Don't Miss!
- Sports
ಕ್ರಿಸ್ ಗೇಲ್ಗೆ ಭಾರತದ ಮೇಲಿರುವ ಪ್ರೀತಿಗೆ ಉದಾಹರಣೆ ಕೊಟ್ಟ ಶಮಿ
- Automobiles
ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು
- News
Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?
- Finance
Alert: ವಾಹನಗಳ ಖರೀದಿ ಮತ್ತಷ್ಟು ದುಬಾರಿ, 2ನೇ ತ್ರೈಮಾಸಿಕದಲ್ಲಿ ಬೆಲೆ ಹೆಚ್ಚಳ ಸಾಧ್ಯತೆ
- Education
Bangalore University Exams 2021: ಸ್ನಾತಕ, ಸ್ನಾತಕೋತ್ತರ ಮತ್ತು ಇಂಜಿನಿಯರಿಂಗ್ ಪದವಿ ಪರೀಕ್ಷೆಗಳು ಮುಂದೂಡಿಕೆ
- Lifestyle
ರಾಮನವಮಿ 2021: ರಾಮನ ಕುರಿತಾದ ಅಚ್ಚರಿಯ ಸಂಗತಿಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪರಭಾಷೆ ಪ್ರೇಕ್ಷಕರಿಗಾಗಿ 'ಟಗರು' ತಂಡದಿಂದ ಮಾಸ್ಟರ್ ಪ್ಲಾನ್.!
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಧನಂಜಯ್, ವಸಿಷ್ಠ ಸಿಂಹ ಅಭಿನಯದ 'ಟಗರು' ಸಿನಿಮಾ ನಾಲ್ಕನೇ ವಾರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇನ್ನು ಚಿತ್ರಮಂದಿರಗಳನ್ನ ಹೆಚ್ಚಿಸಿಕೊಳ್ಳುತ್ತಿರುವ ಈ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಈ ಮಧ್ಯೆ 'ಟಗರು' ಚಿತ್ರಕ್ಕೆ ಪರಭಾಷೆಯಿಂದ ಬೇಡಿಕೆ ಬರುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ, ಹೊರರಾಜ್ಯಗಳಲ್ಲೂ ಶಿವಣ್ಣನ ಸಿನಿಮಾ ಅಬ್ಬರಿಸುತ್ತಿದೆ. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ತಮಿಳು, ತೆಲುಗು ಆಡಿಯೆನ್ಸ್ ಗಳು ಕೂಡ ಟಗರು ಚಿತ್ರವನ್ನ ಚಿತ್ರಮಂದಿರಕ್ಕೆ ಬಂದಿ ನೋಡುತ್ತಿದ್ದಾರೆ.
ಕರುನಾಡಿನಲ್ಲಿ ಮಾತ್ರವಲ್ಲ ವಿದೇಶದಲ್ಲಿ ಅಬ್ಬರಿಸಿದೆ ಶಿವಣ್ಣನ ಸಿನಿಮಾಗಳು
ಈ ನಡುವೆ ಕನ್ನಡ ಭಾಷೆ ಗೊತ್ತಿಲ್ಲದವರು ಕೂಡ 'ಟಗರು' ಸಿನಿಮಾ ನೋಡುತ್ತಿದ್ದಾರೆ. ಇದು ಸಿನಿಮಾಗೆ ಮತ್ತು ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೆಲುವು ಎನ್ನಬಹುದು. ಹೀಗಾಗಿ, ಈ ಪರಭಾಷೆ ಪ್ರೇಕ್ಷಕರಿಗಾಗಿ ಟಗರು ಚಿತ್ರತಂಡ ಹೊಸ ಆಲೋಚನೆ ಮಾಡಿದೆ. ಅವರಿಗೆ ಅನೂಕೂಲವಾಗಲು ಹೊಸ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಏನದು.? ಮುಂದೆ ಓದಿ.....

