ಕನ್ನಡ ಹಾಡು ಹಾಡದ್ದಕ್ಕೆ ಪಾಪ್ ಗಾಯಕನನ್ನು ತಡೆದಿದ್ರಾ ಬೆಂಗಳೂರು ಪೊಲೀಸರು? ಅಸಲಿ ಸಂಗತಿ ಬಹಿರಂಗ

ಬ್ರಿಟೀಷ್ ಪಾಪ್ ಗಾಯಕ ಎಡ್ ಶೀರನ್ ಭಾನುವಾರ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಹಾಡಲು ಮುಂದಾಗಿದ್ದರು. ಈ ವೇಳೆ ಕಬ್ಬನ್ ಪಾರ್ಕ್ ಪೊಲೀಸರು ಹಾಡುವುದನ್ನು ತಡೆದಿದ್ದರು. ಅನುಮತಿ ಇಲ್ಲದೇ ರಸ್ತೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸುವಂತಿಲ್ಲ ಎಂದಿದ್ದರು. ಎಡ್ ಹಾಡುವುದು ನಿಲ್ಲಸದೇ ಇದ್ದಾಗ ಮೈಕ್ ವೈರ್ ಕಿತ್ತೆಸಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಾಪ್ ಗಾಯಕ ಪ್ರತಿಕ್ರಿಯಿಸಿದ್ದಾರೆ.

ವೀಕೆಂಡ್ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‌ ಸ್ಟ್ರೀಟ್ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಇಂತಹ ಸಮಯದಲ್ಲಿ ರಸ್ತೆ ಮಧ್ಯೆಯೇ ಸಂಗೀತ ಕಾರ್ಯಕ್ರಮ ನಡೆಸುವುದರಿಂದ ಜನ ಜಮಾಯಿಸಿ, ಸಂಚಾರ ದಟ್ಟನೆ ಉಂಟಾಗುತ್ತದೆ. ಅದೇ ಕಾರಣಕ್ಕೆ ಎಡ್ ಶೀರನ್ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಕೂಡ ಎಡ್ ತಮ್ಮ ತಂಡದ ಜೊತೆ ಹಾಡಲು ಬಂದಿದ್ದರು. ಹಾಗಾಗಿ ಪೊಲೀಸರು ಅದನ್ನು ನಿಲ್ಲಿಸಿದ್ದರು. 'ಶೇಪ್ ಆಫ್ ಯು' ಹಾಡನ್ನು ಎಡ್ ಹಾಡುತ್ತಿದ್ದರು.

English singer-songwriter Ed sheeran was stopped playing in bengaluru at church street

ಎಡ್ ಗಾಯನಕ್ಕೆ ಪೊಲೀಸರು ಅಡ್ಡಿ ಪಡಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿ ಚರ್ಚೆ ಹುಟ್ಟು ಹಾಕಿದೆ. ಭಾನುವಾರ(ಫೆಬ್ರವರಿ 8) ಸಂಜೆ ಬುಕ್ ಮೈ ಶೋ ಬಿಐಇಸಿ ಮಾದಾವರ ಮೈದಾನದಲ್ಲಿ ಎಡ್ ಸಂಗೀತ ಸಂಜೆ ಕಾರ್ಯಕ್ರಮ ನಿಗದಿಯಾಗಿತ್ತು. ಈ ಬಗ್ಗೆ ಜನರನ್ನು ಸೆಳೆಯಲು ಹೀಗೆ ಚರ್ಚೆ ಸ್ಟ್ರೀಟ್‌ನಲ್ಲಿ ಹಾಡು ಹಾಡುವ ಪ್ರಯತ್ನ ಮಾಡಲಾಗಿತ್ತು. ಚರ್ಚ್ ಸ್ಟ್ರೀಟ್‌ನಲ್ಲಿ ಹಾಡಲು ತಂಡದ ಸಂಜಯ್ ಸಿಂಗ್ ಎಂಬುವವರು ಕಬ್ಬನ್ ಪೊಲೀಸ್ ಠಾಣೆಯಲ್ಲಿ ಅನುಮತಿ ಕೇಳಿದ್ದರು. ಆದರೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಕನ್ನಡ ಹಾಡು ಹಾಡಲಿಲ್ಲ ಎಂದು ಚರ್ಚ್ ಸ್ಟ್ರೀಟ್‌ನಲ್ಲಿ ಎಡ್ ಗಾಯನಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಆದರೆ ಅನುಮತಿ ಇಲ್ಲದಿದ್ದರೂ ಎಡ್ ಹಾಡಿದ್ದಕ್ಕೆ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನುವುದು ಗೊತ್ತಾಗಿದೆ.

ಸದ್ಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕ ಎಡ್ ಶೀರನ್ ಘಟನೆ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾವು ಅಲ್ಲಿ ಹಾಡು ಹಾಡಲು ಅನುಮತಿ ಪಡೆದುಕೊಂಡಿದ್ದೆವು. ಆದರೆ ಅನಿರೀಕ್ಷಿತವಾಗಿ ಆ ರೀತಿ ಆಯಿತು" ಎಂದು ಬರೆದುಕೊಂಡಿದ್ದಾರೆ. ವೆಸ್ಟ್ ಯಾರ್ಕ್‌ಷೈರ್‌ನ ಹ್ಯಾಲಿಫ್ಯಾಕ್ಸ್‌ನಲ್ಲಿ ಜನಿಸಿದ ಎಡ್ವರ್ಡ್ ಕ್ರಿಸ್ಟೋಫರ್ ಶೀರನ್. ಸಫೊಲ್ಕ್‌ನ ಫ್ರಮ್ಲಿಂಗ್‌ಹ್ಯಾಮ್‌ನಲ್ಲಿ ಓದಿ ಬೆಳೆದರು. ತಮ್ಮ 11ನೇ ವಯಸ್ಸಿನಲ್ಲೇ ಹಾಡುಗಳನ್ನು ಬರೆಯಲು, ಹಾಡಲು ಆರಂಭಿಸಿದ್ದರು.

More from Filmibeat

English summary
Ed Sheeran's street performance on Church Street in Bengaluru was abruptly halted by police on Sunday
Read more about: hollywood song music
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X