twitter
    For Quick Alerts
    ALLOW NOTIFICATIONS  
    For Daily Alerts

    ಬೆಂಕಿ ಹಚ್ಚಿ ಆನೆ ಸಾವು: ಈ ಪೈಶಾಚಿಕ ಕೃತ್ಯ ನಡೆಸಿದ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು- ಸುಮಲತಾ

    |

    ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳ ಮೇಲೆ ಮಾನವರ ಕ್ರೌರ್ಯ ಹೆಚ್ಚಾಗುತ್ತಿದೆ. ಅದರಲ್ಲೂ ಆನೆಗಳ ಮೇಲೆ ಕ್ರೂರವಾಗಿ ದಾಳಿ ಮಾಡಿ ಕೊಲ್ಲಲಾಗುತ್ತಿದೆ. ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದೆ.

    ಇದೀಗ, ತಮಿಳುನಾಡಿನಲ್ಲಿ ಆಹಾರ ಹುಡುಕುತ್ತಾ ರೆಸಾರ್ಟ್ ಬಳಿ ಬಂದ ಆನೆಯನ್ನು ಬೆಂಕಿ ಚಿತ್ರ ಹಿಂಸೆ ನೀಡಿ ಸಾಯಿಸಿರುವ ಘಟನೆ ವರದಿಯಾಗಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ರಾತ್ರಿ ಸಮಯ ದಾರಿ ತಪ್ಪಿ ಆಹಾರ ಹುಡುಕುತ್ತಾ ಖಾಸಗಿ ರೆಸಾರ್ಟ್ ಬಳಿ ಬಂದ ಆನೆ ಮೇಲೆ ಸುಡುವ ಟೈಯರ್ ಎಸೆದಿದ್ದಾರೆ.

    ಬೆಂಕಿ ಹೊತ್ತಿಕೊಂಡಿದ್ದ ಟೈಯರ್ ಆನೆ ಮೇಲೆ ಬಿದ್ದ ಪರಿಣಾಮ ಆ ಆನೆ ತೀವ್ರವಾಗಿ ಗಾಯಗೊಂಡಿದೆ. ಕಿವಿಯಲ್ಲಿ ರಕ್ತಸ್ರಾವವಾಗಿದೆ. ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯಾಧಿಕಾರಿಗಳು ಪ್ರಯತ್ನಿಸಿರಾದರೂ ಆನೆ ಬದುಕಿ ಉಳಿಯಲಿಲ್ಲ.

    ಭಯಾನಕ ವಿಡಿಯೋ: ಸುಡುವ ಟೈರ್ ಎಸೆದ ತಮಿಳುನಾಡು ರೆಸಾರ್ಟ್ ಕಾರ್ಮಿಕರು: ಆನೆ ಸಾವು

    elephant-s-death-by-burning-tyre-sumalatha-express-her-anger-over-the-incident

    ಈ ಘಟನೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ. ಆನೆಯ ಸಾವಿಗೆ ಕಾರಣರಾದವರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಈ ಘಟನೆ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಟ್ವಿಟ್ಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

    ''ಅಮಾಯಕ ಗರ್ಭಿಣಿ ಆನೆಯ ಹತ್ಯೆಯ ನಂತರ ಮತ್ತೊಂದು ಹೃದಯ ಹಿಂಡುವ ಕೃತ್ಯ ತಮಿಳು ನಾಡಿನ ಮಾಸಿನಗುಡಿಯಲ್ಲಿ ನಡೆದಿದೆ. ಮುಗ್ಧ ಆನೆಯ ಕಿವಿಯನ್ನು ಸುಟ್ಟು ಹಾಕಿದ ಕಾರಣ, ನೋವು ತಾಳಲಾರದೆ ಗಜರಾಜ ಪ್ರಾಣ ಕಳೆದುಕೊಂಡಿದ್ದಾನೆ. ಈ ಪೈಶಾಚಿಕ ಕೃತ್ಯ ನಡೆಸಿದ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು'' -ಎಂದು ಆಗ್ರಹಿಸಿದ್ದಾರೆ.

    ಪಟಾಕಿ ತುಂಬಿದ ಅನಾನಸ್ ಹಣ್ಣು ನೀಡಿ ಗರ್ಭಿಣಿ ಆನೆಯ ಹತ್ಯೆ: ಅಮಾನುಷ ಕೃತ್ಯಕ್ಕೆ ಸಿನಿತಾರೆಯರ ಆಕ್ರೋಶಪಟಾಕಿ ತುಂಬಿದ ಅನಾನಸ್ ಹಣ್ಣು ನೀಡಿ ಗರ್ಭಿಣಿ ಆನೆಯ ಹತ್ಯೆ: ಅಮಾನುಷ ಕೃತ್ಯಕ್ಕೆ ಸಿನಿತಾರೆಯರ ಆಕ್ರೋಶ

    Recommended Video

    ಅಭಿಮಾನಿ ಪ್ರಶ್ನೆಗೆ ಅಚ್ಚರಿಯ ಉತ್ತರ ಕೊಟ್ಟ Jaggesh | Filmibeat Kannada

    elephant-s-death-by-burning-tyre-sumalatha-express-her-anger-over-the-incident

    ಅಂದ್ಹಾಗೆ, ಇದಕ್ಕೂ ಮುಂಚೆ ಕೇರಳದಲ್ಲಿ ಗರ್ಭಿಣಿ ಆನೆಯೊಂದನ್ನು ಬಹಳ ಕ್ರೂರವಾಗಿ ಕೊಲ್ಲಲಾಗಿತ್ತು. ಕಳೆದ ಜೂನ್ ತಿಂಗಳಲ್ಲಿ ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಅನಾನಸ್ ಹಣ್ಣಿನಲ್ಲಿ ಸಿಡಿಮದ್ದು ಇಟ್ಟು ತಿನ್ನಲು ನೀಡಿದ್ದರು. ಆನೆ ಅನಾನಸ್ ತಿಂದು ಸಾವನ್ನಪ್ಪಿತ್ತು.

    English summary
    Elephant's death by burning tyre: Mandya Mp and actress Sumalatha took to Twitter to express her anger over the incident.
    Saturday, January 23, 2021, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X