ಇಂಗ್ಲೀಷ್ ಸಬ್ ಟೈಟಲ್
'ಟಗರು' ಸಿನಿಮಾದ ಹವಾ ಇನ್ನು ಹೆಚ್ಚಾಗುತ್ತಿರುವ ಹಿನ್ನಲೆ ಚಿತ್ರಕ್ಕೆ ಇಂಗ್ಲೀಷ್ ಸಬ್ ಟೈಟಲ್ ಸೇರಿಸಲಾಗಿದೆ. ಹೆಚ್ಚಿನ ಪರಭಾಷಿಗರು ಕನ್ನಡ ಸಿನಿಮಾ ನೋಡುತ್ತಿದ್ದು, ಅವರಿಗೆ ಅರ್ಥವಾಗಲಿ ಎಂಬ ಕಾರಣಕ್ಕೆ ಇಂಗ್ಲೀಷ್ ಉಪಶೀರ್ಷಿಕೆಯನ್ನಾಗಿ ಅಳವಡಿಸಲಾಗುತ್ತಿದೆ. ಈ ಶುಕ್ರವಾದಿಂದಲೇ ಸಬ್ ಟೈಟಲ್ ಹಾಕಲಾಗುವುದು. ಇನ್ಮುಂದೆ ಭಾಷೆ ಗೊತ್ತಿಲ್ಲದವರು ಕೂಡ ಟಗರು ನೋಡಬಹುದು.

ತಮಿಳುನಾಡಿನಲ್ಲಿ 'ಟಗರು' ಕ್ರೇಜ್
ಟಗರು ಸಿನಿಮಾವನ್ನ ನೋಡಲು ಬೇಡಿಕೆ ಹೆಚ್ಚಿದೆ. ತಮಿಳುನಾಡಿನ ಹೊಸೂರಿನ ರಾಘವೇಂದ್ರ ಚಿತ್ರ ಮಂದಿರದಲ್ಲಿ "ಟಗರು" ಚಿತ್ರ ಪ್ರದರ್ಶನವಾಗುತ್ತಿದ್ದು, ಅಲ್ಲಿಯೂ "HOUSEFUL" ಆಗಿದೆ. ಈ ಮೂಲಕ ತಮಿಳುನಾಡಿನ ಅಭಿಮಾನಿಗಳು ಕೂಡ ಟಗರು ಚಿತ್ರವನ್ನ ಒಪ್ಪಿಕೊಂಡು ಎಂಜಾಯ್ ಮಾಡ್ತಿದ್ದಾರೆ.
ಡಾಲಿ-ಸೂರಿಯ ಈ ಫೋಟೋ ಹಿಂದಿದೆ ರೋಚಕ ಕಥೆ.!

ವಿದೇಶದಲ್ಲಿ ನಿಲ್ಲದ ಅಬ್ಬರ
ಮಾರ್ಚ್ 8 ರಿಂದ ವಿದೇಶದಲ್ಲಿ ಬಿಡುಗಡೆಯಾಗಿರುವ ಟಗರು ಚಿತ್ರಕ್ಕೆ ಅಲ್ಲಿಯೂ ಅಭೂತಪೂರ್ವ ಗೆಲುವು ಸಿಕ್ಕಿದೆ. ಯುಎಸ್ ಎ ರಾಷ್ಟ್ರದಲ್ಲಿ ಎರಡನೇ ವಾರವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಸುಕ್ಕ ಸೂರಿಯ ಸುಕ್ಕ ಸ್ಟೋರಿ
ದುನಿಯಾ ಸೂರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಧನಂಜಯ್ ಮತ್ತು ವಸಿಷ್ಠ ಸಿಂಹ ಖಳನಾಯಕರಾಗಿ ಅಬ್ಬರಿಸಿದ್ದಾರೆ. ಮಾನ್ವಿತಾ ಹರೀಶ್ ಮತ್ತು ಭಾವನಾ ಇಬ್ಬರು ನಾಯಕಿಯರು. ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.