'ಏಕ್ ಲವ್ ಯಾ': ಪ್ರೇಮ್ ಬರೆದು ಹಾಡಿರುವ ಹಾಡು ನಾಲ್ಕು ಭಾಷೆಯಲ್ಲಿ ಬಿಡುಗಡೆ
ನಟ, ನಿರ್ದೇಶಕ ಪ್ರೇಮ್ ನಿರ್ದೇಶಿಸುತ್ತಿರುವ ಪ್ರೇಮಕತೆ 'ಏಕ್ ಲವ್‌ಯಾ' ಸಿನಿಮಾದ 'ಹೇಳು ಯಾಕೆ' ವಿಡಿಯೋ ಹಾಡು ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.
'ಹೇಳು ಯಾಕೆ' ಹಾಡು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಆಗಿದೆ. ಈ ಹಾಡಿಗೆ ಸಾಹಿತ್ಯ ಬರೆದು ಹಾಡಿರುವುದು ಸ್ವತಃ ಪ್ರೇಮ್. ಅವರಿಗೆ ಹಾಡಿನ ಸಾಹಿತ್ಯ ರಚನೆ ಮತ್ತು ಗಾಯನ ಹೊಸದೇನೂ ಅಲ್ಲ. ಕನ್ನಡದಲ್ಲಿ ಮಾತ್ರವೇ ಪ್ರೇಮ್ ಹಾಡಿದ್ದು ಉಳಿದ ಭಾಷೆಗಳಲ್ಲಿ ಆಯಾ ಭಾಷೆಯ ಸ್ಥಳೀಯ ಗಾಯಕರಿಂದ ಹಾಡು ಹಾಡಿಸಲಾಗಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶಿಸಿರುವ ಈ ಹಾಡಿಗೆ ವಿದೇಶದ ಆರ್ಕೆಸ್ಟ್ರಾನಲ್ಲಿ ಸಂಗೀತವನ್ನು ಲೈವ್ ರೆಕಾರ್ಡಿಂಗ್ ಮಾಡಲಾಗಿದೆ. ಹೀಗೆ ಲೈವ್ ರೆಕಾರ್ಡಿಂಗ್ ಮಾಡಿರುವ ವಿಡಿಯೋಗಳನ್ನು ಸಹ ಇಂದು ಬಿಡುಗಡೆ ಆಗಿರುವ ವಿಡಿಯೋ ಹಾಡಿನಲ್ಲಿ ಸೇರಿಸಲಾಗಿದೆ.

ಮುಗ್ಧ ಯುವ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಪ್ರೀತಿ ಏಕೆ ಹೀಗೆ, ಹುಡುಗೀರು ಯಾಕೆ ಹೀಗೆ ಎಂದು ಪ್ರಶ್ನೆ ಮಾಡುವ ಹಾಡು ಇದಾಗಿದೆ.
ಹಾಡಿನಲ್ಲಿ ಸಿನಿಮಾದ ನಾಯಕ ರಾಣ ಹಾಗೂ ನಾಯಕಿ ರೇಷ್ಮಾ ನಾನಯ್ಯ ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ರಚಿತಾ ರಾಮ್ ಸಹ ನಾಯಕಿಯಾಗಿ ನಟಿಸಿದ್ದಾರೆ. ಒಂದು ವಿಶೇಷ ಹಾಡಿನಲ್ಲಿ ರಕ್ಷಿತಾ ಪ್ರೇಮ್ ಸಹ ಹೆಜ್ಜೆ ಹಾಕಿದ್ದಾರೆ. ರಕ್ಷಿತಾ ಅವರೇ ಸಿನಿಮಾದ ನಿರ್ಮಾಪಕರು ಸಹ.
Recommended Video
ಫೆಬ್ರವರಿ 14 ರಂದು ಇದೇ ಸಿನಿಮಾದ 'ಯಾರೇ ಯಾರೇ' ಹಾಡು ಬಿಡುಗಡೆ ಆಗಿತ್ತು. ಆ ಹಾಡನ್ನು ಅರ್ಮಾನ್ ಮಲ್ಲಿಕ್ ಹಾಡಿದ್ದರು. ಆ ಹಾಡಿಗೂ ಪ್ರೇಮ್ ಅವರದ್ದೇ ಸಾಹಿತ್ಯ.


Click it and Unblock the Notifications











