'ಎಕ್ಕ' ಸೇರಿ ಜುಲೈನಲ್ಲಿ ತೆರೆಗೆ ಬರ್ತಿರೋ ಕನ್ನಡ ಚಿತ್ರಗಳ ಪಟ್ಟಿ

ಕಳೆದ 6 ತಿಂಗಳಲ್ಲಿ ಕನ್ನಡದ ಯಾವುದೇ ಸಿನಿಮಾ ದೊಡ್ಡದಾಗಿ ಗೆದ್ದಿಲ್ಲ. 120ಕ್ಕೂ ಹೆಚ್ಚು ಸಿನಿಮಾಗಳು ಈ ವರ್ಷ ತೆರೆಗೆ ಬಂದಿವೆ. ಯಾವುದೇ ಸಿನಿಮಾ ಗಳಿಕೆ 10 ಕೋಟಿ ರೂ. ದಾಟಲಿಲ್ಲ. ಆದರೆ ಈ ತಿಂಗಳು 'ಎಕ್ಕ' ಸಿನಿಮಾ ಆ ಬರ ನೀಗುವ ಸುಳಿವು ಸಿಕ್ಕಿದೆ.

ಈ ವರ್ಷ ತೆರೆಗೆ ಬರುತ್ತಿರುವ ಮೊದಲ ದೊಡ್ಡ ಕನ್ನಡ ಸಿನಿಮಾ ಇದು. ಯುವರಾಜ್‌ಕುಮಾರ್ ನಟನೆಯ 2ನೇ ಸಿನಿಮಾ ಇದಾಗಿದ್ದು ಕುತೂಹಲ ಮೂಡಿದೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ. ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

Ekka Sparks New Hopes as Kannada Cinema Gears Up for a Busy July

ಈ ವಾರ ಒಂದಲ್ಲ ಎರಡಲ್ಲ 4 ಸಿನಿಮಾಗಳು ರಿಲೀಸ್ ಆಗುತ್ತಿದೆ. ಅದರಲ್ಲಿ 'ರಂಗಿತರಂಗ' ಸಿನಿಮಾ ಮರುಬಿಡುಗಡೆ ಆಗುತ್ತಿರುವುದು ವಿಶೇಷ. ಇನ್ನುಳಿದಂತೆ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿದೆ. ಜೊತೆಗೆ ಪರಭಾಷೆಯ ಕೆಲ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ತೆರೆಗಪ್ಪಳಿಸಲಿದೆ.

ಜುಲೈ ಮೊದಲ ವಾರ ಅಂದರೆ ಜುಲೈ 4ರಂದು 'ರಂಗಿತರಂಗ' ಜೊತೆಗೆ 'ಜಂಗಲ್ ಮಂಗಲ್', 'ಕಪಟ ನಾಟಕ ಸೂತ್ರಧಾರಿ', 'ಹೆಬ್ಬುಲಿ ಕಟ್' ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಮೂರು ಸಿನಿಮಾಗಳು ಹೊಸಬರ ವಿಭಿನ್ನ ಪ್ರಯತ್ನಗಳೇ ಆಗಿದೆ.

ಮುಂದಿನ ವಾರ ಜುಲೈ 11ರಂದು ಮಂಸೋರೆ ನಿರ್ದೇಶನದ 'ದೂರ ತೀರಯಾನ' ಸಿನಿಮಾ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದೆ. ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಶ್ರುತಿ ಹರಿಹರನ್ ಕೂಡ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ದೇವರಾಜ್. ಆರ್ ನಿರ್ಮಾಣದ ಚಿತ್ರಕ್ಕೆ ರೊನಾಟ ಬಕ್ಕೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Ekka Sparks New Hopes as Kannada Cinema Gears Up for a Busy July

ಜುಲೈ 18ಕ್ಕೆ ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ತೆರೆಗಪ್ಪಳಿಸಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ಈ ಸಿನಿಮಾ ನಿರ್ಮಾಣ ಮಾಡಿರುವುದು ವಿಶೇಷ. ಚಿತ್ರದಲ್ಲಿ ಸಂಜನಾ ಆನಂದ್ ಹಾಗೂ ಸಂಪದಾ ನಾಯಕಿಯರಾಗಿದ್ದಾರೆ. ಈಗಾಗಲೇ 'ಬ್ಯಾಂಗಲ್ ಬಂಗಾರಿ' ಸಾಂಗ್ ಸೂಪರ್ ಹಿಟ್ ಆಗಿದೆ. ಚರಣ್ ರಾಜ್ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಆಗುವ ಸುಳಿವು ಸಿಗುತ್ತಿದೆ.

'ಎಕ್ಕ' ಸಿನಿಮಾ ಜೊತೆಗೆ ಕಿರೀಟಿ ಹಾಗೂ ಶ್ರೀಲೀಲಾ ನಟನೆಯ 'ಜ್ಯೂನಿಯರ್' ಸಿನಿಮಾ ತೆರೆಗೆ ಬರ್ತಿದೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ.

ಜುಲೈ 25ರಂದು ರಾಜ್‌ ಬಿ. ಶೆಟ್ಟಿ ನಿರ್ಮಾಣದ 'ಸು ಫ್ರಮ್‌ ಸೋ' ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಜೆಪಿ ತುಮಿನಾಡು ನಿರ್ದೇಶಿಸಿ ನಟಿಸುತ್ತಿರುವ ಸಿನಿಮಾ ಇದು. ಜುಲೈ 25ರಂದು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಆನಿಮೇಷನ್ ಸಿನಿಮಾ 'ಮಹಾವೀರ್ ನರಸಿಂಹ' ಕೂಡ ತೆರೆಗೆ ಬರಲಿದೆ. ಕನ್ನಡ ಚಿತ್ರರಂಗದಲ್ಲಿ ಇದು ಹೊಸ ಪ್ರಯತ್ನ ಆಗಿದ್ದು ಹಲವು ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬರಲಿದೆ. ಈ ಸರಣಿಯನ್ನು ಮುಂದುವರೆಸಿ 7 ಸಿನಿಮಾಗಳ ನಿರ್ಮಾಣಕ್ಕೆ ಹೊಂಬಾಳೆ ಫಿಲ್ಮ್ಸ್ ಸಜ್ಜಾಗಿದೆ.

ಈ ಎಲ್ಲಾ ಕನ್ನಡ ಸಿನಿಮಾಗಳ ಜೊತೆಗೆ ಒಂದಷ್ಟು ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಈ ತಿಂಗಳು ಬಿಡುಗಡೆ ಆಗುತ್ತಿದೆ. ತಮಿಳಿನ '3BHK' ಸಿನಿಮಾ ಈ ವಾರ ಕನ್ನಡದಲ್ಲೇ ನೋಡಬಹುದು. ಹಾಲಿವುಡ್ 'ಸೂಪರ್‌ಮ್ಯಾನ್' ಸಿನಿಮಾ ಜುಲೈ 11ಕ್ಕೆ ಕರ್ನಾಟಕದಲ್ಲಿ ಕೂಡ ಬಿಡುಗಡೆ ಆಗ್ತಿದೆ. ಜುಲೈ 24ಕ್ಕೆ ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಸಿನಿಮಾ ದೊಡ್ಡದಾಗಿ ರಿಲೀಸ್ ಆಗಲಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ವೀಕ್ಷಸಬಹುದು.

More from Filmibeat

English summary
Four Kannada Films to Hit Screens on July 4 — ‘Ekka’ to Follow Later This Month
Read more about: sandalwood ekka kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X