For Quick Alerts
  ALLOW NOTIFICATIONS  
  For Daily Alerts

  ವಿವಾದದ ನಡುವೆಯೂ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಶುಭಾಶಯ ತಿಳಿಸಿದ ದರ್ಶನ್

  |

  ಇದು ದೇಶದಾದ್ಯಂತ ಮುಸ್ಲಿಂವರು ಈದ್ ಉಲ್ ಅಧಾವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇಸ್ಲಾಮಿಕ್ ಭಕ್ತರು ವಾರ್ಷಿಕ ಹಜ್ ಯಾತ್ರೆಯನ್ನು ಮುಕ್ತಾಯಗೊಳಿಸುವ ದಿನವಿದು. ಬಕ್ರಿದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮುಸ್ಲಿಂಮರ ಈ ವಿಶೇಷ ದಿನದಂದು ದೇಶದ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ.

  ಇದೀಗ ಸ್ಯಾಂಡಲ್ ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಮುಸ್ಲಿಂ ಬಾಂಧವರಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ತನ್ನ ವಿವಾದಗಳ ನಡುವೆಯೂ ದರ್ಶನ್ ಹಬ್ಬಕ್ಕೆ ವಿಶ್ ಮಾಡುವುದನ್ನು ಮರೆತಿಲ್ಲ. ಮುಸ್ಲಿಂ ಬಾಂಧವರಿಗೆ ಸಂತೋಷ, ನೆಮ್ಮದಿ ಕರುಣಿಸಲಿ ಎಂದು ಶುಭ ಕೋರಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ದರ್ಶನ್, "ಈದ್ ಮುಬಾರಕ್ ಹಬ್ಬದ ಶುಭಾಶಯಗಳು.. ನಿಮ್ಮ ಬದುಕಿನಲ್ಲಿ ಸಂತೋಷ, ನೆಮ್ಮದಿ, ಐಶ್ವರ್ಯ ಕರುಣಿಸಲಿ" ಎಂದು ಹೇಳಿದ್ದಾರೆ.

  ಅಂದಹಾಗೆ ದರ್ಶನ್ ವಿವಾದ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ದರ್ಶನ್ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ ಬಳಿಕ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರ ನಡುವಿನ ವಾಕ್ಸಮರ ತಾರಕಕ್ಕೇರಿತ್ತು. ಸದ್ಯ ಈ ಘಟನೆ ಪೊಲೀಸ್ ತನಿಖೆಯಲ್ಲಿದೆ.

   Eid Ul Adha Mubarak 2021; Darshan wishes on the occasion of Bakrid
  ಪತಿ ಅರೆಸ್ಟ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ

  ಇನ್ನು ಬಕ್ರಿದ್ ಹಬ್ಬಕ್ಕೆ ಸ್ಯಾಂಡಲ್ ವುಡ್ ನ ನಿರ್ದೇಶಕ ಸಿಂಪಲ್ ಸುನಿ ಕೂಡ ಶುಭಾಶಯ ತಿಳಿಸಿದ್ದಾರೆ. ತಮ್ಮದೆ ಶೈಲಿಯಲ್ಲಿ ವಿಶ್ ಮಾಡಿರುವ ಸುನಿ, ಬಿರಿಯಾನಿ ಬರಲಿ ಎಂದು ಹೇಳಿದ್ದಾರೆ. "ಮುಸ್ಲಿಂ ಸ್ನೇಹಿತರಿಗೆಲ್ಲಾ ಬಕ್ರೀದ್ EId-ul-Adha ಹಬ್ಬದ ಶುಭಾಶಯಗಳು. ನಿಮಗೆಲ್ಲಾ ಆರೋಗ್ಯ..ಸುಖ..ಸಮೃದ್ಧಿ ಇರಲಿ..ಹಾಗೆ ನಮಗೆ ಬಿರಿಯಾನಿ ಬರಲಿ" ಎಂದು ವಿಶ್ ಮಾಡಿದ್ದಾರೆ.

  English summary
  Eid Ul Adha Mubarak 2021; Darshan wishes on the occasion of Bakrid.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X