For Quick Alerts
  ALLOW NOTIFICATIONS  
  For Daily Alerts

  Entertainment News Today Live: ಪ್ರ ಜ್ವಲ್ ಸಿನಿಮಾ ರಿಲೀಸ್; ಕಾಂತಾರ ಎತ್ತಂಗಡಿ

  |

  ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಹಾಲಿವುಡ್‌ ಒಟಿಟಿ ಒಟ್ಟಾರೆ ಮನೊರಂಜನಾ ಲೋಕದ ಪ್ರತಿ ಕ್ಷಣದ ಸುದ್ದಿಗಳನ್ನು ಇಲ್ಲಿ ಓದಿ...

  • Nov 16, 2022 8:10 PM
   ಪ್ರ ಜ್ವಲ್ ಸಿನಿಮಾ ರಿಲೀಸ್; ಕಾಂತಾರ ಎತ್ತಂಗಡಿ

   ಇದೇ ಶುಕ್ರವಾರ ( ನವೆಂಬರ್ 18 ) ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರ ಬೆಂಗಳೂರಿನ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಈ ಮೂಲಕ ಕಾಂತಾರ ಚಿತ್ರ ನವೆಂಬರ್ 17ರ ಗುರುವಾರದಂದು ಸಂತೋಷ್ ಚಿತ್ರಮಂದಿರದಲ್ಲಿ ತನ್ನ ಓಟವನ್ನು 49 ದಿನಗಳಿಗೆ ಅಂತ್ಯಗೊಳಿಸಲಿದ್ದು ಅರ್ಧಶತಕ ಬಾರಿಸುವುದರಿಂದ ವಂಚಿತವಾಗಲಿದೆ.

  • Nov 15, 2022 4:03 PM

   200 ಕೋಟಿ ಸುಲಿಗೆ ಪ್ರಕರಣದ ಆರೋಪಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಜಾಮೀನು ದೊರೆತಿದೆ. ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಆಪ್ತ ಬಂಧ ಹೊಂದಿದ್ದ ಜಾಕ್ವೆಲಿನ್ ಸಹ ಈ ಪ್ರಕರಣದಲ್ಲಿ ಭಾಗಿದಾರರು ಎಂದು ತನಿಖಾ ಸಂಸ್ಥೆ ಇಡಿ ಆರೋಪಿಸಿ ಚಾರ್ಜ್ ಶೀಟ್ ಸಹ ಸಲ್ಲಿಸಿತ್ತು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಪಟಿಯಾಲಾ ಕೋರ್ಟ್, 2 ಲಕ್ಷ ರು ಬಾಂಡ್ ಪಡೆದು ಜಾಕ್ವಲಿನ್‌ಗೆ ಜಾಮೀನು ನೀಡಿದೆ.

  • Nov 12, 2022 6:49 PM

   ಇತ್ತೀಚೆಗಷ್ಟೆ ಹೆಡ್ ಬುಷ್ ಚಿತ್ರದಿಂದ ದೊಡ್ಡ ಮಟ್ಟದ ವಿವಾದಕ್ಕೂ ಒಳಗಾಗಿದ್ದ ಧನಂಜಯ್ ಅಭಿನಯದ ಮುಂದಿನ ಚಿತ್ರ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಬಿಡುಗಡೆ ದಿನಾಂಕ ಈಗ ಘೋಷಣೆಯಾಗಿದೆ. ಕುಶಾಲ್ ಗೌಡ ಈ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರವನ್ನು ಡಿಸೆಂಬರ್ 30ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಕುರಿತಾಗಿ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇನ್ನು ಈ ಚಿತ್ರ ತೆಲುಗಿನಲ್ಲೂ ಸಹ ಬಿಡುಗಡೆಯಾಗಲಿದ್ದು ತೆಲುಗಿನಲ್ಲಿ 'ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ' ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

  • Nov 12, 2022 4:49 PM

   ಸದ್ಯ ಬಾಲಿವುಡ್‌ನ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಬಾಲಿವುಡ್‌ನ ಲೇಟೆಸ್ಟ್ ಸೆಲೆಬ್ರಿಟಿ ಪೋಷಕರು ಎನಿಸಿಕೊಂಡಿದ್ದಾರೆ. ಇಂದು ( ನವೆಂಬರ್ 12 ) ನಟಿ ಬಿಪಾಶಾ ಬಸು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ 43 ವರ್ಷದ ನಟಿ ಬಿಪಾಶಾ ಬಸು ಹಾಗೂ 40 ವರ್ಷದ ಕರಣ್ ಸಿಂಗ್ ಗ್ರೋವರ್ ವಿವಾಹವಾದ ಆರು ವರ್ಷಗಳ ಬಳಿಕ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

  • Nov 11, 2022 7:01 PM

   ಜನಪ್ರಿಯ ಕಿರುತೆರೆ ನಟ ಸಿದ್ಧಾಂಥ್ ವೀರ್ ಸೂರ್ಯವಂಶಿ ಇಂದು ನಿಧನ ಹೊಂದಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಅವರಿಗೆ ಹೃದಯಾಘಾತವಾಗಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರು ಅವರು ಮೃತವೆಂದು ವೈದ್ಯರು ಘೋಷಿಸಿದರು. ಸಿದ್ಧಾಂಥ್ ವೀರ್ ಸೂರ್ಯವಂಶಿ ಅಲಿಯಾಸ್ ಎಸ್‌ವಿ 'ಕಸಮ್', 'ಕಸೌಟಿ ಜಿಂದಗೀ ಕಿ' ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  • Nov 11, 2022 7:00 PM

   ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಆಪ್ತ ಸಂಬಂಧವನ್ನು ನಟಿ ಜಾಕ್ವೆಲಿನ್ ಹೊಂದಿದ್ದಾರೆ. ಸುಕೇಶ್‌ನಿಂದ ಕೋಟ್ಯಂತರ ಮೌಲ್ಯದ ಉಡುಗೊರೆ, ನಗದು ಹಣವನ್ನು ಜಾಕ್ವೆಲಿನ್ ಪಡೆದಿದ್ದಾರೆ. ಸುಕೇಶ್ ವಂಚಕ ಎಂದು ಗೊತ್ತಿದ್ದೂ ಆತನಿಂದ ಹಣ ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಇಡಿ ಆರೋಪಿಸಿದೆ.

  • Nov 11, 2022 7:00 PM

   200 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ತಾತ್ಕಾಲಿಕ ನೆಮ್ಮದಿ ದೊರಕಿದೆ. ಆಕೆಯ ಮಧ್ಯಂತರ ಜಾಮೀನು ಅವಧಿಯನ್ನು ನವೆಂಬರ್ 15 ರವರೆಗೆ ವಿಸ್ತರಿಸಲಾಗಿದೆ. ಅದೇ ದಿನದಂದು ನಟಿಯ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ನಿರಾಕರಣೆ ಆದರೆ ಬಂಧನದ ಸಾಧ್ಯತೆ ಇದೆ.

  English summary
  Get Today's (11-11-2022) Latest entertainment news, celebrity news and latest gossips. Know more about new movie releases, movie trailer, teaser, songs and celebs gossips, South Cinema News, Television News, TV Series, OTT, Celeb Photos and Instagram Posts and other entertainment buzz in Kannada.
  Friday, November 11, 2022, 18:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X