ಆಸ್ಕರ್ ಪ್ರಶಸ್ತಿ ಕ್ಯೂನಲ್ಲಿ ಅಮಿತಾಭ್ ಬಚ್ಚನ್ ಚಿತ್ರ ಏಕಲವ್ಯ
ಮುಂಬೈ, ಸೆಪ್ಟೆಂಬರ್ 25 : ಅಮಿತಾಭ್ ಬಚ್ಚನ್, ಸಂಜಯ್‌ದತ್ ಮತ್ತು ವಿದ್ಯಾಬಾಲನ್ ತಾರಾಗಣದ 'ಏಕಲವ್ಯ" ಹಿಂದಿ ಚಿತ್ರ, ಈ ಸಾಲಿನ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗಕ್ಕೆ ಪ್ರವೇಶ ಪಡಿದಿದೆ.
'ಚಕ್‌ದೇ ಇಂಡಿಯಾ", 'ಗುರು", 'ಗಾಂಧಿ-ಮೈ ಫಾದರ್" ಚಿತ್ರಗಳು ಆಸ್ಕರ್‍ನ ವಿದೇಶಿ ಚಿತ್ರ ವಿಭಾಗಕ್ಕೆ ಪ್ರವೇಶಿಸಲು ತೀವ್ರ ಪೈಪೋಟಿ ಒಡ್ಡಿದ್ದ ಇತರ ಚಿತ್ರಗಳು. ಕೊನೆಗೆ 'ಏಕಲವ್ಯ" ಮತ್ತು 'ಧರ್ಮ" ಚಿತ್ರಗಳ ಮಧ್ಯೆ ಚರ್ಚೆಯಾಗಿ ತೀರ್ಪುಗಾರರು 'ಏಕಲವ್ಯ" ಚಿತ್ರವನ್ನು ಪ್ರಶಸ್ತಿಗೆ ಸೂಚಿಸಿದರೆಂದು ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕ್ಷರಾದ ವಿನೋದ್ ಪಾಂಡೆ ತಿಳಿಸಿದ್ದಾರೆ.
ಮೂರನೆಯ ಬಾರಿ ವಿದುವಿನೋದ್ ಛೋಪ್ರ ಅವರ ಚಿತ್ರ, ಆಸ್ಕರ್ ಪ್ರಶಸ್ತಿಯ ಪೈಪೋಟಿಗೆ ನಿಂತಿದೆ. 1980ರಲ್ಲಿ 'ಆನ್ ಎನ್‌ಕೌಂಟರ್ ವಿತ್ ಫೇಸಸ್" ಮತ್ತು 1989ರಲ್ಲಿ 'ಪರಿಂದಾ" ಅವರ ಆಯ್ಕೆಯಾಗಿದ್ದ ಇತರ ಎರಡು ಚಿತ್ರಗಳು.
ಈ ಚಿತ್ರವನ್ನು ಆಯ್ಕೆ ಮಾಡಿದ ಮುಖ್ಯಸ್ಥರ ನಿರ್ಧಾರವನ್ನು ತೀರ್ಪುಗಾರರು ಪ್ರಶ್ನಿಸಿದ್ದರಿಂದ ಚಿತ್ರದ ಆಯ್ಕೆಯ ಬಗ್ಗೆ ವಿವಾದವೂ ಸುತ್ತಿಕೊಂಡಿದೆ.
(ಯುಎನ್‌ಐ)
;

Click it and Unblock the Notifications











