For Quick Alerts
  ALLOW NOTIFICATIONS  
  For Daily Alerts

  'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ

  |

  ಕಾಶೀನಾಥ್ ಪುತ್ರ ಅಭಿಮನ್ಯು ನಟನೆಯ 'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾದ ಮುಹೂರ್ತ ಕಾರ್ಯಕ್ರಮ ನಿನ್ನೆ (ಡಿಸೆಂಬರ್ 14) ನಡೆದಿದೆ. ಪದ್ಮನಾಭನಗರ ಸಿನಿಮಾದ ಸಾಯಿ ಬಾಬಾ ದೇವಸ್ಥಾನದಲ್ಲಿ ಸಿನಿಮಾ ಶುಭರಂಭವಾಗಿದೆ.

  ಇಡೀ ಚಿತ್ರತಂಡ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರು. ದೇವರ ಸನ್ನಿಧಿಯಲ್ಲಿ ಮೊದಲ ಶಾಟ್ ಚಿತ್ರೀಕರಣ ಆಯಿತು.

  ಕಾರ್ಯಕ್ರಮದಲ್ಲಿ ನಾಯಕ, ನಾಯಕಿ, ನಿರ್ದೇಶಕ ಕಿರಣ್ ಸೂರ್ಯ, ನಿರ್ಮಾಪಕರಾದ ನಂದೀಶ್ ಗೌಡ ಮತ್ತು ಜಿತಿನ್ ಜಿ ಪಟೇಲ್ ಹಾಗೂ 'ಮಮ್ಮಿ', 'ದೇವಕಿ' ಸಿನಿಮಾಗಳ ನಿರ್ದೇಶಕ ಲೋಹಿತ್ ಹಾಜರಿದ್ದರು.

  ಡಿಸೆಂಬರ್ 26 ರಿಂದ 'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾದ ಚಿತ್ರೀಕರಣ ನಡೆಯಲಿದೆ. ಬೆಂಗಳೂರು, ಮೈಸೂರು, ಮಡಿಕೇರಿ ಭಾಗಗಳಲ್ಲಿ ಶೂಟಿಂಗ್ ಮಾಡುವ ಪ್ಲಾನ್ ಇದೆ. ಈಗಾಗಲೇ ಹಾಡಿನ ರೆಕಾರ್ಡಿಂಗ್ ಕೆಲಸಗಳು ಶುರು ಆಗಿವೆ. ಜನವರಿ ತಿಂಗಳಿನಲ್ಲಿ ಅಭಿಮನ್ಯು ಫಸ್ಟ್ ಲುಕ್ ಹೊರಬರಲಿದೆ. ಎಂದು ಕಿರಣ್ ತಿಳಿಸಿದ್ದಾರೆ.

  ಸುದರ್ಶನ ಆರ್ಟ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಅಭಿಮನ್ಯು ಜೋಡಿಯಾಗಿ ಸ್ಫೂರ್ತಿ ಉಡಿಮನೆ ಹಾಗೂ ವಿಜಯ ಶ್ರೀ ನಾಯಕಿಯರಾಗಿದ್ದಾರೆ. 7 ವರ್ಷಗಳ ನಂತರ ಕಾಶೀನಾಥ್ ಮಗ ಕಮ್ ಬ್ಯಾಕ್ ಮಾಡಿದ್ದಾರೆ.

  ಸಿನಿಮಾದ ಪೋಸ್ಟರ್ ಈಗಾಗಲೇ ಗಮನ ಸೆಳೆದಿದೆ. ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಚಿತ್ರರಂಗದ ಅನೇಕರು ಪೋಸ್ಟರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

  English summary
  Ellige Payana Yaavudo Daari kannada movie muhurtha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X