ಯಾಂಡಲ್ ವುಡ್ ಇಂಡಸ್ಟ್ರಿ ಮತ್ತಷ್ಟು ಎತ್ತರಕ್ಕೆ ಸಾಗಿದೆ. ಕನ್ನಡ್ ಎನ್ನುತ್ತಿದ್ದ ಬಾಲಿವುಡ್, ತೆಲುಗು, ತಮಿಳು ಪ್ರೇಕ್ಷಕರು ಈಗ ಕನ್ನಡ ಇಂಡಸ್ಟ್ರಿ ಎನ್ನುವಂತೆ ಮಾಡಿದೆ ಯಶ್ ಚಿತ್ರ.

    ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನ ವಿಸ್ತರಿಸಿದೆ. ಕನ್ನಡ ಸಿನಿಮಾಗಳು ಬೇರೆ ಭಾಷೆಯಲ್ಲಿ ಬಿಡುಗಡೆ ಮಾಡಬಹುದು ಎಂಬುದನ್ನ ತೋರಿಸಿಕೊಟ್ಟಿದೆ. ಕೆಜಿಎಫ್ ನಂತರ ಅಂತಹದ್ದೇ ನಿರೀಕ್ಷೆಯಲ್ಲಿ ಬರ್ತಿರುವ ಸಿನಿಮಾ ಕುರುಕ್ಷೇತ್ರ.

    'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.! 'ಕೆಜಿಎಫ್' ಹಿಟ್ ಆದ್ಮೇಲೆ ನಮ್ ಇಂಡಸ್ಟ್ರಿಯಲ್ಲಾದ 5 ಬದಲಾವಣೆ.!

    ಐದು ಭಾಷೆಯಲ್ಲಿ ಬರ್ತಿರುವ ಕುರುಕ್ಷೇತ್ರ ಸುಮಾರು 3 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಬಹಳ ನಿರೀಕ್ಷೆಯೊಂದಿಗೆ ಪ್ರೇಕ್ಷರೆದುರು ಬರುತ್ತಿರುವ ಕುರುಕ್ಷೇತ್ರ ಬಹುದೊಡ್ಡ ಸಕ್ಸಸ್ ಕಂಡರೇ ಇಂಡಸ್ಟ್ರಿಯಲ್ಲಿ ಕೆಲವು ಮಹತ್ವದ ಬದಲಾವಣೆ ಆಗಬಹುದು. ಆ ಬದಲಾವಣೆಗಳ ಬಗ್ಗೆ ಒಂದು ನೋಟ...ಮುಂದೆ ಓದಿ......

    ಪೌರಾಣಿಕ ಚಿತ್ರಗಳ ಮೇಲೆ ಒಲವು

    ಪೌರಾಣಿಕ ಚಿತ್ರಗಳ ಮೇಲೆ ಒಲವು

    ಈಗಿನ ಟ್ರೆಂಡ್ ನಲ್ಲಿ ಪೌರಾಣಿಕ ಚಿತ್ರಗಳನ್ನ ಮಾಡಲು ಯಾವ ನಿರ್ದೇಶಕರು, ನಿರ್ಮಾಪಕರು ಧೈರ್ಯ ಮಾಡುತ್ತಿಲ್ಲ. ಬಹುಶಃ ಕುರುಕ್ಷೇತ್ರ ಹಿಟ್ ಆದರೆ, ಇತರೆ ಇಂಡಸ್ಟ್ರಿಯವರು ಕೂಡ ಪೌರಾಣಿಕ ಚಿತ್ರಗಳ ಮೇಲೆ ಆಸಕ್ತಿ ತೋರಬಹುದು. ಕನ್ನಡದಲ್ಲೂ ಕೂಡ ಮತ್ತಷ್ಟು ನಿರ್ಮಾಪಕರು ಪೌರಾಣಿಕ ಚಿತ್ರ ಕಡೆ ಒಲವು ತೋರಬಹುದು.

    'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್'ನಿನ್ನನ್ನ ಬಿಟ್ಟರೇ ಕರ್ನಾಟಕಕ್ಕೆ ಇನ್ನೊಬ್ಬ ದುರ್ಯೋಧನ ಇಲ್ಲ' - ರವಿಚಂದ್ರನ್

    ರಾಷ್ಟ್ರಮಟ್ಟದಲ್ಲಿ ಡಿ ಬಾಸ್ ನೇಮು

    ರಾಷ್ಟ್ರಮಟ್ಟದಲ್ಲಿ ಡಿ ಬಾಸ್ ನೇಮು

    ದರ್ಶನ್ ಅಂದ್ರೆ ಕನ್ನಡ ನಟ ಎಂದಷ್ಟೇ ಇತರೆ ಇಂಡಸ್ಟ್ರಿಯವರಿಗೆ ಗೊತ್ತಿದೆ. ಆದರೆ. ಕುರುಕ್ಷೇತ್ರದ ಯಶಸ್ಸಿನ ನಂತರ ಯಶ್ ರೀತಿ ಡಿ ಬಾಸ್ ಕೂಡ ನ್ಯಾಷನಲ್ ಸ್ಟಾರ್ ಆಗಬಹುದು. ಈಗಿರುವ ಅಭಿಮಾನಿ ಬಳಗ ರಾಷ್ಟ್ರಾದ್ಯಂತ ವಿಸ್ತರಿಸಬಹುದು. ಕನ್ನಡ ಬಿಟ್ಟು ಪರಭಾಷೆಯಲ್ಲಿ ಡಿ ಬಾಸ್ ಗೆ ಫ್ಯಾನ್ಸ್ ಬಳಗ ಹೆಚ್ಚಾಗಬಹುದು.

