'ಮೋದಿ' ಚಿತ್ರ ಬಿಡುಗಡೆಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ
ಪಿಎಂ ನರೇಂದ್ರ ಮೋದಿ ಸಿನಿಮಾ ಈ ವಾರ ದೇಶಾದ್ಯಂತ ಬಿಡುಗಡೆಯಾಗಬೇಕಿತ್ತು. ಆದ್ರೀಗ, ಕೇಂದ್ರ ಚುನಾವಣೆ ಆಯೋಗ ಮೋದಿ ಚಿತ್ರದ ರಿಲೀಸ್ ಗೆ ಬ್ರೇಕ್ ಹಾಕಿದ್ದು, ಸಿನಿಮಾ ಬಿಡುಗಡೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ. ಹೀಗಾಗಿ, ಮೋದಿ ಬಯೋಪಿಕ್ ಏಪ್ರಿಲ್ 12ಕ್ಕೆ ರಿಲೀಸ್ ಆಗಲ್ಲ.
ದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಬಯೋಪಿಕ್ ಸಿನಿಮಾ ರಿಲೀಸ್ ಆಗುವುದು ಸರಿಯಲ್ಲ. ರಾಜಕಾರಣಿಗಳ ಬಯೋಪಿಕ್ ಸಿನಿಮಾ ಅಂತೂ ಬಿಡುಗಡೆಯಾಗುವಂತಿಲ್ಲ ಎಂದು ಚುನಾವಣೆ ಆಯೋಗ ತಿಳಿಸಿದೆ.
ವಿವೇಕ್ ಒಬೆರಾಯ್ ಪಿಎಂ ನರೇಂದ್ರ ಮೋದಿ ಪಾತ್ರದಲ್ಲಿ ನಟಿಸಿದ್ದು, ಇದು ಮೋದಿ ಅವರ ಜೀವನಾಧರಿತ ಸಿನಿಮಾವಾಗಿತ್ತು. ಈ ಸಿನಿಮಾ ಈಗ ರಿಲೀಸ್ ಆದ್ರೆ, ಮತದಾರರ ಮೇಲೆ ಪ್ರಭಾವ ಬೀರುತ್ತೆ ಎಂಬ ಕಾರಣದಿಂದ ಚಿತ್ರ ಬಿಡುಗಡೆಗೆ ಚುನಾವಣೆ ಆಯೋಗ ತಡೆ ನೀಡಿದೆ.

ಇದಕ್ಕೂ ಮುಂಚೆ ಸುಪ್ರೀಂ ಕೋರ್ಟ್ ಸಿನಿಮಾ ರಿಲೀಸ್ ಗೆ ಅನುಮತಿ ನೀಡಿತ್ತು. ಮೋದಿ ಬಯೋಪಿಕ್ ಸಿನಿಮಾವನ್ನ ಬಿಡುಗಡೆ ಮಾಡಬಾರದು ಎಂದು ಕೋರಿ ವಕೀಲರು ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಚಿತ್ರಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದಿತ್ತು. ಈ ಬಗ್ಗೆ ಚುನಾವಣೆ ಆಯೋಗ ಬೇಕಾದರೇ ನಿರ್ಧರ ತೆಗೆದುಕೊಳ್ಳಬಹುದು ಎಂಬ ಸಲಹೆ ಕೂಡ ನೀಡಿತ್ತು.
ಅದರಂತೆ ಕೇಂದ್ರ ಚುನಾವಣೆ ಆಯೋಗ ಈಗ ಮೋದಿ ಚಿತ್ರಕ್ಕೆ ಬ್ರೇಕ್ ಹಾಕಿದೆ. ಲೋಕಸಭೆ ಚುನಾವಣೆ ಮುಗಿಯವರೆಗೂ ಮೋದಿ ಬಯೋಪಿಕ್ ಸಿನಿಮಾ ರಿಲೀಸ್ ಆಗಲ್ಲ.


Click it and Unblock the Notifications











