ಶೂಟಿಂಗ್ ಹಂತದಲ್ಲಿ ಭರ್ಜರಿ ಬಿಸಿನೆಸ್ ಮಾಡಿದ ಪ್ರೇಮ್ 'ಏಕ್ ಲವ್ ಯಾ'

'ದಿ ವಿಲನ್' ಸಿನಿಮಾ ಬಳಿಕ ಪ್ರೇಮ್ ನಿರ್ದೇಶನ ಮಾಡುತ್ತಿರುವ ಚಿತ್ರ ಏಕ್ ಲವ್ ಯಾ. ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿರುವ ಈ ಚಿತ್ರ ಭಾರಿ ಕುತೂಹಲ ಮೂಡಿಸಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಕುವರಿ ರೀಷ್ಮಾ ನಾಯಕಿಯಾಗಿದ್ದಾರೆ.

ಶೂಟಿಂಗ್ ಹಂತದಲ್ಲಿರುವಾಗಲೇ ಏಕ್ ಲವ್ ಯಾ ಚಿತ್ರ ಭರ್ಜರಿ ಬಿಸಿನೆಸ್ ಮಾಡಿದೆ. ಆಡಿಯೋ ಮಾರ್ಕೆಟ್ ನಲ್ಲಿ ಹೊಸ ದಾಖಲೆ ಬರೆದ ಪ್ರೇಮ್ಸ್ ಏಕ್ ಲವ್ ಯಾ ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕು ಸೇಲ್ ಆಗಿದೆ.

ಸುಮಾರು 81 ಲಕ್ಷ ರೂಪಾಯಿ ನೀಡಿ A2 ಮ್ಯೂಸಿಕ್ (ಅಶ್ವಿನಿ ಆಡಿಯೋ) ಸಂಸ್ಥೆ ಏಕ್ ಲವ್ ಯಾ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ.

Ek Love Ya Audio Rights Sold Out For A2 Music

ಅಂದು ಕರಿಯ, ಎಕ್ಸ್ ಕ್ಯೂಸ್ ಮೀ, ಜೋಗಿ, ಜೋಗಯ್ಯ. ಪ್ರೀತಿ ಏಕೆ ಭೂಮಿ ಮೇಲಿದೆ ಅಂತಹ ಹಿಟ್ ಚಿತ್ರದ ಆಡಿಯೋ ಹಕ್ಕು ಖರೀದಿಸಿದ್ದ ಅಶ್ವಿನಿ ಆಡಿಯೋ ಸಂಸ್ಥೆ ಈಗ ಮತ್ತೆ ಪ್ರೇಮ್ ಚಿತ್ರದ ಹಾಡುಗಳು ಕೊಂಡುಕೊಂಡಿದೆ.

ಅಂದ್ಹಾಗೆ, ಏಕ್ ಲವ್ ಯಾ ಸಿನಿಮಾ ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ, ರಕ್ಷಿತಾ ಫಿಲಂ ಫ್ಯಾಕ್ಟರಿ ಬ್ಯಾನರ್ ನಡಿಯಲ್ಲಿ ತಯಾರಾಗ್ತಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಸಂಗೀತ ಸಂಯೋಜನೆ ಒಳಗೊಂಡಿದೆ.

ಫೆಬ್ರವರಿ 8ಕ್ಕೆ ಮೋಷನ್ ಪೋಸ್ಟರ್ ಹಾಗೂ ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ 14ಕ್ಕೆ ಟೀಸರ್ ಬರಲಿದೆ.

More from Filmibeat

English summary
Prem directional 'Ek Love Ya' movie audio rights sold out for A2 music. the price is very high
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X