    ದರ್ಶನ್ ಗೆ 'ಕುರುಕ್ಷೇತ್ರ' ಯಾಕೆ ಅಷ್ಟೊಂದು ಮುಖ್ಯ?ದರ್ಶನ್ ಗೆ 'ಕುರುಕ್ಷೇತ್ರ' ಯಾಕೆ ಅಷ್ಟೊಂದು ಮುಖ್ಯ?

    ರಾಜಮೌಳಿ, ಅಮೀರ್ ಕಣ್ಣು ದರ್ಶನ್ ಮೇಲೆ ಬೀಳಬಹುದು

    ರಾಜಮೌಳಿ, ಅಮೀರ್ ಕಣ್ಣು ದರ್ಶನ್ ಮೇಲೆ ಬೀಳಬಹುದು

    ಎಸ್ ಎಸ್ ರಾಜಮೌಳಿ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಭವಿಷ್ಯದಲ್ಲಿ ಮಹಾಭಾರತ ಕುರಿತು ಸಿನಿಮಾ ಮಾಡಬೇಕು ಎಂದುಕೊಂಡಿದ್ದಾರೆ. ಆದ್ರೆ, ಸದ್ಯಕ್ಕೆ ಈ ಪ್ರಾಜೆಕ್ಟ್ ಗಳು ಬರಿ ಕನಸಾಗಿ ಉಳಿದಿದೆ. ಬಟ್, ಕುರುಕ್ಷೇತ್ರ ಸಿನಿಮಾ ನೋಡಿದ್ಮೇಲೆ ರಾಜಮೌಳಿ ಮತ್ತು ಅಮೀರ್ ಖಾನ್ ತಮ್ಮ ಕನಸಿನ ಪ್ರಾಜೆಕ್ಟ್ ಗಳಿಗೆ ಜೀವ ನೀಡಬಹುದು ಮತ್ತು ಆ ಮಹತ್ವದ ಚಿತ್ರದಲ್ಲಿ ದರ್ಶನ್ ಗೆ ಒಂದು ಸೀಮಿತವಾಗಿಡಬಹುದು.

    ''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್''ನಾನಿನ್ನು ಕಣ್ಣು ಬಿಡುತ್ತಿರುವ ಕಲಾವಿದ'' : ದರ್ಶನ್ ಬಗ್ಗೆ ನಿಖಿಲ್ ಓಪನ್ ಟಾಕ್

    ಪ್ಯಾನ್ ಇಂಡಿಯಾ ಚಿತ್ರದ ಮೇಲೆ ನಂಬಿಕೆ ಹೆಚ್ಚಾಗುತ್ತೆ

    ಪ್ಯಾನ್ ಇಂಡಿಯಾ ಚಿತ್ರದ ಮೇಲೆ ನಂಬಿಕೆ ಹೆಚ್ಚಾಗುತ್ತೆ

    ಕೆಜಿಎಫ್ ಚಿತ್ರದ ನಂತರ ಬರುತ್ತಿರುವ ಸ್ಟಾರ್ ಗಳ ಸಿನಿಮಾ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಬರ್ತಿದೆ. ಕುರುಕ್ಷೇತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದನ್ನ ನೋಡಿದ್ಮೇಲೆ ಮುಂದಿನ ಚಿತ್ರಗಳು ಕೂಡ ಅದೇ ರೀತಿ ಬಹುಭಾಷೆಯಲ್ಲಿ ಬರುವ ಪ್ರಯತ್ನ ಮಾಡ್ತಾರೆ.

    ಮಲ್ಟಿಸ್ಟಾರ್ ಚಿತ್ರ ಹೆಚ್ಚಾಗಬಹುದು

    ಮಲ್ಟಿಸ್ಟಾರ್ ಚಿತ್ರ ಹೆಚ್ಚಾಗಬಹುದು

    ಕುರುಕ್ಷೇತ್ರ ಸಿನಿಮಾದಲ್ಲಿ ಬಹುದೊಡ್ಡ ತಾರಬಳಗವಿದೆ. ದರ್ಶನ್, ರವಿಚಂದ್ರನ್, ರವಿಶಂಕರ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫ್, ಶ್ರೀನಾಥ್, ಶಶಿಕುಮಾರ್, ಅಂಬರೀಶ್, ಮೇಘನಾ ರಾಜ್, ಸ್ನೇಹಾ ಹೀಗೆ ಹಲವು ಕಲಾವಿದರಿದ್ದಾರೆ. ಇಷ್ಟು ದೊಡ್ಡ ಕಲಾವಿದರ ಬಳಗವನ್ನ ಒಟ್ಟುಗೂಡಿಸಿ ಸಿನಿಮಾ ಮಾಡುವುದಕ್ಕೂ ಧೈರ್ಯ ಬೇಕು. ಬಹುಶಃ ಇಂತಹ ಸಿನಿಮಾ ಮಾಡಬಹುದು ಎಂಬ ನಿರ್ಧಾರಕ್ಕೆ ಮತ್ತಷ್ಟು ನಿರ್ದೇಶಕರು, ನಿರ್ಮಾಪಕರು ಮುಂದಾಗಬಹುದು.

    English summary
    If Kurukshetra gets Huge success in National level, what are the impact will happening in sandalwood.
    Thursday, August 1, 2019, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X