ಮತ್ತೆ ಬಿಗ್ ಸ್ಕ್ರೀನ್ ಗೆ ಬಂದ ಸೃಜ : ಹರಿಪ್ರಿಯಾ ಜೊತೆ ಮಜಾ
Recommended Video

ಮತ್ತೆ ಬಿಗ್ ಸ್ಕ್ರೀನ್ ಗೆ ಬಂದ ಸೃಜ | FILMIBEAT KANNADA
ನಟ ಸೃಜನ್ ಲೋಕೇಶ್ ದೊಡ್ಡ ಪರದೆಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಮಿಂಚಿದವರು. ಅದೇ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿದೆ. ಆಗಾಗ ಸಿನಿಮಾ ಕೂಡ ಮಾಡುತ್ತಿದ್ದ ಅವರು ಇದೀಗ ಮತ್ತೆ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಸೃಜನ್ ಲೋಕೇಶ್ ತಮ್ಮ ಬ್ಯಾನರ್ ನಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ನಾಯಕರಾಗಿದ್ದು, 'ಎಲ್ಲಿದ್ದೆ ಇಲ್ಲಿ ತನಕ' ಎಂಬ ಟೈಟಲ್ ನಲ್ಲಿ ಸಿನಿಮಾ ಲಾಂಚ್ ಆಗಿದೆ.
'ಎಲ್ಲಿದ್ದೆ ಇಲ್ಲಿ ತನಕ' ಸಿನಿಮಾದ ಮುಹೂರ್ತ ನಿನ್ನೆ ನೆರವೇರಿದೆ. ನಟ ರವಿಚಂದ್ರನ್, ದರ್ಶನ್, ತಾರಾ ಹಾಗೂ ಪ್ರಿಯಾಂಕ ಉಪೇಂದ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿನಿಮಾಗೆ ಶುಭಾಶಯ ತಿಳಿಸಿದರು.

ಸೃಜನ್ ಅವರ ಈ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಹರಿಪ್ರಿಯಾ ಖಾತೆಗೆ ಮತ್ತೊಂದು ಸಿನಿಮಾ ಸೇರಿದೆ.

ಉಳಿದಂತೆ, ತೇಜಸ್ವಿ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.
More from Filmibeat
English summary
Actor Srujan Lokesh and Haripriya's 'Ellidde Illeethanka' kannada movie launched.


Click it and Unblock the Notifications











