'ಏಕ್ ಲವ್ ಯಾ'ದಲ್ಲಿ ರಾಣಾ ಜೊತೆ ರಚಿತಾ ಲಿಪ್ ಕಿಸ್

Recommended Video

ರಿಲೀಸ್ ಆಯ್ತು Ek Love Ya ಟೀಸರ್..! ರಚಿತಾ ಫುಲ್ ಹಾಟ್ | Rachita Ram | Prem's | Eka Love ya | Teaser

ಕಿಸ್ಸಿಂಗ್ ದೃಶ್ಯಗಳು ಕನ್ನಡ ಸಿನಿಮಾಗಳಲ್ಲಿ ಕಾಮನ್ ಆಗಿ ನಡೆಯುತ್ತದೆ. ಇದೀಗ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಲಿಪ್ ಕಿಸ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ಹೋಮ್ಲಿ ಗರ್ಲ್ ಪಾತ್ರ ಮಾಡಿಕೊಂಡು ಬರುತ್ತಿದ್ದ ರಚಿತಾ ರಾಮ್ ನಂತರ ಗ್ಲಾಮರ್ ದೃಶ್ಯಗಳಲ್ಲಿ ನಟಿಸಲು ಶುರು ಮಾಡಿದರು. ಪಾತ್ರಗಳಲ್ಲಿ ಬದಲಾವಣೆ ತಂದುಕೊಂಡರು. ಕಳೆದ ವರ್ಷ ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾದಲ್ಲಿ ರಚಿತಾ ಹಾಟ್ ದೃಶ್ಯಗಳಲ್ಲಿ ನಟಿಸಿದ್ದರು. ನಂತರ ಈ ಹಾಡು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

'ಐ ಲವ್ ಯೂ' ನಂತರ ಇದೀಗ ಮತ್ತೊಂದು ಸಿನಿಮಾದಲ್ಲಿ ರಚಿತಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿರುವ ಪಾತ್ರದಲ್ಲಿ ಬುಲ್ ಬುಲ್ ಬೆಡಗಿ ಮಿಂಚಿದ್ದಾರೆ.

ರಚಿತಾ ರಾಮ್ ಲಿಪ್ ಕಿಸ್

ರಚಿತಾ ರಾಮ್ ಲಿಪ್ ಕಿಸ್

ನಟಿ ರಚಿತಾ ರಾಮ್ ಲಿಪ್ ಕಿಸ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. 'ಏಕ್ ಲವ್ ಯಾ' ಸಿನಿಮಾದ ಒಂದು ದೃಶ್ಯದಲ್ಲಿ ರಚಿತಾ ಲಿಪ್ ಕಿಸ್ ಮಾಡಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಹಾಗೂ ರಚಿತಾ ನಡುವೆ ಈ ದೃಶ್ಯ ನಡೆಯುತ್ತದೆ. ಚಿತ್ರದ ಈ ಸೀನ್ ದೊಡ್ಡ ಸುದ್ದಿ ಮಾಡುತ್ತಿದೆ.

'ಏಕ್ ಲವ್ ಯಾ' ಟೀಸರ್

'ಏಕ್ ಲವ್ ಯಾ' ಟೀಸರ್

'ಏಕ್ ಲವ್ ಯಾ' ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ಪ್ರೇಮಿಗಳ ದಿನದ ವಿಶೇಷವಾಗಿ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಟೀಸರ್ ತುಂಬ ಚೆನ್ನಾಗಿದೆ. ಅನೇಕ ದೃಶ್ಯಗಳು ಗಮನ ಸೆಳೆಯುತ್ತದೆ. ರಾಣಾ ಆಕ್ಷನ್ ದೃಶ್ಯಗಳು ಚೆನ್ನಾಗಿದೆ. ಟೀಸರ್ ಕೊನೆಯಲ್ಲಿ ರಚಿತಾ ರಾಮ್ ಲಿಪಿ ಕಿಸ್ ದೃಶ್ಯವಿದೆ.

ಬೋಲ್ಡ್ ಆದ ರಚಿತಾ ರಾಮ್

ಬೋಲ್ಡ್ ಆದ ರಚಿತಾ ರಾಮ್

ಟೀಸರ್ ನೋಡುತ್ತಿದ್ದರೆ, ನಟಿ ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಸಿಗರೇಟ್ ಸೇದುತ್ತಾ ಬಿಂದಾಸ್ ಆಗಿ ನಿಂತ ರಚಿತಾ ರಾಮ್ ಫೋಟೋ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಟೀಸರ್ ಸಹ ರಚಿತಾ ಸಿಗರೇಟ್ ಸೇದುವ ದೃಶ್ಯದ ಮೂಲಕ ಶುರು ಆಗುತ್ತದೆ. ಅನೇಕ ದೃಶ್ಯಗಳಲ್ಲಿ ಅದು ಕಾಣುತ್ತದೆ.

ಭರವಸೆ ಮೂಡಿಸಿದ ಪ್ರೇಮ್

ಭರವಸೆ ಮೂಡಿಸಿದ ಪ್ರೇಮ್

'ಏಕ್ ಲವ್ ಯಾ' ಟೀಸರ್ ಒಂದು ಭರವಸೆ ಮೂಡಿಸಿದೆ. ಪ್ರೇಮ್ ಮತ್ತೊಂದು ಲವ್ ಸ್ಟೋರಿ ಮೂಲಕ ಹಿಟ್ ನೀಡುವ ನಂಬಿಕೆ ಹುಟ್ಟಿಸಿದ್ದಾರೆ. ರಚಿತಾ ಹಾಗೂ ರೇಷ್ಮಾ ಸಿನಿಮಾದ ನಾಯಕಿಯರಾಗಿದ್ದಾರೆ. ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚೆನ್ನಾಗಿದೆ. ಸಿನಿಮಾದ ಬಿಡುಗಡೆ ದಿನಾಂಕ ಮುಂದಿನ ದಿನದಲ್ಲಿ ಘೋಷಣೆ ಆಗಲಿದೆ.

More from Filmibeat

English summary
Actress Rachitha Ram and Raana's 'Ek Love Ya' kannada movie teaser released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X